ಅಕ್ಡೋಬರ್ 9ರಂದು ದೇವಾಡಿಗ ಸಮಾಜದ ಪ್ರತಿಭಾ ಪುರಸ್ಕಾರ ಮತ್ತು ಸಮಾವೇಶ.

Source: SO News | By Laxmi Tanaya | Published on 26th September 2022, 9:54 PM | Coastal News | Don't Miss |

ಭಟ್ಕಳ : ಉತ್ತರ ಕನ್ನಡ ಜಿಲ್ಲಾ ದೇವಾಡಿಗ ಸಮಾಜ ನೌಕರ ಸಂಘ(ರಿ), ಮುರುಡೇಶ್ವರ  ವತಿಯಿಂದ ದಿನಾಂಕ  09-10-2022ರಂದು ರವಿವಾರ ಸಂಜೆ 3.00 ಗಂಟೆಗೆ ಶ್ರೀ ದುರ್ಗಾಪರಮೇಶ್ವರಿ ದೇವಾಡಿಗ ಸಭಾ ಭವನ, ಯಕ್ಷೆಮನೆ, ಬೆಂಗ್ರೆಯಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ದೇವಾಡಿಗ ಸಮಾಜ ನೌಕರರ ಸಮಾವೇಶ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.

 2021-22ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 90%ಕ್ಕಿಂತ ಹೆಚ್ಚು ಅಂಕ ಪಡೆದ ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ (ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗ) ಶೇ. 85%ಕ್ಕಿಂತ ಹೆಚ್ಚಿಗೆ ಹಾಗೂ ಪದವಿ ವಿಭಾಗದಲ್ಲಿ ಕಲಾ, ವಾಣಿಜ್ಯ, ವಿಜ್ಞಾನ, ಬಿ.ಬಿ.ಎ., ಬಿ.ಸಿ.ಎ. ಹಾಗೂ ಬಿ.ಬಿ.ಎಂ. ವಿಭಾಗದಲ್ಲಿ ಶೇ. 85%ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ದಿನಾಂಕ: 05-10-2022 ರೊಳಗೆ ಸಂಘಕ್ಕೆ ಅರ್ಜಿ ಸಲ್ಲಿಸಲು ತಿಳಿಸಿದೆ. 

ಅರ್ಜಿಯ ಜೊತೆಗೆ ಅಂಕಪಟ್ಟಿಯ ದೃಢೀಕೃತ ನಕಲು ಹಾಗೂ ಆಧಾರ್ ಕಾರ್ಡಿನ ನಕಲು ಪ್ರತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕಾಗಿ ಕೋರಿದ್ದಾರೆ.  ಅರ್ಜಿ ಸಲ್ಲಿಸಬೇಕಾದ ವಿಳಾಸ:  ವೆಂಕಟೇಶ ಎಸ್. ದೇವಾಡಿಗ,

ಶಿಕ್ಷಕರು, ಶ್ರೀ ಗಣೇಶ ಕೃಪಾವೀರ ವಿಠ್ಠಲ ರಸ್ತೆ, ಭಟ್ಕಳ-581 320

ಮೊಬೈಲ್: 9481275147 ಸಂಪರ್ಕಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:  ನಾರಾಯಣ ದೇವಡಿಗ ,  9741399930,  ಮಾದೇವ ಗದ್ದೆಮನೆ - 9449105559,  ಪದ್ಮಯ್ಯ ದೇವಡಿಗ - 9591056030

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...