ಮನೆ ಮನೆಗೆ ಲಸಿಕಾ ಮಿತ್ರ : ಜಿಲ್ಲೆಯಲ್ಲಿ ಹೆಚ್ಚಳವಾಯಿತು ಲಸಿಕೆ ಪಡೆಯುವವರ ಸಂಖ್ಯೆ

Source: SO News | By Laxmi Tanaya | Published on 5th December 2021, 10:11 PM | Coastal News | Don't Miss |

ಉಡುಪಿ : ಕೋವಿಡ್ ನಿಂದ ಗರಿಷ್ಠ ಸುರಕ್ಷತೆ ಪಡೆಯಲು 2 ಡೋಸ್ ಲಸಿಕೆಯನ್ನು ಪಡೆಯುವುದು ಅಗತ್ಯವಾಗಿದ್ದು, ಈಗಾಗಲೇ ಮೊದಲನೇ ಡೋಸ್ ಪಡೆದವರು ,ತಮ್ಮಲ್ಲಿ ರೋಗ ನಿರೋಧಕ ಶಕ್ತಿ ಅಧಿಕಗೊಂಡಿದ್ದು, ಕೋವಿಡ್ ಸೋಂಕು ತಗುಲಿದರೂ ನಮಗೆ ಯಾವುದೇ ಅಪಾಯವಿಲ್ಲ ,ಎರಡನೇ ಡೋಸ್ ಪಡೆಯಬೇಕಾಗಿಲ್ಲ ಎಂಬ ಭಾವನೆಯಿಂದ , ಮೊದಲ ಡೋಸ್ ಪಡೆದು ಅವಧಿ ಮೀರಿದ್ದರೂ ಲಸಿಕಾ ಕೇಂದ್ರಗಳಿಗೆ ಬರುತ್ತಿರಲಿಲ್ಲ ಆದರೆ ಜಿಲ್ಲಾಡಳಿತ ಮನೆ ‘ಮನೆಗೆ ಲಸಿಕಾ ಮಿತ್ರ ಕಾರ್ಯಕ್ರಮ ಆರಂಭಿಸಿ, ಲಸಿಕೆ ಪಡೆಯದವರ ಮಾಹಿತಿ ಸಂಗ್ರಹಿಸಿ, ಅವರ ಮನವೊಲಿಸಿ ಲಸಿಕೆ ನೀಡುತ್ತಿರುವುದರಿಂದ ಒಂದು ವಾರದಿಂದ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಪಡೆಯುವವರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ.

ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರಲ್ಲಿ ಲಸಿಕೆ ಪಡೆಯದ ಎಲ್ಲರಿಗೂ ಲಸಿಕೆ ನೀಡುವ ಉದ್ದೇಶದಿಂದ , ಲಸಿಕಾ ಮಿತ್ರರು ಕಾರ್ಯಕ್ರಮವನ್ನು ನವೆಂಬರ್ 22 ರಿಂದ 30 ರವರಗೆ ಜಿಲ್ಲೆಯ ಪ್ರತೀ ಮನೆಗಳನ್ನು ಜಿಲ್ಲೆಯ ಮತದಾರರ ಪಟ್ಟಿಯೊಂದಿಗೆ ಭೇಟಿ ನೀಡುವ ಮೂಲಕ , ಲಸಿಕೆ ಪಡೆದಿರುವ ಮತ್ತು ಪಡೆಯದಿರುವವರ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಜಿಲ್ಲೆಯ ಮತದಾರರ ಪಟ್ಟಿಯ ಪ್ರಕಾರ ಜಿಲ್ಲೆಯ 158 ಗ್ರಾಮ ಪಂಚಾಯತ್ ಗಳ 1111 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಒಟ್ಟು 1011885 ಮಂದಿ 18 ವರ್ಷ ಮೇಲ್ಪಟ್ಟವರಿದ್ದು, ಹೊರ ಜಿಲ್ಲೆ/ರಾಜ್ಯ/ದೇಶದಲ್ಲಿ 96377 ಮಂದಿ ಇದ್ದಾರೆ. ಮೃತಪಟ್ಟವರು ಮತ್ತು ಜಿಲ್ಲೆಯಿಂದ ಹೊರಗಿರುವವರನ್ನು ಹೊರತುಪಡಿಸಿದರೆ ಒಟ್ಟು ಪ್ರಸ್ತುತ 897728 ಮಂದಿ ಪ್ರಥಮ ಡೋಸ್ ಪಡೆಯುವ ಅರ್ಹ ನಾಗರೀಕರಿದ್ದು, ಇದರಲ್ಲಿ 870423 ಮಂದಿ ಈಗಾಗಲೇ ಪ್ರಥಮ ಡೋಸ್ , 738220 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದು, 27305 ಮಂದಿ ಪ್ರಥಮ ಡೋಸ್ ಮತ್ತು 132203 ಮಂದಿ ಎರಡನೇ ಡೋಸ್ ಪಡೆಯಲು ಬಾಕಿ ಇದ್ದಾರೆ ಎಂದು ಗುರುತಿಸಲಾಗಿದೆ. 

ಜಿಲ್ಲೆಯಲ್ಲಿ ನವೆಂಬರ್ 26 ಕ್ಕೆ 1020 ಮಂದಿ ಪ್ರಥಮ ಡೋಸ್ ,11201 ಮಂದಿ ಎರಡನೇ ಡೋಸ್. 27 ಕ್ಕೆ 978 ಮಂದಿ ಪ್ರಥಮ ಡೋಸ್, 8077 ಮಂದಿ ಎರಡನೇ ಡೋಸ್, 28 ಕ್ಕೆ 512 ಮಂದಿ ಪ್ರಥಮ ಡೋಸ್, 3668 ಮಂದಿ ಎರಡನೇ ಡೋಸ್,29 ಕ್ಕೆ 1825 ಮಂದಿ ಪ್ರಥಮ ಡೋಸ್, 12898 ಎರಡನೇ ಡೋಸ್,30 ಕ್ಕೆ 1650 ಮಂದಿ ಪ್ರಥಮ ಡೋಸ್, 10216 ಎರಡನೇ ಡೋಸ್,ಡಿಸೆಂಬರ್ 1 ಕ್ಕೆ ಮಂದಿ 2503 ಪ್ರಥಮ ಡೋಸ್, 13973 ಎರಡನೇ ಡೋಸ್,ಡಿ. 2 ಕ್ಕೆ 1471 ಮಂದಿ ಪ್ರಥಮ ಡೋಸ್, 6878 ಮಂದಿ ಎರಡನೇ ಡೋಸ್ ,ಡಿ.3 ಕ್ಕೆ 1681 ಮಂದಿ ಪ್ರಥಮ ಡೋಸ್, 8408 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಒಂದೇ ವಾರದಲ್ಲಿ ಜಿಲ್ಲೆಯ ಪ್ರಥಮ ಡೋಸ್ ಲಸಿಕೆ ಪ್ರಮಾಣ 93% ನಿಂದ 94.02 % ಗೆ ಏರಿಕೆಯಾಗಿದ್ದು ಈ ಅವಧಿಯಲ್ಲಿ 11620 ಮಂದಿ ಹಾಗೂ ಎರಡನೇ ಡೋಸ್ ಲಸಿಕೆ ಪಡೆಯುವವರ ಪ್ರಮಾಣ 67% ನಿಂದ 72% ಗೆ ಏರಿಕೆಯಾಗಿದ್ದು, 64118 ಮಂದಿ ಲಸಿಕೆ ಪಡೆದಿದ್ದಾರೆ. ಜಿಲ್ಲೆಯಲ್ಲಿ ಪ್ರಥಮ ಡೋಸ್ ಲಸಿಕೆ ಪಡೆದು ಹೊರ ಜಿಲ್ಲೆ/ ರಾಜ್ಯಗಳಿಗೆ ತೆರಳಿರುವ ನಾಗರೀಕರು ತಾವು ಇರುವಲ್ಲಿಯೇ 2 ನೇ ಡೋಸ್ ಲಸಿಕೆ ಪಡೆಯಬೇಕು, ಇದುವರೆಗೂ ಪ್ರಥಮ ಡೋಸ್ ಪಡೆಯಲು ಬಾಕಿ ಇರುವ ಹಾಗೂ ಎರಡನೇ ಡೋಸ್ ಪಡೆಯಲು ಅರ್ಹರಿರುವ ಸಾರ್ವಜನಿಕರು ಆದ್ಯತೆಯ ಮೇಲೆ ಲಸಿಕೆ ಪಡೆದರೆ ಉಡುಪಿ ಜಿಲ್ಲೆಯ ಲಸಿಕಾಕರಣದಲ್ಲಿ 100% ಸಾಧನೆ ಮಾಡಲು ಸಾಧ್ಯವಾಗುತ್ತದೆ.

  ಉಡುಪಿ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೂ 2 ಡೋಸ್ ಕೋವಿಡ್ ಲಸಿಕೆ ನೀಡಿ ಅವರನ್ನು ಕೋವಿಡ್ ನಿಂದ ರಕ್ಷಿಸುವುದು ಹಾಗೂ ಜಿಲ್ಲೆಯನ್ನು ಕೋವಿಡ್ ಮುಕ್ತ ಜಿಲ್ಲೆಯನ್ನಾಗಿಸುವ ಉದ್ದೇಶದಿಂದ , ಮತದಾರರ ಪಟ್ಟಿಯ ಮೂಲಕ ಮನೆ ಮನೆ ಭೇಟಿ ನೀಡಿ ,ಲಸಿಕೆ ಪಡೆಯದವರ ಮಾಹಿತಿ ಸಂಗ್ರಹಿಸಲಾಗಿದೆ. ಇದುವರೆಗೂ ಲಸಿಕೆ ಪಡೆಯದವರ ಮನವೊಲಿಸಿ ,ಲಸಿಕೆಯ ಮಹತ್ವ ತಿಳಿಸಿ ಲಸಿಕೆ ನೀಡಲಾಗುತ್ತಿದೆ. ಎಲ್ಲಾ ಸಮುದಾಯಗಳ ಮುಖಂಡರು , ಸಂಘ ಸಂಸ್ಥೆಗಳೂ ಹಾಗೂ ಸಾರ್ವಜನಿಕರು ಉತ್ತಮ ಸಹಕಾರ ನೀಡುತ್ತಿದ್ದಾರೆ. ಕೂಲಿ ಕಾರ್ಮಿಕರು ಲಸಿಕೆ ಪಡೆಯಲು ಅನುಕೂಲವಾಗುವಂತೆ ಭಾನುವಾರದಂದು ವಿಶೇಷ ಲಸಿಕಾ ಶಿಬಿರ ಆಯೋಜಿಸಲಾಗುತ್ತಿದೆ, ನಮ್ಮ ಜಿಲ್ಲೆಯು ಶೀಘ್ರದಲ್ಲಿ ಲಸಿಕಾಕರಣದಲ್ಲಿ 100% ಗುರಿ ತಲುಪಲಿದೆ ಎಂದು‌ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.    ಹೇಳಿದರು.   

Read These Next

ತಿಂಗಳಾಂತ್ಯದಲ್ಲಿ ಕೋವಿಡ್ ಮೊದಲ ಡೋಸ್ ಪೂರ್ಣಗೊಳಿಸಲು ಮುಖ್ಯಮಂತ್ರಿಗಳ ಕಟ್ಟುನಿಟ್ಟಿನ ಸೂಚನೆ

ಮಂಗಳೂರು: ತಾಲೂಕಿನ ಉಳ್ಳಾಲ, ಕೋಟೆಕಾರು, ಸೋಮೇಶ್ವರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇದೂವರೆಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆಯದೇ ...

ನಾರಾಯಣಗುರುಗಳ ಸ್ಥಬ್ಧಚಿತ್ರಕ್ಕೆ ಅವಕಾಶ ಕೋರಿ ದಕ ಜಿಲ್ಲಾ ಯುವ ಜೆಡಿಎಸ್‌ ವತಿಯಿಂದ ಪ್ರಧಾನಿಗೆ ಮನವಿ

ಮಂಗಳೂರು: ಬ್ರಹ್ಮ ಶ್ರೀ ನಾರಾಯಣ ಗುರುಗಳ ಮೂರ್ತಿ ಇರುವ ಸ್ಥಬ್ದ ಚಿತ್ರವನ್ನು ಕೇಂದ್ರ ಗಣರಾಜ್ಯೋತ್ಸವದ ಆಯ್ಕೆ ಸಮಿತಿ ...

ಬ್ರಹ್ಮಶ್ರೀ ನಾರಾಯಣ ಗುರು ಸ್ತಬ್ಧಚಿತ್ರ ನಿರಾಕರಣೆ ಖಂಡಿಸಿ ಯುವ ಕಾಂಗ್ರೆಸ್ ಕಾಲ್ನಡಿಗೆ ಜಾಥಾ

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೇಂದ್ರ ಸರಕಾರ ಅವಕಾಶ ...

ಜ.20ರ ಮುರುಡೇಶ್ವರ ಬ್ರಹ್ಮ ರಥೋತ್ಸವ ಆಚರಣೆ; ಮತ್ತೊಂದು ನಿಯಮ ಪ್ರಕಟಿಸಿದ ಎಸಿ ಮಮತಾದೇವಿ

ಕೊರೊನಾ ಎಂಬ ಮಹಾಮಾರಿ ಹೇಗೆ ಅನಿರೀಕ್ಷಿತವಾಗಿ ಒಕ್ಕರಿಸಿ ಜನರಲ್ಲಿ ಆತಂಕ ಸೃಷ್ಟಿಸಿತೋ, ರೂಪಾಂತರಗೊಳ್ಳುತ್ತ ಹೊಸ ಹೆಸರಿನಲ್ಲಿ ...

ತಿಂಗಳಾಂತ್ಯದಲ್ಲಿ ಕೋವಿಡ್ ಮೊದಲ ಡೋಸ್ ಪೂರ್ಣಗೊಳಿಸಲು ಮುಖ್ಯಮಂತ್ರಿಗಳ ಕಟ್ಟುನಿಟ್ಟಿನ ಸೂಚನೆ

ಮಂಗಳೂರು: ತಾಲೂಕಿನ ಉಳ್ಳಾಲ, ಕೋಟೆಕಾರು, ಸೋಮೇಶ್ವರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇದೂವರೆಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆಯದೇ ...

ನಾರಾಯಣಗುರುಗಳ ಸ್ಥಬ್ಧಚಿತ್ರಕ್ಕೆ ಅವಕಾಶ ಕೋರಿ ದಕ ಜಿಲ್ಲಾ ಯುವ ಜೆಡಿಎಸ್‌ ವತಿಯಿಂದ ಪ್ರಧಾನಿಗೆ ಮನವಿ

ಮಂಗಳೂರು: ಬ್ರಹ್ಮ ಶ್ರೀ ನಾರಾಯಣ ಗುರುಗಳ ಮೂರ್ತಿ ಇರುವ ಸ್ಥಬ್ದ ಚಿತ್ರವನ್ನು ಕೇಂದ್ರ ಗಣರಾಜ್ಯೋತ್ಸವದ ಆಯ್ಕೆ ಸಮಿತಿ ...

ಬ್ರಹ್ಮಶ್ರೀ ನಾರಾಯಣ ಗುರು ಸ್ತಬ್ಧಚಿತ್ರ ನಿರಾಕರಣೆ ಖಂಡಿಸಿ ಯುವ ಕಾಂಗ್ರೆಸ್ ಕಾಲ್ನಡಿಗೆ ಜಾಥಾ

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೇಂದ್ರ ಸರಕಾರ ಅವಕಾಶ ...