ಗುರು-ಶಿಷ್ಯರ ಪರಂಪರೆ ಭದ್ರವಾದ ಸಂಬಂಧ -. ಪ್ರೊ ಎಚ್.ಡಿ. ನಾರಾಯಣಸ್ವಾಮಿ

Source: SO News | By Laxmi Tanaya | Published on 7th September 2020, 7:20 PM | Coastal News | Don't Miss |

ಮಂಗಳೂರು - ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಕರ ಸಂಘವು ಅಂತರ್ಜಾಲದ ಝೂಮ್ ಕ್ಲವ್ಡ್ ಆ್ಯಪ್ ನ ಮೂಲಕ ಶಿಕ್ಷಕರ ದಿನಾಚರಣೆಯನ್ನು  ಆಚರಿಸಿತು.

   ಅಂತರ್ಜಾಲದ ಆನಲೈನ್ ಮೂಲಕ ರಾಷ್ತ್ರೀಯ ವಿಚಾರ ಮಂಡನೆಯ ವೆಬಿನಾರ್‍ನ  ಶಿಕ್ಷಕರ ದಿನಾಚರಣೆಯಂದು ವಿಶ್ವವಿದ್ಯಾಲಯದ ಶಿಕ್ಷಕರ ಸಂಘವು ನಡೆಸಿರುವುದು ವಿಶೇಷವಾಗಿದೆ.    ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಕೆ.ಸಿ. ವೀರಣ್ಣ ಅವರು ಭಾರತರತ್ನ ಸರ್ವಪಲ್ಲಿ ರಾಧಾಕೃಷ್ಣನ್‍ರವರ ಹುಟ್ಟುಹಬ್ಬದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶಿಕ್ಷಕರ ದಿನಾಚಾರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 ಕುಲಪತಿ ಪ್ರೊ. ಎಚ್.ಡಿ. ನಾರಾಯಣಸ್ವಾಮಿ ಮಾತನಾಡಿ, ಗುರು-ಶಿಷ್ಯರ ಸಂಬಂಧ ಭದ್ರವಾಗಿರಬೇಕಾದರೆ ವಿದ್ಯಾರ್ಥಿ ಜೀವನದಲ್ಲಿ ಕಲಿತ ವಿದ್ಯೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಲಿತ ವಿದ್ಯೆ, ಕಲಿಸಿದ ಗುರು ಮತ್ತು ಗುರುಕುಲದ ಚರಿತ್ರೆಯನ್ನು ಮೆಲುಕು ಹಾಕಿದರೆ ಶಿಕ್ಷಣದಿಂದ ಪಡೆದ ಜ್ಞಾನವೇ ನಾವೆಲ್ಲರು ಗಳಿಸಿದ ಆಸ್ತಿ ಎಂದರು.

ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಸ್. ರಾಜೇಂದ್ರ ಪ್ರಸಾದ್ ತಮ್ಮ ವಿಚಾರ ಮಂಡಿಸಿ ಬಳಿಕ ಮಾತನಾಡಿ, ಉನ್ನತ ಶಿಕ್ಷಣದಲ್ಲಿ ಇಂದಿನ ತಲೆಮಾರಿನ ಶಿಕ್ಷಕರ ಆದ್ಯತೆ ಹೇಗಿರಬೇಕೆಂದು ವಿಶ್ಲೇಷಿಸಿದರು. ಕೊರೋನಾ ಎಂಬ ಮಹಾಮಾರಿ ವೈರಾಣುವಿನಿಂದ ಶಾಲಾ-ಕಾಲೇಜುಗಳ ಕಾರ್ಯ ಸ್ಥಗಿತವಾಗಿರುವ ಈ ಸಂದರ್ಭದಲ್ಲಿ ನೂತನ ತಂತ್ರಜ್ಞಾನಗಳ ಅಳವಡಿಕೆಯ ಮೂಲಕ ಪಾಠ ಪ್ರವಚನ ಮಾಡುವ ಕರ್ತವ್ಯ ಶಿಕ್ಷಕರ ಮೇಲೆ ಮಹತ್ತರ ಜವಾಬ್ದಾರಿ ಇದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಸಂಪನ್ಮೂಲ ಅತಿಥಿಯಾಗಿ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಕೆ.ಸಿ. ವೀರಣ್ಣ, ಪುದುಚೇರಿ ರಾಜೀವ್ ಗಾಂಧಿ ಪಶುವೈದ್ಯಕೀಯ ಶಿಕ್ಷಣ ಮತ್ತು ಸಂಶೋದನಾ ಸಂಸ್ಥೆಯ ಡೀನ್ ಪ್ರೊ. ಎಸ್. ರಾಮ್ ಕುಮಾರ್ ಮಾತನಾಡಿದರು.

ಶಿಕ್ಷಕರ ಸಂಘದ ಅಧ್ಯಕ್ಷ ಡಾ. ಎಚ್.ಸಿ. ಇಂದ್ರೇಶ್ ಮಾತನಾಡಿ, ಒಬ್ಬ ಇಂಜಿನಿಯರ್ ತನ್ನ ವೃತ್ತಿಯಲ್ಲಿ ಯಾಮಾರಿದರೆ ಒಂದೆರಡು ಕಟ್ಟಡಗಳು ಬಿರುಕಾಗಬಹುದು, ಒಬ್ಬ ಡಾಕ್ಟರ್ ತನ್ನ ಪ್ರರಿಶ್ರಮದಲ್ಲಿ ತಾತ್ಸಾರ ಮಾಡಿದರೆ ಒಂದೆರಡು ಜೀವ ಹೋಗಬಹುದು ಆದರೆ ಒಬ್ಬ ಶಿಕ್ಷಕ ತನ್ನ ಜವಾಬ್ದಾರಿಯಲ್ಲಿ ಹಿಂದುಳಿದರೆ ಇಡೀ ಸಮಾಜ ಹಾಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ. ಎ.ಟಿ. ರಾಮಚಂದ್ರ ನಾಯ್ಕ  ಸ್ವಾಗತಿಸಿದರು. ಉಪಾಧ್ಯಕ್ಷ ಡಾ. ಬಿ.ಸಿ. ಗಿರೀಶ್ ನಿರೂಪಿಸಿ, ಖಜಾಂಚಿ ಪ್ರೊ ಎಸ್. ಗಂಗಾ ನಾಯ್ಕ ವಂದಿಸಿದರು. ಮೀನುಗಾರಿಕಾ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿನಿ ಕು. ಜೀವಿತಾ ಎಸ್. ಪ್ರಾರ್ಥಿಸಿದರು.
ವಿಶ್ವವಿದ್ಯಾಲಯದ ಅಧಿಕಾರಿಗಳಾದ ಸಂಶೋಧನಾ ನಿರ್ದೇಶಕರು, ವಿಸ್ತರಣಾ ನಿರ್ದೇಶಕರು, ಸ್ನಾತಕೋತ್ತರ ಶಿಕ್ಷಣ ನಿರ್ದೇಶಕರು, ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರು, ಪರಿಕ್ಷಾ ನಿಯಂತ್ರಣಾಧಿಕಾರಿಗಳು, ವಿಶ್ವವಿದ್ಯಾಲಯದ ಗ್ರಂಥಪಾಲಕರು, ಹಣಕಾಸು ನಿಯಂತ್ರಣಾಧಿಕಾರಿಗಳು, ಆಸ್ತಿ ಅಧಿಕಾರಿಗಳು, 5 ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್‍ಗಳು, 2 ಹೈನುವಿಜ್ಞಾನ ಕಾಲೇಜಿನ ಡೀನ್, 1 ಮೀನುಗಾರಿಕಾ ಮಹಾವಿದ್ಯಾಲಯದ ಡೀನ್, ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ನಿರ್ದೇಶಕರು, ವಿಶ್ವವಿದ್ಯಾಲಯದ ಅಧೀನದ ಕರ್ನಾಟಕ ರಾಜ್ಯದಲ್ಲಿರುವ ಸಾಕುಪ್ರಾಣಿ, ಹೈನುಗಾರಿಕೆ ಹಾಗೂ ಮೀನುಗಾರಿಕೆ ಸಂಶೋಧನಾ ಕೇಂದ್ರಗಳ ಮುಖ್ಯಸ್ಥರು, ವಿಸ್ತರಣಾ ಶಿಕ್ಷಣ ಘಟಕಗಳ ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಮತ್ತು ಶಿಕ್ಷಕರ ಸಂಘದ ಸದಸ್ಯರುಗಳ ಪೈಕಿ ಪ್ರಾಧ್ಯಾಪಕರು ಕಾರ್ಯಕ್ರಮದದಲ್ಲಿ ಭಾಗವಹಿಸಿದ್ದರು.

   ವಿಶ್ವವಿದ್ಯಾಲಯದ ಸುಮಾರು 8 ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು, ಹಳೇ ವಿದ್ಯಾರ್ಥಿಗಳು ಮತ್ತು ಆಹ್ವಾನಿತರು ಅಂತರ್ಜಾಲದ ಝೂಮ್ ಕ್ಲವ್ಡ್ ಆ್ಯಪ್‍ನ ವೆಬಿನಾರ್‍ನ ನೇರಪ್ರಸಾರಕ್ಕೆ ಸೇರ್ಪಡೆಯಾಗಿ ಕಾರ್ಯಕ್ರಮದ ಪ್ರಯೋಜನ ಪಡೆದರು. ಸರಿ ಸುಮಾರು 452 ಕ್ಕೂ ಹೆಚ್ಚು ಪ್ರೇಕ್ಷಕರು ಯೂಟ್ಯೂಬ್‍ನ ಕೊಂಡಿಯ ಮೂಲಕ ವೆಬಿನಾರ್‍ನ ನೇರಪ್ರಸಾರವನ್ನು ವೀಕ್ಷಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...