ಮುರ್ಡೇಶ್ವರ ಲಯನ್ಸ್ ಕ್ಲಬ್ ನಿಂದ ನೆರೆ ಸಂತೃಸ್ತರಿಗೆ ನೆರವು 

Source: sonews | By Staff Correspondent | Published on 11th August 2019, 3:59 PM | Coastal News | Don't Miss |

ಭಟ್ಕಳ: ತಾಲೂಕಿನ ಮುರ್ಡೇಶ್ವರದ ಲಯನ್ಸ್ ಕ್ಲಬ್ ವತಿಯಿಂದ ಹೊನ್ನಾವರ ಹಾಗೂ ಕುಮಟಾ ತಾಲೂಕಿನ ಪ್ರವಾಹ ಪೀಡಿತ ಕುಟುಂಬಗಳಿಗೆ 1,53,000ರೂ. ಮೌಲ್ಯದ ದಿನುಪಯುಕ್ತ ಸಾಮಗ್ರಿಗಳನ್ನು ವಿತರಿಸುವ ಮೂಲಕ ತಮ್ಮ ಸಾಮಾಜಿಕ ಸೇವೆಗೆ ಸಾಕ್ಷಿಯಾಯಿತು. 

ಹೊನ್ನಾವರ ಹಾಗೂ ಕಮಟಾ ತಾಲೂಕಿನ ಕಡಗೇರಿ, ಕರ್ವಾ, ಹುಡಗೋಡ್, ಹಾಡಗೇರಿ, ಹುಡಗೋಡ್ ಅಂಗನವಾಡಿ ಗಂಜಿಕೇಂದ್ರಗಳಿಗೆ ಹಾಗೂ ಕುಮಟಾ ತಾಲೂಕಿನ ಬೊಗ್ರಿಬೈಲ್, ಬೊಗ್ರಿಬೈಲ್ ಹರಿಜನಕೇರಿ, ಮೂರೂರು, ದೀವಗಿ, ತಂಡ್ರಕುಳಿ, ಅಳಕೋಡ, ಮಾಸೂರು, ಹೆಗಡೆ, ತಾಡುಕಟ್ಟಾ ವ್ಯಾಪ್ತಿಯ 320 ಕುಟುಂಬಗಳ 1188 ಪ್ರವಾಹ ಸಂತೃಸ್ತ ಜನರಿಗೆ ಚಾದರ್, ನೈಟಿ, ಲುಂಗಿ, ಮಕ್ಕಳ ಡ್ರೆಸ್, ಟವೆಲ್, ಸೀರೆ, ಅಕ್ಕಿ, ಬೇಳೆ, ಸಕ್ಕರೆ, ಬಿಸ್ಕೀಟ್, ವಾಟರ್ ಬಾಟಲ್, ಬಟ್ಟಲು, ಲೋಟ, ಸೊಳ್ಳೆಬತ್ತಿ, ಸೋಪ್, ಮೇಣದಬತ್ತಿ, ಪಾತ್ರೆ ಸೋಪ್, ನೀರುಳ್ಳಿ, ತೆಂಗಿನಕಾಯಿ, ಮ್ಯಾಗಿ ನೂಡಲ್ಸ್‍ಗಳನ್ನು ನೀಡಲಾಯಿತು. 

ಈ ವೇಳೆ ನಿಕಟಪೂರ್ವ ಅಧ್ಯಕ್ಷ ನಾಗರಾಜ ಭಟ್, ಅಧ್ಯಕ್ಷರಾದ ರಾಮದಾಸ ಶೇಟ್, ಕಾರ್ಯದರ್ಶಿ ನಾಗೇಶ್ ಮಡಿವಾಳ, ಖಜಾಂಚಿ ಜಗದೀಶ್ ಜೈನ್ ಲಯನ್ಸ್ ಜೋನಲ್ ಚೇರ್ ಪರ್ಸನ್ ಎಮ್.ವಿ ಹೆಗಡೆ, ಮುರ್ಡೇಶ್ವರ ಲಯನ್ಸ್ ಕ್ಲಬ್ ಸದಸ್ಯರಾದ ಬಾಬು ಮೊಗೇರ್, ಡಾ.ಸುನೀಲ್ ಜತ್ತನ್, ಗೌರೀಶ ನಾಯ್ಕ, ಡಾ.ವಾಧಿರಾಜ ಭಟ್, ಡಾ.ಆಯ್.ಆರ್ ಭಟ್, ಡಾ.ಹರಿಪ್ರಸಾದ ಕಿಣಿ, ಮಂಜುನಾಥ ನಾಯ್ಕ, ಮಂಜುನಾಥ ದೇವಡಿಗ, ಶಿವಾನಂದ ದೈಮನೆ, ಗೌರೀಶ ಟಿ ನಾಯ್ಕ. ವಿಶ್ವನಾಥ ಕಾಮತ, ದಯಾನಂದ ಮೆಣಸಿನಮನೆ, ಯಾದವ್ ಮೊಗೇರ್, ತಿಲಕ್ ರಾವ್, ನಮೃತಾ ರಾವ್, ಬಸ್ತ್ಯಾಂವ್ ಡಿಕೋಸ್ತಾ, ಗಣೇಶ ಹೆಗಡೆ, ಎ.ಎನ್ ಶೆಟ್ಟಿ, ರಾಜು ಮೊಗೇರ್, ಈಶ್ವರ್ ನಾಯ್ಕ, ಗಜಾನನ ಶೆಟ್ಟಿ,ಕಿರಣ ಮಾನಕಾಮೆ, ನಾಗರಾಜ ಕಾಮತ, ವಿಶ್ವನಾಥ ಮಡಿವಾಳ. ಕಿರಣ ಕಾಯ್ಕಿಣಿ, ಜಯಪ್ರಕಾಶ ಕರ್ಕಿಕರ್, ಮಂಜುನಾಥ ಕೋಡಿಹಿತ್ತಲ್, ಪಾಂಡುರಂಗ ಅಳ್ವೇಗದ್ದೆ, ಕೃಷ್ಣ ನಾಯ್ಕ, ಸುಬ್ರಾಯ ನಾಯ್ಕ, ಗಜಾನನ ಭಟ್ ಮೊದಲಾದವರು ಹಾಜರಿದ್ದು ಸಹಕರಿಸಿದರು. 

ನೀಡಿದ ಸಾಮಗ್ರಿಗಳ ವಿವರ : ಚಾದರ್250, ನೈಟಿ 100, ಲುಂಗಿ 100, ಸಣ್ಣಮಕ್ಕಳ ಡ್ರೆಸ್ (ಗಂಡು) 30, ಸಣ್ಣಮಕ್ಕಳ ಡ್ರೆಸ್ (ಹೆಣ್ಣು) 30, ಅಕ್ಕಿ 650ಕೆಜಿ, ಬೇಳೆ 30ಕೆಜಿ, ಸಕ್ಕರೆ 10ಕೆಜಿ, ಬಿಸ್ಕೀಟ್ 1000ಪ್ಯಾಕೇಟ್, ವಾಟರ್‍ಬಾಟ¯ 300ಲೀ, ಬಟ್ಟಲು,ಲೋಟ40, ಸೊಳ್ಳೆಬತ್ತಿ 15, ಸೋಪ್30, ಮೇಣದಬತ್ತಿ 10ಪ್ಯಾಕೇಟ್, ಪಾತ್ರೆಸೋಪ್ 10, ನೀರುಳ್ಳಿ 20ಕೆಜಿ, ಬಾತ್‍ಟವೆಲ್ 175, ತೆಂಗಿನಕಾಯಿ 50, ಮ್ಯಾಗಿ ನೂಡಲ್ಸ್ 125ಪ್ಯಾಕೇಟ್, ಸೀರೆ 50.

Read These Next

ಪ್ರಾರ್ಥನಾ ಪ್ರತಿಷ್ಠಾನ ಹಾಗೂ ಆನಂದಾಶ್ರಮ ಪ.ಪೂ. ಕಾಲೇಜಿನ ಸಹಯೋಗದಲ್ಲಿ ರಸಪ್ರಶ್ನೆ ಕಾರ್ಯಕ್ರಮ ಸಂಪನ್ನ 

ಪ್ರಾರ್ಥನಾ ಪ್ರತಿಷ್ಠಾನ ಹಾಗೂ ಆನಂದಾಶ್ರಮ ಪ.ಪೂರ್ವ ಕಾಲೇಜಿನ ಸಹಯೋಗದಲ್ಲಿ ಭಟ್ಕಳ ತಾಲೂಕಿನ ಹೈಸ್ಕೂಲಿನ ಪ್ರೌಢಶಾಲಾ ...