ಪೋಲಿಯೋ ಹನಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶ

Source: sonews | By Staff Correspondent | Published on 21st September 2019, 5:42 PM | State News |

ಕೋಲಾರ : ಸಾಮಾಜಿಕ ಜಾಲ ತಾಣಗಳಲ್ಲಿ ವಾಟ್ಸ್ ಆಫ್‍ನಲ್ಲಿ  ಸೆ. 20  ರಂದು “ ದಯಮಾಡಿ ಬೇಗ ಶೇರ್ ಮಾಡಿ ನಾಳೆ 5 ವರ್ಷದ ಒಳಗೆ ಇರುವ ಮಕ್ಕಳಿಗೆ ಪೋಲಿಯೋ ಕೊಡಿಸಬೇಡಿ. ಅದರಲ್ಲಿ ವೈರಸ್ ಬೆರೆಸಿರುತ್ತದೆ. ಪೋಲಿಯೋ ತಯಾರು ಮಾಡಿದ ಆ ಕಂಪನಿಯ ಯಜಮಾನರನ್ನು ಅರೆಸ್ಟ್ ಮಾಡಿದ್ದಾರೆ. ದಯಮಾಡಿ ಎಲ್ಲರಿಗೂ ತುರ್ತು ಶೇರ್ ಮಾಡಿ ಸತ್ಯ. ಸತ್ಯ. ಸತ್ಯ.” ಎಂಬ ಸುಳ್ಳು ಮಾಹಿತಿಯ ಸಂದೇಶಗಳನ್ನು ಹರಡುತ್ತಿದ್ದು, ಇಂತಹ ವದಂತಿಗಳಿಗೆ  ಸಾರ್ವಜನಿಕರು ಕಿವಿ ಕೊಡಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪೋಲಿಯೋ ಹನಿಯನ್ನು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ನಿಯಮಾನುಸಾರ ಕ್ರಮವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡುತ್ತಾ ಬಂದಿದ್ದು ಪೋಲಿಯೋ ಹನಿಯಿಂದ ಯಾವುದೇ ತರಹದ ಅಹಿತಕಾರ ಘಟಣೆ ಸಂಭವಿಸಿರುವುದಿಲ್ಲ, ನಮ್ಮ ಆರೋಗ್ಯ ಇಲಾಖೆಯಲ್ಲಿ ನಿಯಮಾನುಸಾರ ನೀಡುತ್ತಾ ಬರುವ ಪೋಲಿಯೋ ಹನಿ ಶೇ.100% ರಷ್ಟು ಸುರಕ್ಷಿತವಾಗಿದೆ.  ಯಾವುದೇ ಸುಳ್ಳು ಮಾಹಿತಿಗಳಿಗೆ, ವದಂತಿಗಳಿಗೆ ಸಾರ್ವಜನಿಕರು ಕಿವಿ ಕೊಡಬಾರದು ಎಂದು ಅವರು ತಿಳಿಸಿದ್ದಾರೆ. 

ಪೋಲಿಯೋ ನಿರ್ಮೂಲನೆಯಲ್ಲಿ ನಮ್ಮ ಭಾರತ ದೇಶವು ಗಣನೀಯ ಪ್ರಗತಿಯನ್ನು ಸಾಧಿಸಿದ್ದು, ಜನವರಿ 2011 ರಿಂದ ಯಾವುದೇ ಹೊಸ ಪೋಲಿಯೊ ಪ್ರಕರಣ ಕಂಡು ಬಂದಿರುವುದಿಲ್ಲ ಹಾಗೂ ಭಾರತ ದೇಶವು ಈಗ ವಿಶ್ವ ಆರೋಗ್ಯ ಸಂಸ್ಥೆಯ ವತಿಯಿಂದ “ಪೋಲಿಯೋ ಮುಕ್ತ ರಾಷ್ಟ್ರ “ ಎಂಬ ಪೋಲಿಯೋ ನಿರ್ಮೂಲನೆಯ ಪ್ರಮಾಣ ಪತ್ರವನ್ನು  ಮಾರ್ಚ್ 27, 2014  ರಂದು ಪಡೆದಿದೆ. 04 ಡಿಸೆಂಬರ್ 2018 ಕ್ಕೆ ಕೇವಲ ಎರಡು ದೇಶಗಳು ಪಾಕಿಸ್ತಾನ, ಆಘ್ಟಾನಿಸ್ತಾನ ಮಾತ್ರ ಪೋಲಿಯೋ ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿವೆ. ವಿಶ್ವದಾದ್ಯಂತ ಒಟ್ಟಾರೆ 2017 ರಲ್ಲಿ 16 ಪೋಲಿಯೋ ಪ್ರಕರಣಗಳು ಕಂಡುಬಂದಿದ್ದು, 2018 ರಲ್ಲಿ 28 ಪ್ರಕರಣಗಳು ವರದಿಯಾಗಿರುತ್ತವೆ. 

ಈ ಹಿನ್ನೆಲೆಯಲ್ಲಿ ಪಾಕಿಸ್ತಾನ, ಆಘ್ಟಾನಿಸ್ತಾನ ಪೋಲಿಯೋ ಪ್ರಕರಣಗಳು ಕಂಡು ಬಂದಿರುವುದರಿಂದ ಹಾಗೂ ಮತ್ತೆ ಸಾಂಕ್ರಾಮಿಕವಾಗಿ ಹರಡುವ ಸಾಧ್ಯತೆ ಇರುವುದರಿಂದ ಪೋಲಿಯೋ ಲಸಿಕೆಯನ್ನು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಗಳನ್ನು ಹಾಗೂ ಎ.ಎಫ್.ಪಿ ಸರ್ವೆಕ್ಷಣೆ ಕಾರ್ಯಕ್ರಮಗಳನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ಜವಾಬ್ದಾರಿಯುತವಾಗಿ ನಿರ್ವಹಿಸಬೇಕಾಗಿರುತ್ತದೆ.

ಕರ್ನಾಟಕದಲ್ಲಿ ಕೊನೆಯ ಪೋಲಿಯೋ ಪ್ರಕರಣ ನವೆಂಬರ್ 3, 2007 ರಂದು ರಾಜ್ಯಕ್ಕೆ ವಲಸೆ ಬಂದಿರುವ ಗುಂಪಿನಲ್ಲಿ ಪತ್ತೆಯಾಗಿದ್ದು, ಆನಂತರ ಇಲ್ಲಿಯವರೆಗೆ ಯಾವುದೇ ಪೋಲಿಯೋ ಪ್ರಕರಣ ಪತ್ತೆಯಾಗಿರುವುದಿಲ್ಲ. “ ಪೋಲಿಯೊ ಖಾಯಿಲೆ ನಿರ್ಮೂಲನೆ ಮಾಡಲು ಹಲವಾರು ಇಲಾಖೆಗಳ ಅಧಿಕಾರಿಗಳು, ನೌಕರರು, ಸ್ವಯಂ ಸೇವಕರು ಸಾಕಷ್ಟು ಉತ್ತಮ ಕೆಲಸ ನಿರ್ವಹಿಸುತ್ತಿರುವುದು ಪ್ರಶಂಸನೀಯವಾಗಿರುತ್ತದೆ”.

 ಭಾರತ ಸರ್ಕಾರದ ನಿರ್ದೇಶನದಂತೆ ಪೋಲಿಯೋ ನಿರ್ಮೂಲನೆಯ ಅಂಗವಾಗಿ ಈ ವರ್ಷ ಒಂದು ಸುತ್ತಿನ ಫಲ್ಸ್ ಪೋಲಿಯೋ ಕಾರ್ಯಕ್ರಮವನ್ನು 10 ನೇ ಮಾರ್ಚ್ 2019 ರಲ್ಲಿ  bಔPಗಿ ನೀಡುತ್ತಿರುವ ಲಸಿಕೆಯನ್ನು ಹಾಕಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 1800-425-4325 ಗೆ ಅಥವಾ ಹತ್ತಿರ ಸರ್ಕಾರಿ ಆಸ್ಪತ್ರೆಗಳಿಗೆ ಅಥವಾ ಉಚಿತ ದೂರವಾಣಿ 104ಕ್ಕೆ ಅಥವಾ ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯ ಆವರಣದಲ್ಲಿರುವ ಡಿಜಿಟಲ್ ಆರೋಗ್ಯ ವಾಣಿ ಉಚಿತ ಕರೆಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...