ಚುನಾವಣಾ ಆಯೋಗವು ಮೋದಿಯ ಗುಲಾಮನಾಗಿದೆ: ಉದ್ಧವ್ ಠಾಕ್ರೆ

Source: Vb | By I.G. Bhatkali | Published on 19th February 2023, 1:53 PM | National News |

ಮುಂಬೈ: ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿಯ ಗುಲಾಮನಾಗಿದೆ; ಹಿಂದೆಂದೂ ನಡೆಯದಿರುವುದನ್ನು ಅದು ಮಾಡಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶನಿವಾರ ಹೇಳಿದ್ದಾರೆ. ಚುನಾವಣಾ ಆಯೋಗವು ಶಿವಸೇನೆ ಪಕ್ಷದ ಹೆಸರು ಮತ್ತು ಚಿಹ್ನೆ ಬಿಲ್ಲು-ಬಾಣವನ್ನು ಏಕನಾಥ ಶಿಂದೆ ಬಣಕ್ಕೆ ನೀಡಿದ ಒಂದು ದಿನದ ಬಳಿಕ ಅವರು ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ.

ಸಮಾಧಾನದಿಂದಿರುವಂತೆ ತನ್ನ ಬೆಂಬಲಿಗರನ್ನು ಒತ್ತಾಯಿಸಿದ ಅವರು, ಮುಂದಿನ ಚುನಾವಣೆಗೆ ಸಿದ್ದರಾಗುವಂತೆ ಕರೆ ನೀಡಿದರು. ಮುಂಬೈ ಮಹಾನಗರ ಪಾಲಿಕೆಯ ಚುನಾವಣೆ ಶೀಘ್ರದಲ್ಲೇ ನಡೆಯಲಿದೆ. ತನ್ನ ಬಲಪ್ರದರ್ಶನದ ಭಾಗವಾಗಿ ಠಾಕ್ರೆ ಕುಟುಂಬದ ಮನೆ 'ಮಾತೋಶ್ರೀ'ಯ ಹೊರಗೆ ಜನರ ದೊಡ್ಡ ಗುಂಪೊಂದನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಅವರು ತನ್ನ ಕಾರಿನ 'ಸನ್‌ ಫ್' (ಕಾರಿನ ಮೇಲ್ಟಾವಣಿಯಲ್ಲಿರುವ ಕಿಟಕಿ) ಮೂಲಕ ಜನರನ್ನು ಉದ್ದೇಶಿಸಿ ಮಾತನಾಡಿದರು. ಅವರ ತಂದೆ ಬಾಳಾ ಠಾಕ್ರೆ ಪಕ್ಷದ ಆರಂಭಿಕ ದಿನಗಳಲ್ಲಿ ತನ್ನ ಕಾರಿನ ಮೇಲ್ಟಾವಣಿಯ ಮೇಲೆ ನಿಂತು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅದೇ ಮಾದರಿಯನ್ನು ಉದ್ಧವ್ ಠಾಕ್ರೆ ಶನಿವಾರ ಅನುಸರಿಸಿದ್ದಾರೆ.

“ಪಕ್ಷದ ಚಿಹ್ನೆಯನ್ನು ಕದಿಯಲಾಗಿದೆ ಮತ್ತು ಕಳ್ಳನಿಗೆ 66 ಒಂದು ಪಾಠವನ್ನು ಕಲಿಸಬೇಕಾಗಿದೆ'' ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂದೆಯನ್ನು ಪರೋಕ್ಷವಾಗಿ ಉದ್ದೇಶಿಸಿ ಅವರು ಹೇಳಿದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...