ಮುಖ್ಯಾಧಿಕಾರಿಯನ್ನು ನೇಮಿಸುವಂತೆ ಜಾಲಿ ಪ.ಪಂ ಸದಸ್ಯರಿಂದ ಜಿಲ್ಲಾಧಿಕಾರಿಗೆ ಮನವಿ

Source: sonews | By Staff Correspondent | Published on 20th June 2020, 7:25 PM | Coastal News | Don't Miss |

ಭಟ್ಕಳ: 20 ಮಂದಿ ಸದಸ್ಯರಿರುವ ಇಲ್ಲಿನ ಜಾಲಿ ಪಟ್ಟಣ ಪಂಚಾಯತ್ ರಚನೆಯಾಗಿ 5 ವರ್ಷ ಕಳೆದರೂ ಖಾಯಂ ಮುಖ್ಯಾಧಿಕಾರಿಯನ್ನು ನೇಮಿಸದೆ ಕೇವಲ ಪ್ರಭಾರಿ ಮುಖ್ಯಾಧಿಕಾರಿಯಿಂದ ಕೆಲಸ ನಡೆಯುತ್ತಿದ್ದು ಇದರಿಂದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಕೂಡಲೇ ಖಾಯಂ ಮುಖ್ಯಾಧಿಕಾರಿಯನ್ನು ನೇಮಕ ಮಾಡುವಂತೆ ಆಗ್ರಹಿಸಿ ಪ.ಪಂ ಸದಸ್ಯರು ಪಟ್ಟಣ ಪಂಚಾಯತ್ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. 

ಸದಸ್ಯರಿಗೆ ವಾರ್ಡುಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ತೊಂದರೆಯಾಗುತ್ತಿದ್ದು, ಟ್ಯಾಕ್ಸ್ ಇತ್ಯಾದಿ ಕಟ್ಟಲು ಮುಖ್ಯಾಧಿಕಾರಿ ಬರುವುದನ್ನು ಕಾದುಕುಳಿಕೊಳ್ಳಬೇಕಾಗುತ್ತದೆ. ಪ್ರಭಾರಿ ಮುಖ್ಯಾಧಿಕಾರಿಗಳ ಲಭ್ಯತೆ ಇಲ್ಲದಿರುವುದು ಪಟ್ಟಣ ಪಂಚಾಯತ್ ಅಭಿವೃದ್ಧಿಗೆ ಕುಂಠಿತವಾಗಿದ್ದು ಖಾಯಂ ಮುಖ್ಯಾಧಿಕಾರಿಗಳ ನೇಮಕದಿಂದ ಈ ಎಲ್ಲ ತೊಂದರೆಗಳು ದೂರವಾಗುತ್ತವೆ ಎಂದು ಮನವಿ ಪತ್ರದಲ್ಲಿ ತಿಳಿಸಿದೆ. 

ಈ ಸಂದರ್ಭದಲ್ಲಿ ಸದಸ್ಯರಾಗ ಅಬ್ದುಲ್ ರಹೀಮ್, ಬಿಲಾಲ್ ಅಹಮದ್ ಖಮರಿ, ಪುರಂದರ ಮೊಗೇರ್, ಸಿ.ಎಂ.ದೇವಾಡಿಗ, ಗಣಪಯ್ಯ ಗೊಂಡ, ಆದಂ ಪಣಂಬೂರು ಮತ್ತಿತರರು ಉಪಸ್ಥಿತರಿದ್ದರು. 
 

Read These Next

ಭಟ್ಕಳ ನಗರ ಸೇರಿದಂತೆ ಜಾಲಿ ಪ.ಪಂ ಹಾಗೂ ಹೆಬಳೆ ಪಂಚಯತ್ ವ್ಯಾಪ್ತಿಯಲ್ಲಿ ಸಂ.6ರಿಂದ ಬೆ.6 ಗಂಟೆ ವರೆಗೆ ಲಾಕ್ಡೌನ್

ಭಟ್ಕಳ: ಭಟ್ಕಳ ನಗರ ಸೇರಿದಂತೆ ಜಾಲಿ ಪಟ್ಟಣ ಪಂಚಾಯತ್ ಹಾಗೂ ಹೆಬಳೆ ಪಂಚಾತಯತ್ ವ್ಯಾಪ್ತಿಯಲ್ಲಿ ಸಂಜೆ 6ಗಂಟೆಯಿಂದ ಬೆಳಿಗ್ಗೆ 6ಗಂಟೆ ...

ಭಟ್ಕಳ ನಗರ ಸೇರಿದಂತೆ ಜಾಲಿ ಪ.ಪಂ ಹಾಗೂ ಹೆಬಳೆ ಪಂಚಯತ್ ವ್ಯಾಪ್ತಿಯಲ್ಲಿ ಸಂ.6ರಿಂದ ಬೆ.6 ಗಂಟೆ ವರೆಗೆ ಲಾಕ್ಡೌನ್

ಭಟ್ಕಳ: ಭಟ್ಕಳ ನಗರ ಸೇರಿದಂತೆ ಜಾಲಿ ಪಟ್ಟಣ ಪಂಚಾಯತ್ ಹಾಗೂ ಹೆಬಳೆ ಪಂಚಾತಯತ್ ವ್ಯಾಪ್ತಿಯಲ್ಲಿ ಸಂಜೆ 6ಗಂಟೆಯಿಂದ ಬೆಳಿಗ್ಗೆ 6ಗಂಟೆ ...