ಪೊಲೀಸರ ಸರ್ಪಗಾವಲಿನಲ್ಲಿ ಸಪನ್ನಗೊಂಡ ಭಟ್ಕಳ ಮಾರಿ ಜಾತ್ರೆ

Source: SO NEWS | By MV Bhatkal | Published on 6th August 2021, 1:04 AM | Coastal News | Don't Miss |

ಭಟ್ಕಳ: ಕಳೆದೆರಡು ದಿನಗಳಿಂದ ಪಟ್ಟಣದಲ್ಲಿ ಸರಳವಾಗಿ ನಡೆಯುತ್ತಿದ್ದ ತಾಲೂಕಿನ ಸುಪ್ರಸಿದ್ದ ಮಾರಿ ಹಬ್ಬ ಗುರುವಾರ ಸಂಜೆ ಮಾರಿ ಮೂರ್ತಿ ವಿಸರ್ಜಿಸುವ ಮೂಲಕ ಸಂಪನ್ನಗೊಂಡಿತು.
ಕೋವಿಡ್-19 ವೈರಸ್‌ನ ಮೂರನೇ ಅಲೆಯ ಭೀತಿಯ ಹಿನ್ನಲೆಯಲ್ಲಿ ದೇವಿಯ ಮೂರ್ತಿಯನ್ನು ನಗರದ ಮಾರಿಗುಡಿಯಿಂದ ಕೆಲವೆ ಕೆಲವು ಭಕ್ತರು, ಸ್ವಯಂ ಸೇವಕರು, ಆಡಳಿತ ಮಂಡಳಿ ಸದಸ್ಯರುಗಳು ಸೇರಿ ಮೆರವಣಿಗೆಯ ಮೂಲಕ ಜಾಲಿಕೋಡಿಯ ಸಮುದ್ರ ತೀರಕ್ಕೆ ಒಯ್ದು ಅಲ್ಲಿ ಮೂರ್ತಿಯ ಭಾಗಗಳನ್ನು ಬೇರ್ಪಡಿಸಿ ಸಮುದ್ರದಲ್ಲಿ ವಿಸರ್ಜಿಸಲಾಯಿತು.

ಮದ್ಯಾಹ್ನ 4:30 ಗಂಟೆ ಸುಮಾರಿಗೆ ಸ್ವಯಂ ಸೇವಕರು ಹಾಗೂ ಆಡಳಿತ ಮಂಡಳಿ ಸದಸ್ಯರ ಸಮ್ಮುಖದಲ್ಲಿ ಮಾರಿಯ ಮೂರ್ತಿಯನ್ನು ಮೆರವಣಿಗೆಯ ಮೂಲಕ ಜಾಲಿಕೋಡಿ ಸಮುದ್ರ ತೀರಕ್ಕೆ ಕೊಂಡೊಯ್ದು ವಿಧಿವಿಧಾನಗಳ ಮೂಲಕ ವಿಸರ್ಜಿಸುವದರೊಂದಿಗೆ ಮಾರಿ ಜಾತ್ರೆ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಪರಮೇಶ್ವರ ನಾಯ್ಕ, ನರೇಂದ್ರ ನಾಯಕ, ಶ್ರೀಧರ ನಾಯ್ಕ, ಶ್ರೀಪಾದ ಕಂಚುಗಾರ, ನಾರಾಯಣ ಖಾರ್ವಿ, ಮಾದೇವ ಮೊಗೇರ, ರಘುವೀರ ಬಾಳಗಿ, ದಿನೇಶ ನಾಯ್ಕ, ಕೃಷ್ಣ ನಾಯ್ಕ, ನಾರಾಯಣ ಖಾರ್ವಿ, ಗೋವಿಂದ ನಾಯ್ಕ, ಮುಂತಾದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಡಿವೈಎಸ್‌ಪಿ ಬೆಳ್ಳಿಯಪ್ಪ ನೇತೃತ್ವದಲ್ಲಿ ಸಿಪಿಐ ದಿವಾಕರ ಪಿ.ಎಸ್.ಐ ಭರತ ಇತರ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು. ಕೊರೊನಾ ವೈರಸ್ ಹಿನ್ನಲೆಯಲ್ಲಿ ಈ ಬಾರಿ ಮಾರಿದೇವಿಯ ಮೂರ್ತಿಯನ್ನು ವಾಹನದಲ್ಲಿ ಕೊಂಡೊಯ್ಯಲಾಯಿ

Read These Next

ಲಸಿಕಾ ಮೇಳದಲ್ಲಿ ಗುರಿ ತಲುಪಿದ ಉತ್ತರಕನ್ನಡ ಆರೋಗ್ಯ ಇಲಾಖೆ. ಯಶಸ್ಸಿಗೆ ಕಾರಣರಾದವರಿಗೆ ಡಿಸಿ ಅಭಿನಂದನೆ.

ಕಾರವಾರ : ದೇಶಾದ್ಯಂತ ನಡೆದ ಬೃಹತ್ ಕೋವಿಡ್ ಲಸಿಕಾ ಮೇಳದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ನೀಡಲಾದ 85000 ಗುರಿಯನ್ನು ತಲುಪಿಸುವಲ್ಲಿ ...

ಈ ಬಾರಿ ಅರ್ಥಪೂರ್ಣ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ನಿರ್ಧಾರ: ಡಾ. ಕೆ.ಸಿ ನಾರಾಯಣಗೌಡ

ಮಂಡ್ಯ : ಅಕ್ಟೋಬರ್ 9, 10 ಮತ್ತು 11 ರಂದು ಶ್ರೀರಂಗಪಟ್ಟಣ ದಸರಾ ಮಹೋತ್ಸವವನ್ನು ನಡೆಸಲು ನಿರ್ಧರಿಸಲಾಗಿದ್ದು, ಅರ್ಥಪೂರ್ಣ ದಸರಾ ಆಚರಣೆಗೆ ...

ಅಂಕೋಲಾದ ಅನ್ನದಂಗಳದಲ್ಲಿ ಮಾತುಕತೆ ಕಾರ್ಯಕ್ರಮ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟನೆ. ಕೃಷಿಕರೊಂದಿಗೆ ಸಂವಾದ

ಕಾರವಾರ : ರೈತರ ಏಳಿಗೆಯ ಜೊತೆ ಕೃಷಿಯಲ್ಲಿ ದೇಶ ಸ್ವಾವಲಂಬಿಯಾಗುವ ದೃಷ್ಟಿಯಲ್ಲಿ ಕೇಂದ್ರ ಸರ್ಕಾರವು ರೈತ ಸ್ನೇಹಿ ಸರ್ಕಾರವಾಗಿ ...