ಗ್ರಾಮ ಪಂಚಾಯಿತಿಗಳಿಗೆ ಲ್ಯಾಪ್ ಟಾಪ್ ವಿತರಣೆ

Source: SO News | By Laxmi Tanaya | Published on 5th August 2023, 6:05 PM | Coastal News | Don't Miss |

ಕಾರವಾರ :  ಶಿಕ್ಷಣ ಫೌಂಡೇಶನರವರ ವತಿಯಿಂದ  ಸಾಂಕೇತಿಕವಾಗಿ ಕಾರವಾರ ತಾಲೂಕಿನ ಅಮದಳ್ಳಿ, ಹೊನ್ನಾವರ ತಾಲೂಕಿನ  ಕಡ್ಲೆ, ಭಟ್ಕಳ್ ತಾಲೂಕಿನ ಯಲ್ವಡಿಕವೂರು, ಶಿರಸಿ ತಾಲೂಕಿನ ನೆಗ್ಗು, ಯಲ್ಲಾಪುರ ತಾಲೂಕಿನ ಮಾವಿನ ಮನೆ, ಹಳಿಯಾಳ ತಾಲೂಕಿನ ಮದ್ನಳ್ಳಿ ಗ್ರಾಮ ಪಂಚಾಯತಿಗಳಿಗೆ  ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ  ಎಸ್ ವೈದ್ಯ ಅವರು‌ ಲ್ಯಾಪ್ ಟಾಪ್ ನ್ನು  ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ‌ ವಿತರಿಸದರು.

   ‌‌‌‌‌‌        ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಡೇಲ್ ಸಂಸ್ಥೆ ಹಾಗೂ ಶಿಕ್ಷಣ ಫೌಂಡೇಶನ್ ಸಹಯೋಗದೊಂದಿಗೆ ಗ್ರಾಮ ಪಂಚಾಯಿತ್ ಗ್ರಂಥಾಲಯದ ಮೂಲಕ 12 ರಿಂದ 25 ವಯಸ್ಸಿನ ಯುವಕ ಮತ್ತು ಯುವತಿಯರಿಗೆ ಗ್ರಾಮ ಡಿಜಿ ವಿಸನ ಕಾರ್ಯಕ್ರಮದಡಿ "ಶಿಕ್ಷಣ ಯುವ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮ"   ಅನುಷ್ಠಾನ ಮತ್ತು ಡಿಜಿಟಲೀಕರಣ ಮಾಡಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಗ್ರಾಮ ಡಿಜಿ ವಿಕಸನ  ತರಬೇತಿ  ಕಾರ್ಯಕ್ರಮ ಕಳೆದ ವರ್ಷ 80 ಗ್ರಾಮ ಪಂಚಾಯತ್ ಗ್ರಂಥಾಲಯಗಳನ್ನು ಈ‌ ವರ್ಷ 40 ಗ್ರಂಥಾಲಯ ಆಯ್ಕೆ ಮಾಡಲಾಗಿದೆ‌.

           ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿಯಲ್ಲಿ ಕಳೆದ ವರ್ಷ ಜಿಲ್ಲೆಯಲ್ಲಿ ಗ್ರಂಥಾಲಯಗಳಿಗೆ 55 ಟಿ.ವಿ, 246 ಮೋಬೈಲ್, 37 ಕ್ರೋಮ್ ಬುಕ್, 24 ಮಾನಿಟರ್, 4 ಸಿಪಿಯು,18 ಇಂಟರ್ನೇಟ್ ಮತ್ತು ಒಂದು ವರ್ಷದ ಇಂಟರ್ನೇಟ್ ಪ್ಯಾಕೇಜ್, ಮತ್ತು ಗ್ರಾಮ ಹಿತೈಸಿಗಳನ್ನು ನೀಡಲಾಗಿದ್ದು, ಈ ವರ್ಷ  ಒಟ್ಟು 40 ಗ್ರಂಥಾಲಯಗಳನ್ನು ಆಯ್ಕೆ ಮಾಡಲಾಗಿದ್ದು, 28 ಲ್ಯಾಪ್ ಟಾಪ್ ಮತ್ತು 12 ಮಾನಿಟರ್ ನೀಡಲಾಗುತ್ತಿದೆ ಹಾಗೂ ಪ್ರತಿ ತಾಲೂಕಿಗೆ ಕಾರ್ಯಕ್ರಮ ಮೇಲ್ವೀಚಾರಣೆಗೆ ತಾಲೂಕಾ ಸಂಯೋಜಕರನ್ನು ನೇಮಕ ಮಾಡಲಾಗಿದೆ. ಸಾಧನಗಳ ಬಳಿಕೆ ಮತ್ತು ಪರಿಣಾಮಕಾರಿ ಅನುಷ್ಠನದ ಕುರಿತು ಗ್ರಂಥಲಯ ಮೇಲ್ವೀಚಾರಕರಿಗೆ ತರಬೇತಿ ನೀಡಲಾಗುತ್ತಿದೆ.

        ಹೆಚ್ವಿನ ಮಾಹಿತಿಗಾಗಿ‌ ಶಿವಯ್ಯ ಗೋಡಿಮನಿ ಮತ್ತು ಈಶ್ವರ ಬರಿಗಲ್ ಗ್ರಾಮ ಡಿಜಿ ವಿಕಸನ  ಜಿಲ್ಲಾ ನಿರ್ವಾಹಕರು ಶಿಕ್ಷಣ ಫೌಂಡೇಶನ್ ದೂರವಾಣಿ ಸಂಖ್ಯೆ 9482829914/ 9535471669 ನ್ನು ಸಂಪರ್ಕಿಸಬಹುದು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...