ದುಬೈ: 'ರಿಯಾಲಿಟಿ ಇಂಡಿಯಾ ಎಕ್ಸ್ಪೋ-2017' ಪ್ರಾಪರ್ಟಿ ಶೋನಲ್ಲಿ ಭಾಗವಹಿಸಿ 'ಮಾರ್ಚ್ 22'  ಸಿನೆಮಾದ  ಟಿಕೇಟನ್ನು ಉಚಿತ ಪಡೆಯಿರಿ 

Source: iqbal uchila | By Arshad Koppa | Published on 18th September 2017, 8:36 AM | Gulf News | Guest Editorial |

ದಿ ಟೈಮ್ಸ್ ಆಫ್ ಇಂಡಿಯಾ ಆಶ್ರಯದಲ್ಲಿ ದುಬೈಯ ಶೇಖ್ ಝಹಿದ್  ರಸ್ತೆಯ ಕ್ರೌನ್ ಪ್ಲಾಜಾ ಹೋಟೆಲಿನಲ್ಲಿ ಸೆ. 22-23ರಂದು ಭಾರತದ  ಅತೀ ದೊಡ್ಡ ಪ್ರಾಪರ್ಟಿ ಶೋ 'ರಿಯಾಲಿಟಿ ಇಂಡಿಯಾ ಎಕ್ಸ್ಪೋ-2017' ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೊಂದು ಸುವರ್ಣಾವಕಾಶ ನೀಡಲಾಗಿದ್ದು, ಭಾಗವಹಿಸುವವರಿಗೆ ದುಬೈಯಲ್ಲಿ ಅಕ್ಟೊಬರ್ 6ರ ರಂದು ಬಿಡುಗಡೆಯಾಗಲಿರುವ  ಸಿನಿಪ್ರಿಯರ ಮನಗೆದ್ದ 'ಮಾರ್ಚ್-22 ' ಸಿನೆಮಾದ ಟಿಕೇಟನ್ನು ಉಚಿತವಾಗಿ ನೀಡಲಾಗುತ್ತಿದೆ. 

 'ರಿಯಾಲಿಟಿ ಇಂಡಿಯಾ ಎಕ್ಸ್ಪೋ-2017' ಪ್ರಾಪರ್ಟಿ ಶೋವನ್ನು ಬಾಲಿವುಡ್ ನಟ ಸೊಹೈಲ್ ಖಾನ್ ಉದ್ಘಾಟಿಸಲಿದ್ದಾರೆ.  

ಬೆಂಗಳೂರು, ಮಂಗಳೂರು, ಮುಂಬೈ, ಚೆನ್ನೈ, ಸೇರಿದಂತೆ ಭಾರತದಾದ್ಯಂತ ರಿಯಲ್ ಎಸ್ಟೇಟಿನಲ್ಲಿ ಬಂಡವಾಳ ಹೂಡಲು ಯುಎಇಗರಿಗೆ ಈ ಕಾರ್ಯಕ್ರಮ ಸುವರ್ಣಾವಕಾಶವನ್ನು ಒದಗಿಸುತ್ತಿದ್ದು,   ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಘಟಕರಾದ ಝಿಯಾ ಸೇಠ್  ತಿಳಿಸಿದ್ದಾರೆ. 

ಕನ್ನಡ ಚಿತ್ರರಂಗದಲ್ಲಿ ಭಾರೀ   ಮಾಡುತ್ತಿರುವ ಹಾಗು ಮಾಧ್ಯಮಗಳ ಪ್ರಶಂಸೆ ಪಡೆದಿರುವ 'ಮಾರ್ಚ್ 22'  ಸಿನೆಮಾ ಅಕ್ಟೊಬರ್ 6 ರಂದು  ದುಬೈ, ಶಾರ್ಜಾ, ಅಬುಧಾಬಿ ಸೇರಿದಂತೆ ಗಲ್ಫಿನಾದ್ಯಂತ  ಬಿಡುಗಡೆಯಾಗುತ್ತಿದೆ. ಈ ಸಿನೆಮಾ ಹಿಂದೂ-ಮುಸಲ್ಮಾನರ ಮಧ್ಯೆ ಸೌಹಾರ್ದತೆಯನ್ನು ಗಟ್ಟಿಗೊಳಿಸುವಂಥದ್ದಾಗಿದ್ದು, ಪ್ರತಿಯೊಬ್ಬರೂ  ಕುಟುಂಬ ಸಮೇತರಾಗಿ ನೋಡುವಂಥದ್ದಾಗಿದೆ. 


ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ, ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ನಿರ್ದೇಶನದ 'ಮಾರ್ಚ್ 22' ಸಿನೆಮಾದಲ್ಲಿ ಅನಂತ್‍ನಾಗ್, ಗೀತಾ ಜೊತೆ ಹಿರಿಯ ಕಲಾವಿದರಾದ ಶರತ್ ಲೋಹಿತಾಶ್ವ, ಅಶೀಷ್ ವಿದ್ಯಾರ್ಥಿ, ಸಾಧು ಕೋಕಿಲಾ, ಜೈಜಗದೀಶ್, ರವಿ ಕಾಲೇ, ವಿನಯಾ ಪ್ರಸಾದ್, ಪದ್ಮಜಾ ರಾವ್, ರಮೇಶ್ ಭಟ್, ಶ್ರೀನಿವಾಸ್ ಮೂರ್ತಿ, ರವೀಂದ್ರನಾಥ್  ಸೇರಿದಂತೆ ಹಲವು ಹಿರಿಯ ನಟ-ನಟಿಯರೊಂದಿಗೆ ಆರ್ಯವರ್ಧನ್ ಮತ್ತು ಕಿರಣ್ ರಾಜ್ ನಾಯಕರಾಗಿ ಕಾಣಿಸಿಕೊಂಡಿದ್ದು, ಮೇಘಶ್ರೀ ಮತ್ತು ದೀಪ್ತಿ ಶೆಟ್ಟಿ ನಾಯಕಿಯರಾಗಿ ತಮ್ಮ ನಟನೆಯನ್ನು ಮುಂದಿಟ್ಟಿದ್ದಾರೆ. ಜೊತೆಗೆ ಕಿಶೋರ್, ಸೃಜನ್ ರೈ, ಶಾಂತಾ ಆಚಾರ್ಯ, ದ್ರಶ್ಯ ಶೆಟ್ಟಿ, ದುಬೈಯ ರಂಗಭೂಮಿ ಕಲಾವಿದರಾದ ಚಿದಾನಂದ ಪೂಜಾರಿ, ಸುವರ್ಣ ಸತೀಶ್, ಪ್ರಶೋಭಿತ  ಮುಂತಾದವರು ನಟಿಸಿದ್ದಾರೆ. 

ಜೊತೆಗೆ ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಹೆಸರಾಂತ ಉದ್ಯಮಿ ಹಾಗೂ ಕನ್ನಡಿಗ ಪದ್ಮಶ್ರೀ ಡಾ. ಬಿ.ಆರ್ ಶೆಟ್ಟಿ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದ್ದು, ಗಮನ ಸೆಳೆದಿದ್ದಾರೆ. 

ದುಬೈಯಲ್ಲಿ ಬಿಡುಗಡೆಯಾಗಲಿರುವ 'ಮಾರ್ಚ್ 22'  ಸಿನೆಮಾದ ಮೊದಲ ಪ್ರದರ್ಶನದ ವೇಳೆ ಹಿರಿಯ ನಟ ಅನಂತ್ ನಾಗ್, ಅವರ ಧರ್ಮ ಪತ್ನಿ, ಹಿರಿಯ ನಟಿ ಗಾಯತ್ರಿ ಅನಂತ್ ನಾಗ್, ಯು-ಟರ್ನ್, ರಂಗತರಂಗಿ ಖ್ಯಾತಿಯ ನಟಿ ರಾಧಿಕಾ  ಚೇತನ್ ಸೇರಿದಂತೆ ಖ್ಯಾತ ನಟ-ನಟಿಯರು ಭಾಗವಹಿಸಲಿದ್ದಾರೆ. 


ಈ ಸಿನೆಮಾದಲ್ಲಿ ನಿರ್ಮಾಪಕರಾಗಿರುವ ಖ್ಯಾತ  ಗಾಯಕ ಹರೀಶ್ ಶೇರಿಗಾರ್  ಹಾಗು ಅಕ್ಷತಾ ರಾವ್  ಹಾಡುವ ಮೂಲಕ ಸೈ ಅನಿಸಿಕೊಂಡಿದ್ದಾರೆ. ಮಣಿಕಾಂತ್ ಕದ್ರಿ -ಎನ್.ಜೆ.ರವಿಶೇಕರ್  ರಾಜಮಗ ಸಂಗೀತನೀಡಿರುವ ಈ ಸಿನೆಮಾದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೈಲಾಶ್ ಕೇರ್, ಕಾರ್ತಿಕ್, ಅನುರಾಧ ಭಟ್, ಹರೀಶ್ ಶೇರಿಗಾರ್, ರವಿಶೇಕರ್  ರಾಜಮಗ, ಅಕ್ಷತಾ ರಾವ್  ಅವರು ಹಾಡಿದ್ದು, ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿವೆ.

Read These Next

ಕೋವಿಡ್-19ನಿಂದ ಆನ್ ಲೈನ್ ಕ್ಲಾಸ್ ಗಳು ನಡೆಯುವುದಾದರೆ ದೇಶ ಬಿಟ್ಟು ಹೋಗಿ: ವಿದೇಶಿ ವಿದ್ಯಾರ್ಥಿಗಳಿಗೆ ಅಮೆರಿಕ ಆದೇಶ

ಕೋವಿಡ್-19ನಿಂದ ಆನ್ ಲೈನ್ ಕ್ಲಾಸ್ ಗಳು ನಡೆಯುವುದಾದರೆ ದೇಶ ಬಿಟ್ಟು ಹೋಗಿ: ವಿದೇಶಿ ವಿದ್ಯಾರ್ಥಿಗಳಿಗೆ ಅಮೆರಿಕ ಆದೇಶ

ಭಟ್ಕಳದ ಗರ್ಭಿಣಿ ಮಹಿಳೆಯರು, ವೃದ್ಧರು ಹಾಗೂ ಮಕ್ಕಳ ಹೊತ್ತು ಜೂ.12ಕ್ಕೆ ದುಬೈಯಿಂದ ಮಂಗಳೂರಿಗೆ ಹಾರಲಿದೆ ಬಾಡಿಗೆ ವಿಮಾನ

ಭಟ್ಕಳ : ಲಾಕ್ಡೌನ್ ನಿಂದಾಗಿ ದುಬೈ ಮತ್ತು ಯುಎಇಯಲ್ಲಿ ಸಿಲುಕಿರುವ ಭಟ್ಕಳ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರನ್ನು ಚಾರ್ಟರ್ಡ್ ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...