ಮಣಿಪುರದಲ್ಲಿ ತಣಿಯದ ಹಿಂಸೆ; ಐವರು ಬಲಿ

Source: Vb | By I.G. Bhatkali | Published on 6th August 2023, 12:21 PM | National News |

ಇಂಫಾಲ: ಮಣಿಪುರದ ಬಿಷ್ಣುಪುರ ಹಾಗೂ ಚುರಾಚಾಂದ್‌ಪುರ ಜಿಲ್ಲೆಗಳಲ್ಲಿ ಶನಿವಾರ ಬೆಳಗ್ಗೆ ಭುಗಿಲೆದ್ದ ಹಿಂಸಾಚಾರದಲ್ಲಿ ಐವರು ಮೃತಪಟ್ಟಿದ್ದಾರೆ. ಸಾವನ್ನಪ್ಪಿದವರಲ್ಲಿ ಮೂವರು ಮೈತೈಗಳಾಗಿದ್ದು, ಇನ್ನಿಬ್ಬರು ಕುಕಿ ಝೂe ಸಮುದಾಯದವರೆಂದು ತಿಳಿದುಬಂದಿದೆ.

ಬಿಷ್ಣುಪುರದಲ್ಲಿ ಕುಕಿ ಝೂe ಸಮುದಾಯದ ಗುಂಪೊಂದು ಮೈತೈಗಳ ಮನೆಗಳ ಮೇಲೆ ನಡೆಸಿದ ದಾಳಿಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆಂದು ಬಿಷ್ಣುಪುರದ ಜಿಲ್ಲಾಧಿಕಾರಿ ಲೂರೆಂಬಾಮ್ ವಿಕ್ರಮ್ ತಿಳಿಸಿದ್ದಾರೆ. ತರುವಾಯ ಚುರಾಚಾಂದ್‌ಪುರ ಜಿಲ್ಲೆಯಲ್ಲಿ ದುಷ್ಕರ್ಮಿಗಳ ಗುಂಪೊಂದು ಇಬ್ಬರು ಕುಕಿಗಳನ್ನು ಹತ್ಯೆಗೈದಿದೆಯೆಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

ಮೈತೈ ಪ್ರಾಬಲ್ಯದ ಬಿಷ್ಣುಪುರ ಜಿಲ್ಲೆ ಹಾಗೂ ಕುಕಿಗಳು ಅಧಿಕ ಸಂಖ್ಯೆಯಲ್ಲಿರುವ ಚುರಾಚಾಂದ್‌ಪುರ ಜಿಲ್ಲೆಯ ಪೊಲ್ ಜಾಂಗ್ ಗ್ರಾಮದ ಸುತ್ತಮುತ್ತಲಿನ ಪ್ರದೇಶದ ಆಸುಪಾಸಿನ ಸ್ಥಳಗಳಲ್ಲಿ ಶನಿವಾರ ಮುಂಜಾನೆ 4 ಗಂಟೆಯ ವೇಳೆಗೆ ಹಿಂಸಾಚಾರ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಿಷ್ಣುಪುರ ಜಿಲ್ಲೆಯ ಕ್ವಾಕ್ಕಾದಲ್ಲಿ ನಿದ್ರಿಸುತ್ತಿದ್ದ ಮುಂಜಾನೆ 5:00ರಿಂದ ಬೆಳಗ್ಗೆ 10:30 ರವರೆಗೆ ಸೀಮಿತಗೊಳಿಸಲಾಗಿದೆ. ಇದಕ್ಕೂ ಮುನ್ನ ಮುಂಜಾನೆ 5:00ರಿಂದ ಸಂಜೆ 6 ಗಂಟೆಯವರೆಗೂ ಕರ್ಥ್ಯ ಸಡಿಲಿಕೆಯಿತ್ತು.

ಈ ಮಧ್ಯೆ ಮಣಿಪುರದ 27 ವಿಧಾನಸಭಾ ಕ್ಷೇತ್ರಗಳ ಹೋರಾಟ ಸಮಿತಿಯೊಂದು ಆಯೋಜಿ ಸಿದ 24 ತಾಸುಗಳ ಸಾರ್ವತ್ರಿಕ ಮುಷ್ಕರದಿಂದಾಗಿ ಇಂಫಾಲ ಕಣಿವೆ ಪ್ರದೇಶದಲ್ಲಿ ಜನಜೀವನ ಸ್ತಬ್ದ ಗೊಂಡಿತು. ಹೆಚ್ಚಿನ ಕಡೆಗಳಲ್ಲಿ ಮಾರುಕಟ್ಟೆಗಳು ಹಾಗೂ ಅಂಗಡಿಮುಂಗಟ್ಟೆಗಳು ಮುಚ್ಚಿದ್ದವು.

ಆಗಸ್ಟ್ 4ರಂದು ಕೌಟುರ್ಕ್ ಬೆಟ್ಟ ಪ್ರದೇಶ ಗಳಲ್ಲಿ ಸ್ಥಾಪಿಸಲಾದ ಅಕ್ರಮ ಬಂಕರ್‌ಗಳನ್ನು ಭದ್ರತಾಪಡೆಗಳು ನಾಶಪಡಿಸಿವೆ. ಬಿಷ್ಣುಪುರ ಜಿಲ್ಲೆಯ ನರನ್‌ನಾದಲ್ಲಿರುವ ಭಾರತೀಯ ಮೀಸಲು ಪಡೆಯ ಬೆಟಾಲಿಯನ್‌ನ ನೆಲೆಯಿಂದ ಗುಂಪೊಂದು ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ ಘಟನೆಯ ಮರುದಿನವೇ ಸಶಸ್ತ್ರಪಡೆಗಳು ಈ ಕಾರ್ಯಾಚರಣೆ ನಡೆಸಿವೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...