ರೈತ ಹೋರಾಟವನ್ನು ಖಾಲಿಸ್ತಾನಿ ತಂತ್ರವೆಂದ ಗೋದಿ ಮೀಡಿಯಾ: ಕಿಸಾನ್‌ ಏಕ್ತಾ ಮೋರ್ಚಾ ಖಂಡನೆ

Source: S O News | By Laxmi Tanaya | Published on 16th January 2021, 10:59 AM | National News | Don't Miss |

ನವದೆಹಲಿ : ಕಳೆದ 50ದಿನಗಳಿಂದ ನಡೆಯುತ್ತಿರುವ ಹೋರಾಟವನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸುವ ಪ್ರಯತ್ನವನ್ನು ಸರ್ಕಾರ ಹಾಗೂ ಮಾಧ್ಯಮಗಳನ್ನು ಮಾಡುತ್ತಲೇ ಬಂದಿವೆ. ಇದೇ ಕಾರಣಕ್ಕೆ ಹೋರಾಟ ನಿರತ ರೈತರು ಕೆಲವು ಮಾಧ್ಯಮ ಸಂಸ್ಥೆಗಳನ್ನು, ಗೋದಿ ಮೀಡಿಯಾ ಎಂದು ಟೀಕಿಸಿ ಅವುಗಳಿಗೆ ಪ್ರತಿಕ್ರಿಯಿಸುವುದನ್ನು ನಿರಾಕರಿಸಿದ್ದವು. 

ಜ. 15ರಂದು ಕೆಲವು ಮಾಧ್ಯಮವರು '‌, ರೈತ ಹೋರಾಟ; ಖಾಲಿಸ್ತಾನದ ಯೋಜನೆ' ಎಂಬ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡುವ ಮೂಲಕ ತೀವ್ರವಾದ ಟೀಕೆಗೆ ಗುರಿಯಾಗಿದೆ. 

ಕಿಸಾನ್‌ ಏಕ್ತಾ ಮೋರ್ಚಾದ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಭ್ರಷ್ಟ ಹಾಗೂ ವಿಷಯ ಹರಡುವ ಪತ್ರಿಕೋದ್ಯಮದಿಂದ ಎಚ್ಚರವಾಗಿರಿ, ಗೋದಿ ಮೀಡಿಯಾದ ಪಕ್ಷಪಾತ ಎಲ್ಲರಿಗೂ ತಿಳಿದಿರುವುದೇ ಎಂದು ಪ್ರತಿಕ್ರಿಯಿಸಿದೆ.

ಕೆಲವು ಪತ್ರಿಕೆಯಲ್ಲಿ ವಿಶ್ಲೇಷಣೆಗಳೆರಡು ಹೋರಾಟವನ್ನು ತಪ್ಪಾಗಿ ವ್ಯಾಖ್ಯಾನಿಸುವ ಪ್ರಯತ್ನ ಎಂದು ರೈತ ನಾಯಕರು ಗೋದಿ ಮೀಡಿಯಾ‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Read These Next

ಹೊಸದಿಲ್ಲಿ: ಇನ್ನು ಮುಂದೆ ಎಲ್‌ಎಲ್‌ಆರ್, ಡಿಎಲ್ ನವೀಕರಣ ಸಹಿತ 18 ಆರ್‌ಟಿಒ ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯ

ಚಾಲನಾ ಪರವಾನಿಗೆ ಹಾಗೂ ನೋಂದಣಿ ಪ್ರಮಾಣಪತ್ರಕ್ಕೆ ಸಂಬಂಧಿಸಿದ ನಿರ್ದಿಷ್ಟ ಸೇವೆಗಳು ಇನ್ನು ಮುಂದೆ ಸಂಪೂರ್ಣವಾಗಿ ...

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟನೆ. ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಿದೆ- ನ್ಯಾ. ಸಿ. ರಾಜಶೇಖರ್

ಕಾರವಾರ : ಮಹಿಳೆಯರೂ ಸಹ ಪುರುಷರಿಗೆ ಸರಿ ಸಮನಾಗಿ ದುಡಿಯಬಲ್ಲರು. ಅವರಷ್ಟೇ ಸಾಮರ್ಥ್ಯದಿಂದ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡಬಲ್ಲರು ...