ಕಾರವಾರದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಜಿಲ್ಲಾಡಳಿತದಿಂದ ಚಿತ್ತಾಕುಲದ ಹನ್ನೊಂದು ಎಕರೆ ಜಮೀನು ಹಸ್ತಾಂತರ: ಶಾಸಕ ಸತೀಶ ಸೈಲ್ ಹರ್ಷ

Source: SO News | By Laxmi Tanaya | Published on 27th February 2024, 7:01 PM | Coastal News | Don't Miss |

ಕಾರವಾರ: ಉತ್ತರಕನ್ನಡ ಜಿಲ್ಲಾಡಳಿತವು ಚಿತ್ತಾಕುಲ ಸರ್ವೆ ಸಂಖ್ಯೆ 1144ಅ ಇಲ್ಲಿಯ11.34ಎಕರೆ ಜಾಗವನ್ನು
ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ಗೆ ಫೆ. 29ರಂದು ಹಸ್ತಾಂತರ ಮಾಡಲಿದೆ ಎಂದು ಕಾರವಾರ ಅಂಕೋಲಾ ಶಾಸಕ ಸತೀಶ ಕೆ ಸೈಲ್ ಪತ್ರಿಕಾ ಪ್ರಕಟಣೆ ಮೂಲಕ  ಹರ್ಷ ವ್ಯಕ್ತ ಪಡಿಸಿದ್ದಾರೆ.

ಈ ಸಂಬಂಧ 2018ರಂದು ಅಂದಿನ ಸರಕಾರವು ಚಿತ್ತಾಕುಲ ಗ್ರಾಮದ ಸರ್ವೆ ಸಂಖ್ಯೆ 1144 ಅ 11.34
ಎಕರೆ ಗೋಮಾಳ ಜಮೀನನ್ನು ಗೋಮಾಳ ಶೀರ್ಷಿಕೆಯಿಂದ ಕಡಿಮೆ ಮಾಡಿ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಇವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ವಾರ್ಷಿಕ ಬಾಡಿಗೆ ಆಧಾರದಲ್ಲಿ ನೀಡಲು ಆದೇಶ ಮಾಡಿತ್ತು. ಜಿಲ್ಲಾಡಳಿತ ಮತ್ತು ಕೆ ಎಸ್ ಸಿ ಎ  ಮಧ್ಯೆ ಇದಕ್ಕೆ ಬೇಕಾಗಿರುವ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪರಸ್ಪರ ಸಭೆ ನಡೆಸಿ ಸಂಪೂರ್ಣಗೊಳಿಸಿದ್ದರು.

2013 ರಿಂದ 2018 ರ ಅವದಿಯಲ್ಲಿ ಶಾಸಕರಾಗಿದ್ದ ಇಂದಿನ ಶಾಸಕ ಸತೀಶ್ ಸೈಲ್ ಅವರು ತನ್ನ ಅಂದಿನ ಅವದಿಯಲ್ಲಿ ಸರಕಾರದ ಮೇಲೆ ಒತ್ತಡ ತಂದು ಗಡಿ ಪ್ರದೇಶದಲ್ಲಿ ಸಮುದ್ರ ಮತ್ತು ಕಾಳಿ ನದಿಯ ಸಂಗಮ ಪ್ರದೇಶದ ಗುಡ್ಡದ ರಮಣೀಯ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಿ ಈ ಪ್ರದೇಶವನ್ನು ಪ್ರವಾಸಿ ಕೇಂದ್ರವನ್ನಾಗಿ ಪರಿವರ್ತಿಸಲು ನಿರ್ಧರಿಸಿದ್ದರು.ಆದರೆ ಸರಕಾರ ಬದಲಾದ ಕಾರಣ ಈ ಪ್ರಕ್ರಿಯೆ ಅಲ್ಲಿಯೇ ತಟಸ್ಥವಾಗಿತ್ತು. ಇದೀಗ 2023ರ ಚುನಾವಣೆಯಲ್ಲಿ ಸತೀಶ  ಸೈಲ್ ಮತ್ತೊಮ್ಮೆ ಈ ಕ್ಷೇತ್ರದ ಶಾಸಕರಾಗಿ ಚುನಾಯಿತರಾಗಿ ತಾನು ಈ ಹಿಂದೆ ನೀಡಿದ್ದ ಭರವಸೆಯನ್ನು ಕಾರ್ಯರೂಪಕ್ಕೆ ತರಲು ಸರಕಾರದ ಮಟ್ಟದಲ್ಲಿ ಪ್ರಯತ್ನ ಪಡುತ್ತಿದ್ದರು.ಇದರ ಪ್ರತಿಫಲವಾಗಿ ಎಲ್ಲಾ ಪ್ರಕ್ರಿಯೆಗಳು ಶಾಸಕ ಸತೀಶ್ ಸೈಲ್ ಮುಂದಾಳುತನದಲ್ಲಿ ಸುಸೂತ್ರವಾಗಿ ಮುಗಿದು ಇದೀಗ ಜಮೀನು ಹಸ್ತಾಂತರ ಮಟ್ಟಕ್ಕೆ ಬಂದು ನಿಂತಿದೆ.
   ಆ ಪ್ರಯುಕ್ತ ದಿನಾಂಕ 29ರಂದು ಬೆಳಿಗ್ಗೆ ಹನ್ನೊಂದು ಘಂಟೆಗೆ ಜಿಲ್ಲಾಡಳಿತವು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಬೆಂಗಳುರು ಇವರಿಗೆ ಸದ್ರಿ ಜಮೀನನ್ನು ಹಸ್ತಾಂತರಿಸುವ ಕಾರ್ಯಕ್ರಮ ಹಮ್ಮಿ ಕೊಂಡಿದೆ. ಈ ಕಾರ್ಯಕ್ರಮದಲ್ಲಿ ಶಾಸಕ ಸತೀಶ ಸೈಲ್, ಕೆ ಎಸ್ ಸಿ ಏ ಪರವಾಗಿ ಇದರ ಅಧ್ಯಕ್ಷ ಮಾಜಿ ಟೆಸ್ಟ್ ಆಟಗಾರ ರಘುರಾಮ ಭಟ್,ಎಂ ಎಸ್ ವಿನಯ್ , ನಿಖಿಲ್ ಭೂಷಣ್ ಮ್ಯಾನೇಜಿಂಗ್ ಕಮಿಟಿ ಸದಸ್ಯರುಗಳು ಹಾಜರಿದ್ದು  ಕೆ ಎಸ್ ಸಿ ಎ ಪರವಾಗಿ ಜಿಲ್ಲಾಡಳಿತದಿಂದ ಜಮೀನು ಸ್ವೀಕರಿಸುವರು.

ಕಾರವಾರ ಪರಿಸರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗುವುದರಿಂದ ಈ ಪ್ರದೇಶದಲ್ಲಿ ವಾಣಿಜ್ಯ ವಹಿವಾಟು ಅಧಿಕಗೊಂಡು ಜನರ ಆದಾಯದ ಮೂಲ ಹೆಚ್ಚಲಿದೆ. ಕ್ರೀಡಾಂಗಣ ನಿರ್ಮಾಣ ಸಮಯದಲ್ಲಿ ಮತ್ತು ತದನಂತರ ಪರಿಸರದ ಯುವಕರಿಗೆ ಉದ್ಯೋಗ ದೊರಕಿ ತಕ್ಕಮಟ್ಟಿಗೆ ನಿರೋದ್ಯೋಗ ಸಮಸ್ಯೆ ಪರಿಹಾರವಾಗಲಿದೆ.ಈ ಕ್ರಿಕೆಟ್ ಕ್ರೀಡಾಂಗಣಕ್ಕೆ ಮಂಜೂರು ಆದ ಜಮೀನು ಬಿಟ್ಟು ಬೇರೆ ಯಾವುದೇ ರೀತಿಯ ಅತಿಕ್ರಮಣ ಅಥವಾ ಇನ್ನಾವುದೇ ರೀತಿಯ ಭೂಕಬಳಿಸುವ ಪ್ರಕ್ರಿಯೆಗೆ ಅವಕಾಶ ನೀಡುವುದಿಲ್ಲ ಎಂದು ಶಾಸಕ ಸತೀಶ ಸೈಲ್ ಬರವಸೆ ನೀಡಿರುವರು.
ಈ ಮೂಲಕ ತಾನು ತನ್ನ ಚುನಾವಣಾ ಪ್ರಣಾಳಿಕೆ ಯಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸುತ್ತೇನೆ ಎಂದು ನೀಡಿದ್ದ ಆಶ್ವಾಸನೆಯನ್ನು  ಈಡೇರಿಸುವಲ್ಲಿ ಸಫಲನಾಗಿದ್ದೇನೆ ಎಂದು ಶಾಸಕ ಸತೀಶ ಕೃಷ್ಣ ಸೈಲ್ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...