ಭಟ್ಕಳದಲ್ಲಿ ಬಲೆಗೆ ಬಿದ್ದ ಬೃಹದಾಕಾರದ ರೇ ಫಿಶ್ !

Source: S.O. News Service | By I.G. Bhatkali | Published on 29th October 2020, 11:37 PM | Coastal News | Don't Miss |

ಭಟ್ಕಳ: ಹವಾಮಾನ ವೈಫರೀತ್ಯದ ಸಂಕಟ ಮುಗಿಸಿ ಕಳೆದ 3-4 ದಿನಗಳಿಂದ ತಾಲೂಕಿನ ಬೋಟುಗಳು ಮೀನುಗಾರಿಕೆಯಲ್ಲಿ ತೊಡಗಿದ್ದು, ಮೀನುಗಾರರಲ್ಲಿ ಆಶಾಭಾವನೆ ಚಿಗುರೊಡೆದಿದೆ. ಬುಧವಾರ 3 ಮೀನುಗಾರಿಕಾ ಬೋಟುಗಳು ಟನ್‍ಗಟ್ಟಲೆ ರೇ ಫಿಶ್‍ಗಳನ್ನು ಹೊತ್ತು ತಂದಿದ್ದು, ಜನರಲ್ಲಿ ಕುತೂಹಲ ಮೂಡಿಸಿತು.

ಪ್ರಭಾಕರ ಖಾರ್ವಿ ಒಡೆತನದ ರಾಜಶ್ರೀ ಬೋಟಿಗೆ 700 ಕೆಜಿಗೂ ಅಧಿಕ ತೂಕದ ಒಂದು ರೇ ಫಿಶ್ ಸಿಕ್ಕಿದ್ದರೆ, ಸುಧಾಕರ ಖಾರ್ವಿ ಒಡೆತನದ ರಾಧಾಕೃಷ್ಣ ಹೆಸರಿನ ಬೋಟಿಗೆ ಸರಿಸುಮಾರು 500ಕೆಜಿಗೂ ಅಧಿಕ ತೂಕದ 12 ಹಾಗೂ ಕೇಶವ ಮೊಗೇರ ಮಾಲಕತ್ವದ ಜಯದುರ್ಗಾ ಹೆಸರಿನ ಬೋಟಿಗೆ ಸರಿಸುಮಾರು 500 ಕೆಜಿಗೂ ಅಧಿಕ ತೂಕದ 11 ರೇ ಫಿಶ್ ಸಿಕ್ಕಿದೆ. ಈ ಮೀನುಗಳು ಭಾರೀ ಗಾತ್ರ ಹಾಗೂ ತೂಕವನ್ನು ಹೊಂದಿರುವ ಕಾರಣ ಬೋಟಿನಿಂದ ಈ ಮೀನುಗಳನ್ನು ದಡಕ್ಕೆ ತರಲು ಕ್ರೇನ್‍ನ್ನು ತರಿಸಿಕೊಳ್ಳಲಾಯಿತು.

ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರು ರೇ ಫಿಶ್‍ಗಳನ್ನು ನೋಡಲು ದಡದಲ್ಲಿ ಮುಗಿ ಬಿದ್ದಿರುವುದು ಕಂಡು ಬಂತು. ಇತ್ತೀಚಿಗೆ ಮಲ್ಪೆಯಲ್ಲಿ 700ಕೆಜಿ ತೂಕದ ರೇ ಫಿಶ್ ಬೋಟಿಲ ಬಲೆಗೆ ಬಿದ್ದು ಸುದ್ದಿಯಾಗಿದ್ದನ್ನಿಲ್ಲಿ ಸ್ಮರಿಸಿಕೊಳ್ಳಬಹುದು. 
 

Read These Next

ರೂಪಾಯಿ 50 ಸಾವಿರ ಮೌಲ್ಯದ ವಿಮೆ. ಜಿ. ಶಂಕರ್ ಆರೋಗ್ಯ ಸುರಕ್ಷಾ ಕಾರ್ಡ್ ನೋಂದಣಿಗೆ ನವೆಂಬರ್ 29 ಕೊನೆಯ ದಿನ.

ಕಾರವಾರ : ಉಡುಪಿಯ‌ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ ಜಿ. ಶಂಕರ್ ರವರು ಮಣಿಪಾಲ ಸಿಗ್ನಾ ಹೆಲ್ತ್ ಗ್ರೂಪ್ ...

ರೂಪಾಯಿ 50 ಸಾವಿರ ಮೌಲ್ಯದ ವಿಮೆ. ಜಿ. ಶಂಕರ್ ಆರೋಗ್ಯ ಸುರಕ್ಷಾ ಕಾರ್ಡ್ ನೋಂದಣಿಗೆ ನವೆಂಬರ್ 29 ಕೊನೆಯ ದಿನ.

ಕಾರವಾರ : ಉಡುಪಿಯ‌ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ ಜಿ. ಶಂಕರ್ ರವರು ಮಣಿಪಾಲ ಸಿಗ್ನಾ ಹೆಲ್ತ್ ಗ್ರೂಪ್ ...

ಬೆಳೆವಿಮೆ ಫಲಾನುಭವಿಗಳ ಮಾಹಿತಿಯನ್ನು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತನ್ನಿ: ಸಚಿವ ಹೆಬ್ಬಾರ

ಕಾರವಾರ: ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು, ಬೆಳೆವಿಮೆ ಪಡೆದ ರೈತ ಫಲಾನುಭವಿಗಳ ಮಾಹಿತಿಯನ್ನು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ...

ಸ್ಮಾರ್ಟ್ ಸಿಟಿ ಕಾಮಗಾರಿ ಚುರುಕುಗೊಳಿಸಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವಕುಮಾರ್ ಸೂಚನೆ

ಶಿವಮೊಗ್ಗ : ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಚುರುಕು ಮೂಡಿಸಿ ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸುವಂತೆ ಜಿಲ್ಲಾ ...

ಹುಬ್ಬಳ್ಳಿ ನಗರದಲ್ಲಿ ಪ್ರತಿಷ್ಠಿತ ಕಂಪನಿಗಳಿಂದ‌ 6 ಸಾವಿರ ಕೋಟಿ ಬಂಡವಾಳ ಹೂಡಿಕೆ : ಸಚಿವ ಜಗದೀಶ್ ಶೆಟ್ಟರ್

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ ಸಮ್ಮೇಳನದಲ್ಲಿ ಆದ ಒಡಂಬಡಿಕೆಯಂತೆ ಪ್ರತಿಷ್ಠಿತ ಕಂಪನಿಗಳು ...