15 ದಿನಗಳಲ್ಲಿ ನಾಲ್ಕು ಚಿನ್ನದ ಪದಕ ಗೆದ್ದ ಹಿಮಾ ದಾಸ್​

Source: S.O. News Service | Published on 18th July 2019, 8:04 PM | National News | Don't Miss |

ನವದೆಹಲಿ: ಭಾರತದ ಮಿಂಚಿನ ಓಟಗಾರ್ತಿ ಹಿಮಾ ದಾಸ್​ ಕೇವಲ 15 ದಿನಗಳ ಅಂತರದಲ್ಲಿ ನಾಲ್ಕನೇ ಅಂತಾರಾಷ್ಟ್ರೀಯ ಸ್ವರ್ಣ ಪದಕ ಗೆದ್ದಿದ್ದಾರೆ.
ಜೆಕ್​ ಗಣರಾಜ್ಯದಲ್ಲಿ ನಡೆಯುತ್ತಿರುವ ಟಬೋರ್​ ಅಥ್ಲೆಟಿಕ್ಸ್​​​ ಮೀಟ್​ನಲ್ಲಿ 200 ಮೀ. ವಿಭಾಗದಲ್ಲಿ ಹಿಮಾ ದಾಸ್​ ಚಿನ್ನದ ಪದಕ ಜಯಿಸಿದ್ದಾರೆ. 23.25 ಸೆಕೆಂಡ್​ಗಳಲ್ಲಿ ರೇಸ್​ ಪೂರ್ಣಗೊಳಿಸಿದ ಹಿಮಾ ದಾಸ್​ ಹಳದಿ ಲೋಹಕ್ಕೆ ಮುತ್ತಿಕ್ಕಿದರು.
19 ವರ್ಷದ ಓಟಗಾರ್ತಿ ಹಿಮಾ ದಾಸ್​ ಜುಲೈ 2 ರಂದು ಪೋಲೆಂಡ್​ನಲ್ಲಿ ನಡೆದ ಪೊಜ್ನಾನ್​ ಅಥ್ಲೆಟಿಕ್ಸ್​ ಗ್ರಾಂಡ್​ ಪ್ರಿಕ್ಸ್​ನಲ್ಲಿ 200 ಮೀ. ಸ್ಪರ್ಧೆಯಲ್ಲಿ 23.65 ಸೆಕೆಂಡ್​ಗಳಲ್ಲಿ ಅಂತಿಮ ಗೆರೆ ದಾಟಿ ಚಿನ್ನ ಗೆದ್ದಿದ್ದರು. ಜುಲೈ 7 ರಂದು ಪೋಲೆಂಡ್​ನಲ್ಲಿ ನಡೆದಿದ್ದ ಕುಟ್ನೋ ಅಥ್ಲೆಟಿಕ್ಸ್​ ಮೀಟ್​ನಲ್ಲಿ 200 ಮೀ. ದೂರವನ್ನು 23.97 ಸೆಕೆಂಡ್​ಗಳಲ್ಲಿ ಕ್ರಮಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.
ಆ ನಂತರ ಕಳೆದ ಶನಿವಾರ ಜುಲೈ 13 ರಂದು ಜೆಕ್ ಗಣರಾಜ್ಯದಲ್ಲಿ ನಡೆದ ಕ್ಲೆಡ್ನೊ ಮೆಮೋ ರಿಯಲ್ ಅಥ್ಲೆಟಿಕ್ಸ್ ಕೂಟದಲ್ಲಿ 200 ಮೀಟರ್ ವಿಭಾಗದಲ್ಲಿ ಹಿಮಾ 23.43 ಸೆಕೆಂಡ್​ಗಳಲ್ಲಿ ಅಗ್ರಸ್ಥಾನಿಯಾಗಿ ಚಿನ್ನಕ್ಕೆ ಕೊರಳೊಡ್ಡಿದರು. ಅದರೊಂದಿಗೆ ಮೊಹಮದ್ ಅನಾಸ್ ರಾಷ್ಟ್ರೀಯ ದಾಖಲೆಯೊಂದಿಗೆ ವಿಶ್ವಚಾಂಪಿಯನ್​ಷಿಪ್​ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.

Read These Next

ಜಮ್ಮು ಮತ್ತು ಕಾಶ್ಮೀರವನ್ನು ಕಳಚಿ ಹಾಕಿರುವ ನಡೆ: ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವದ ಮೇಲೆ ಸರ್ವಾಧಿಕಾರಶಾಹಿ ಪ್ರಹಾರ : ಪ್ರಕಾಶ್ ಕಾರಟ್

ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರವನ್ನು ವಿಲೀನಗೊಳಿಸುವ ಬಿಜೆಪಿ ಸರಕಾರದ ಕ್ರಮಕ್ಕೆ ವಿವಿಧ ಜನ ...