ಮಹಿಳಾ ಮೀಸಲಾತಿ ಮಸೂದೆಯಲ್ಲಿ ರಹಸ್ಯ ಏಕೆ?: ಕನಿಮೋಳಿ

Source: Vb | By I.G. Bhatkali | Published on 22nd September 2023, 3:01 PM | National News |

ಮಹಿಳಾ ಮೀಸಲಾತಿ ಮಸೂದೆಯ ಕರಡು ರಚನೆ ಮತ್ತು ಅದನ್ನು ಸ೦ಸತ್ ನಲ್ಲಿ ಮಂಡಿಸುವ ವಿಚಾರದಲ್ಲಿ ರಹಸ್ಯ ಕಾಯ್ದುಕೊಂಡಿರುವುದಕ್ಕೆ ಡಿಎಮ್ ಕೆ ಸಂಸದೆ ಕನಿಮೋಳಿ ಬುಧವಾರ ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ.

ಅದೇ ವೇಳೆ, ಸರಕಾರ ಮತ್ತು ಸಮಾಜ “ಮಹಿಳೆಯರಿಗೆ ಸಲಾಮು ಹೊಡೆಯುವುದನ್ನು ಮತ್ತು ಅವರನ್ನು ಪೂಜಿಸುವುದನ್ನು ನಿಲ್ಲಿಸಬೇಕು, ಬದಲಿಗೆ ಅವರನ್ನು ಸಮಾನವಾಗಿ ನಡೆಯಲು ಬಿಡಬೇಕು'' ಎಂದು ಅವರು ಹೇಳಿದರು. “ನೀವು ಮಹಿಳೆಯರನ್ನು ತಾಯಿ, ಸಹೋದರಿ ಅಥವಾ ಹೆಂಡತಿ ಎಂದು ಕರೆಯುವುದು ಬೇಕಾಗಿಲ್ಲ. ಸಮಾನರಂತೆ ಕಂಡರೆ ಸಾಕು'' ಎಂದು ಲೋಕಸಭೆಯಲ್ಲಿ ಮಾತನಾಡಿದ ಅವರು ನುಡಿದರು.

ಈ ಮಸೂದೆಯನ್ನು ಮಂಡಿಸುವ ಮೊದಲು ಸಂಬಂಧಪಟ್ಟವರೊಂದಿಗೆ ಚರ್ಚಿಸಿದ್ದೀರಾ ಎಂದು ಅವರು ಸರಕಾರವನ್ನು ಪ್ರಶ್ನಿಸಿದರು.

“ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ಸಂಸತ್‌ನಲ್ಲಿ ನಾನು ಹಲವು ಬಾರಿ ಪ್ರಶ್ನೆಗಳನ್ನು ಕೇಳಿದ್ದೇನೆ. ಅದಕ್ಕೆ ಸರಕಾರ ಒಂದೇ ರೀತಿಯ ಉತ್ತರಗಳನ್ನು ನೀಡುತ್ತಾ ಬಂದಿದೆ. ಎಲ್ಲಾ ಸಂಬಂಧಪಟ್ಟವರು ಮತ್ತು ರಾಜಕೀಯ ಪಕ್ಷಗಳನ್ನು ಇದರಲ್ಲಿ ತೊಡಗಿಸಬೇಕಾಗಿದೆ ಮತ್ತು ಮಸೂದೆಯನ್ನು ತರುವ ಮೊದಲು ಒಮ್ಮತವನ್ನು ಸೃಷ್ಟಿಸಬೇಕಾಗಿದೆ' ಎಂದು ಅವರು ಹೇಳುತ್ತಿದ್ದರು ಎಂದು ಕನಿಮೋಳಿ ಹೇಳಿದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...