ಮುಂಬರುವ ದಿನಗಳಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ಉಳಿವುದು ಅನುಮಾನ-ಪಿ.ಎಫ್.ಐ

Source: sonews | By Staff Correspondent | Published on 13th October 2018, 3:43 PM | Coastal News | State News | Don't Miss |

ಭಟ್ಕಳ: ದೇಶದ ಪ್ರಸಕ್ತ ಸನ್ನಿವೇಶದ ಅರಾಜಕತೆಯನ್ನು ಕಂಡರೆ ಮುಂಬರುವ ದಿನಗಳಲ್ಲಿ ಪ್ರಜಾಪ್ರುಭುತ್ವ ಇರುತ್ತೋ ಇಲ್ಲವೋ ಎಂಬ ಅನುಮಾನವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕರ್ನಾಟಕ ಘಟಕಾಧ್ಯಕ್ಷ ಮುಹಮ್ಮದ್ ಸಾಖಿಬ್ ವ್ಯಕ್ತಪಡಿಸಿದರು. 

ಅವರು ಶುಕ್ರವಾರ ರಾತ್ರಿ ನವಾಯತ್ ಕಾಲೋನಿಯ ಖುಷ್‍ಹಾಲ್ ಸಭಾಂಗಣದಲ್ಲಿ ಜರಗಿದ ಕಮ್ಯುನಿಟಿ ಲೀಡರ್ಸ್ ಗೆಟ್ ಟು ಗೆದರ್ ಸಮಾರಭಂದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಕಳೆದ ಹದಿನೇಳು ವರ್ಷಗಳಲ್ಲಿ ಪಿ.ಎಫ್.ಐ ಸಂಘಟನೆ ರಾಷ್ಟ್ರವ್ಯಾಪಿಯಾಗಿ ಬೆಳೆದು ನಿಂತಿದೆ. ಲಕ್ಷಾಂತರ ಕ್ಯಾಡರ್ ಹೊಂದಿರುವ ಈ ಸಂಘಟನೆ ದೇಶದ ಬಗ್ಗೆ ಕಾಳಜಿಯನ್ನು ಹೊಂದಿದ್ದು ಪ್ರಸಕ್ತ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಅಪಾಯದಲ್ಲಿ ಅದನ್ನು ನಾವು ನೀವು ಸೇರಿ ಯಾವ ರೀತಿ ಉಳಿಸಿಕೊಳ್ಳಬೇಕು ಎಂಬ ಚಿಂತನೆಯೊಂದಿಗೆ ದೇಶವ್ಯಾಪಿ ಅಭಿಯಾನ ಹಮ್ಮಿಕೊಂಡಿದ್ದೇವೆ. ನಮ್ಮೊಂದಿಗೆ ದೇಶದ ಹಿಂದುಳಿದವರು, ತುಳಿತಕ್ಕೊಳಗಾದವರು, ದುರ್ಬಲ ವರ್ಗದವರು ದಲಿತರು ಕೈಜೋಡಿಸುತ್ತಿದ್ದು 10ಲಕ್ಷ ಜನರನ್ನು ಭೇಟಿಯಾಗುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದ ಅವರು ಕರ್ನಾಟಕದಲ್ಲಿ 1.50ಲಕ್ಷ ಜನರನ್ನು ತಲುಪುವ ಗುರಿ ಹೊಂದಿದ್ದೇವೆ ಎಂದರು. 

ಕಳೆದ ನಾಲ್ಕು ವರ್ಷದಲ್ಲಿ ದೇಶವನ್ನು ಅಧೋಗತಿಗೆ ತಲುಪಲು ಕಾರಣೀಕರ್ತರಾಗಿರುವ ಸಂಘಪರಿವಾರ ಹಾಗೂ ಮೋದಿಜಿ ಮುಂಬರುವ ಚುನಾವಣೆಯಲ್ಲಿ ಅಚ್ಛೆ ದಿನ್ ಆನೆವಾಲೆ ಹೈ ಎಂಬ ಹಳಸಿದ ಘೋಷಣೆಯೊಂದಿಗೆ ಬರುವುದಿಲ್ಲ. ಯಾಕೆಂದರೆ ಜನರಿಗೆ ಅವರು ಸುಳ್ಳಿನ ಅರಿವಾಗಿದೆ. ಮತ್ತೇ ಅದೇ ಹಸಿಸುಳ್ಳಿನೊಂದಿಗೆ ಹೋದರೆ ಜನರು ತಿರಸ್ಕರಿಸುತ್ತಾರೆಂಬುದು ಅವರಿಗೆ ಗೊತ್ತು ಆದ್ದರಿಂದ ಈಗ ಸಂಘಪರಿವಾರವು ಒಂದು ಹೊಸ ವರಸೆಯೊಂದಿಗೆ ಮೈದಾನಕ್ಕಿಳಿಯಲಿದೆ ಅದುವೇ ಹಿಂದು-ಮುಸ್ಲಿಮ್ ಕಾರ್ಡ್. ಇದರ ಮೂಲಕ ಮತ್ತೊಮ್ಮೆ ದೇಶದ ಹಿಂದೂಗಳಲ್ಲಿ ಮುಸ್ಲಿಮರನ್ನು ವಿಲನ್ ಗಳಾಗಿ ಸೃಷ್ಟಿಸಿ ಅವರನ್ನು ಹೆದರಿಸಿ ಅಧಿಕಾರವನ್ನು ಪಡೆಯುವ ಹುನ್ನಾರ ನಡೆಸಿದೆ. ಇದಕ್ಕಾಗಿ ಈಗಾಗಲೆ ಮಾಬ್ ಲಿಂಚಿಂಗ್, ಗೋರಕ್ಷಾ, ತ್ರೀವಳಿ ತಲಾಖ್ ಮತ್ತಿತರ ಇಸ್ಯೂಗಳ ಸ್ಯಾಂಪಲ್ ಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಭಾರಿ ಗಲಭೆಗಳನ್ನು ನಡಸುವ ಹುನ್ನಾರದಲ್ಲಿದ್ದು ನಾವು ಇದಕ್ಕಾಗಿ ಹೆದರಬೇಕಾಗಿಲ್ಲ. ಏಕೆಂದರೆ ನಷ್ಟ ಎರಡೂ ಕಡೆ ಆಗಲಿದೆ ಎಂದರು. 

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಶಿರೂರಿನ ಮೌಲಾನ ಮುಫ್ತಿ ಮುಅಝ್ಝಮ್ ಮಾತನಾಡಿ, ಮುಸ್ಲಿಮ ದೊರೆಗಳ ಕಾಲದಲ್ಲಿ ಸುವಾರ್ಣಾಕ್ಷರಗಳಿಂದ ಬರೆಯಲ್ಪಟ್ಟಿದ್ದ ಭಾರತ ಇತಿಹಾಸ ಸ್ವಾತಂತ್ರ್ಯನಂತರದ ಸೋ ಕಾಲ್ಡ್ ಸೆಕ್ಯುಲರ್ ಪಕ್ಷಗಳು ಮಣ್ಣುಪಾಲು ಮಾಡಿದ್ದು ಪ್ರಸಕ್ತ ಕೇಂದ್ರ ಸರ್ಕಾರ ದೇಶದ ಮಾನವನ್ನು ಅಂಬಾನಿ ದೊರೆಗಳ ಮೂಲಕ ಹರಾಜಿಗೆ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ವಾತಂತ್ರ್ಯದ ನಂತರದ ದಿನಗಳಿಂದ ಮುಸ್ಲಿಮರನ್ನು ಕಡೆಗಣಿಸುತ್ತ ಬಂದಿರುವ ಸೆಕ್ಯುಲರ್ ಪಕ್ಷಗಳಿಂದ ನ್ಯಾಯಾ ಬಯಸುವುದು ಮೂರ್ಖತನವಾದೀತು, ಕಳೆದ 70ವರ್ಷಗಳಿಂದ ಮುಸ್ಲಿಮರನ್ನು ತುಷ್ಟೀಕರಣಗೊಳಿಸುತ್ತ ಅವರ ಬಾಯಿಯಲ್ಲಿ ಲಾಲಿಪೋಪ್ ನೀಡುವ ಕೆಲಸ ಮಾಡಿವೆ. ಅನ್ಯಾಯ, ಅತ್ಯಾಚಾರಗಳಿಂದ ನಲುಗಿದ ಮುಸ್ಲಿಮ ಸಮುದಾಯ ಈಗ ಯಾರಿಂದಲೂ ನ್ಯಾಯಾವನ್ನು ಬಯಸದು. ತಮ್ಮ ವಿಫಲತೆಯನ್ನು ಮರೆಮಾಚಿಕೊಳ್ಳಲು ಮುಸ್ಲಿಮ್ ಸಮುದಾಯಗಳ ಮೇಲೆ ಗೂಬೆ ಕೂರಿಸುವಂತೆ ವ್ಯವಸ್ಥಿತ ಷಡ್ಯಂತ್ರಗಳು ಈ ದೇಶದಲ್ಲಿ ನಡೆಯುತ್ತಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದರು. 

ವೇದಿಕೆಯಲ್ಲಿ ಭಟ್ಕಳ ಪಿ.ಎಫ್.ಐ ಅಧ್ಯಕ್ಷ ಅಬ್ದುಲ್ ಕರೀಮ್, ಜಿಲ್ಲಾಧ್ಯಕ್ಷ ಮುಹಮ್ಮದ್ ಹನೀಫ್ ಗಂಗೋಳಿ ಉಪಸ್ಥಿತರಿದ್ದರು. ಸಿರಾಜುದ್ದೀನ್ ಬಂಗಾಲಿ ಕಾರ್ಯಕ್ರಮ ನಿರೂಪಿಸಿದರು. ತೌಸೀಫ್ ಬ್ಯಾರಿ ಧನ್ಯವಾದ ಅರ್ಪಿಸಿದರು. 

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...