ಶೌಚಗುಂಡಿಯಲ್ಲಿ ನಾಲ್ವರ ಸಾವು; ಗುಜರಾತ್‌ನಲ್ಲಿ ದಾರುಣ ಘಟನೆ; ಮೃತರು ಬಿಹಾರ ಮೂಲದ ಕಾರ್ಮಿಕರು

Source: Vb | By I.G. Bhatkali | Published on 17th November 2023, 8:40 AM | National News |

ಸೂರತ್: ಗುಜರಾತ್ ಸೂರತ್ ನಗರದ ಕಾರ್ಖಾನೆಯೊಂದರಲ್ಲಿ ಶೌಚಗುಂಡಿಗೆ ಇಳಿದ ನಾಲ್ವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ನಡೆದಿದೆ.

ಪಾಲಸಾನಾ-ಕಟೋದರಾ ರಸ್ತೆಯಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ.ಶೌಚಗುಂಡಿ ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ಇಬ್ಬರು ಕಾರ್ಮಿಕರು ಮೂರ್ಛ ತಪ್ಪಿ ಬಿದ್ದರು.

ಕೂಡಲೇ ಅವರನ್ನು ರಕ್ಷಿಸಲು ಯತ್ನಿಸಿದ ಇನ್ನಿಬ್ಬರು ಕಾರ್ಮಿಕರಿಗೂ ಬಳಲಿಕೆಯುಂಟಾಗಿ ಅವರು ಕೂಡ ಕುಸಿದುಬಿದ್ದರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಶೌಚಗುಂಡಿಯಿಂದ ನಾಲ್ವರನ್ನೂ ಮೇಲಕ್ಕೆ ತಂದು ಆಸ್ಪತ್ರೆಗೆ ಸಾಗಿಸಲಾಯಿತು. ಆಗಲೇ ಅವರೆಲ್ಲರೂ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ತಂದೆ-ಮಗ ಸೇರಿದ್ದಾರೆಂದು ಅವರು ಹೇಳಿದ್ದಾರೆ. 

ಮೃತರನ್ನು ರಾಜು ಸಿಂಗ್ ಭೋದಾನಿಯಾ(33), ಆತನ ಪುತ್ರ ಕಮಲೇಶ್(16), ಶಹಬಾಝ್ ಶೇಕ್ (20) ಹಾಗೂ ದೀಪಕ್ ಉಮಾಶಂಕರ್ (27) ಎಂದು ಗುರುತಿಸಲಾಗಿದೆ.

ಮೃತಪಟ್ಟ ನಾಲ್ವರು ಕಾರ್ಮಿಕರು ಬಿಹಾರದವರೆಂದು ಅವರು ಹೇಳಿದ್ದಾರೆ. ಕಳೆದ ಶುಕ್ರವಾರ ಗುಜರಾತ್‌ನ ಭಾವನಗರದಲ್ಲಿ ಸರಕಾರಿ ಪ್ರಯೋಗಾಲಯವೊಂದರ ಶೌಚಗುಂಡಿಗೆ ಇಳಿದ ನೈರ್ಮಲ್ಯ ಕಾರ್ಮಿಕನೊಬ್ಬ ಅಸ್ವಸ್ಥಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದನು.

2022ರ ಮಾರ್ಚ್‌ನಿಂದ 2023ರ ಎಪ್ರಿಲ್‌ ವರೆಗೆ ಗುಜರಾತ್‌ನ ವಿವಿಧೆಡೆ ಶೌಚಗುಂಡಿನ ಸ್ವಚ್ಛತಾ ಕಾರ್ಯದ ವೇಳೆ ಎಂಟು ಮಂದಿ ಸಾವನ್ನಪ್ಪಿದ್ದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...