ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮೂವರು ಕೊರೊನಾದಿಂದ ಸಾವು: ಮೃತಪಟ್ಟವರ ಸಂಖ್ಯೆ 29ಕ್ಕೆ ಏರಿಕೆ

Source: so news | Published on 8th July 2020, 7:25 PM | Coastal News | Don't Miss |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಸೋಂಕಿಗೆ ಮೂವರು ಮೃತಪಟ್ಟಿದ್ದಾರೆ. ಇದರೊಂದಿಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ಉಳ್ಳಾಲ, ಪುತ್ತೂರು ಮತ್ತು ಭಟ್ಕಳ ಮೂಲದ ಮೂವರು ಮೃತಪಟ್ಟಿದ್ದಾರೆ.
ಉಳ್ಳಾಲದ 62 ವರ್ಷದ ವೃದ್ಧೆ, ಪುತ್ತೂರು ಮೂಲದ 32 ವರ್ಷದ ಮಹಿಳೆ ಹಾಗೂ ಭಟ್ಕಳ ಮೂಲದ 60 ವರ್ಷದ ವ್ಯಕ್ತಿಯೊಬ್ಬರು ಇಂದು ಸಾವನ್ನಪ್ಪಿದ್ದಾರೆ.
ಈಪೈಕಿ ಇಬ್ಬರು ಮಹಿಳೆಯರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಭಟ್ಕಳ ಮೂಲದ 60 ವರ್ಷದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೂವರಿಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.ಇದರೊಂದಿಗೆ ದ.ಕ. ಜಿಲ್ಲೆಯಲ್ಲಿ ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 29ಕ್ಕೇರಿಕೆಯಾಗಿದೆ.
ಪುತ್ತೂರಿನ ಮಹಿಳೆ ಕೋವಿಡ್‌ ಸೋಂಕಿನಿಂದಾಗಿ ಕಿಡ್ನಿ ವೈಫಲ್ಯದಿಂದ ನಿಧನರಾಗಿದ್ದಾರೆ. ಹೆರಿಗೆಗೆಂದು ಜೂನ್ 20ರಂದು ಅವರನ್ನು ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 26ರಂದು ಅವರಿಗೆ ಹೆರಿಗೆಯಾಗಿದೆ. ಎರಡು ದಿನಗಳ ನಂತರ ಅವರ ಗಂಟಲು ದ್ರವ ಮಾದರಿ ಪರೀಕ್ಷಿಸಿದಾಗ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ನಂತರ ಅವರನ್ನು ಮಗುವಿನ ಸಮೇತ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜುಲೈ 5ರಂದು ವೆನ್ಲಾಕ್‌ನಿಂದ ಡಿಸ್ಟಾರ್ಜ್ ಆಗಿ ಕ್ವಾರಂಟೈನ್‌ನಲ್ಲಿದ್ದರು. ಜುಲೈ 6ರಂದು ಉಸಿರಾಟ ಸಮಸ್ಯೆ ಕಂಡುಬಂದಾಗ ಮತ್ತೆ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಕಳೆದ ರಾತ್ರಿ ಕಿಡ್ನಿ ವೈಫಲ್ಯದಿಂದ ಅವರು ಮೃತಪಟ್ಟಿದ್ದಾರೆ. ಎರಡು ಹೆಣ್ಣು ಮಕ್ಕಳು ಹಾಗೂ ಇತ್ತೀಚೆಗೆ ಜನಿಸಿದ ನವಜಾತ ಶಿಶುವನ್ನು ಅವರು ಅಗಲಿದ್ದಾರೆ.
ಇಲ್ಲಿ ಸೋಂಕಿನ ಮೂಲ ಫಾದರ್ ಮುಲ್ಲರ್ಸ್ ಆಸ್ಪತ್ರೆಯಾಗಿದೆ. ಅವರು ಏನೂ ಅರಿಯದವರಂತೆ ನಟಿಸಿ, ಭರಪೂರ ಬಿಲ್ ನೀಡಿದ್ದಾರೆ. ಪಾವತಿಸಿದ ನಂತರವೇ ವೆನ್ಲಾಕ್‌ಗೆ ಕಳುಹಿಸಿದ್ದಾರೆ ಫಾದರ್ ಮುಲ್ಲರ್ಸ್‌ ನವರ ನಿರ್ಲಕ್ಷ್ಯವೇ ಇವರ ಸಾವಿಗೆ ಕಾರಣ ಎಂದು ಮೃತರ ಸಂಬಂಧ ನೌಫಾಲ್ ಸಾಲ್ಮರ ಆರೋಪಿಸಿದ್ದಾರೆ.

 

Read These Next

ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಹೊನ್ನಾವರ ಠಾಣೆಯ ಪೊಲೀಸರು

ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಹೊನ್ನಾವರ ಠಾಣೆಯ ಪೊಲೀಸರು

ಸಿದ್ದಾಪುರದಲ್ಲಿ 203.2 ಮಿ.ಮೀ ಮಳೆ 

ಕಾರವಾರ: ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 43.6 ಮಿ.ಮೀ, ಭಟ್ಕಳ 12.0 ಮಿ.ಮೀ, ...

ಪ.ವರ್ಗದ ಫಲಾನುಭವಿಗಳಿಂದ ಗುಡಿ ಮತ್ತು ಅತೀ ಸೂಕ್ಷ್ಮ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಅರ್ಜಿ ಆಹ್ವಾನ      

ಕಾರವಾರ: ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಠ ವರ್ಗದ ಫಲಾನುಭವಿಗಳು ಗುಡಿ ಮತ್ತು ಅತೀ ಸೂಕ್ಷ್ಮ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಆಸಕ್ತಿ ...

ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಹೊನ್ನಾವರ ಠಾಣೆಯ ಪೊಲೀಸರು

ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಹೊನ್ನಾವರ ಠಾಣೆಯ ಪೊಲೀಸರು

ಭಟ್ಕಳ; ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಕೋವಿಡ್-19 ‘ಮರಳಿ ಸೃಷ್ಟಿಕರ್ತನ ಕಡೆಗೆ ಆಬಿಯಾನ’ಕ್ಕೆ ಚಾಲನೆ

ಭಟ್ಕಳ: ಇತ್ತಿಚೆಗೆ ನಡೆಯುತ್ತಿರುವ ಘಟನೆಗಳು ಮಾನವನನ್ನು ಎಚ್ಚರಿಸುತ್ತಿದ್ದು, ಮನುಷ್ಯರನ್ನು ಸರಿದಾರಿಗೆ ತರಲು ದೈವಿಕ ...

ಭಟ್ಕಳ: 60 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನದ ಬಿಸ್ಕತ್ ವಶ; ಪೊಲೀಸರ ಬಲೆಗೆ ಬಿದ್ದ ಶೈಲೇಶ್ ಮತ್ತು ವಿಫುಲ್

ಭಟ್ಕಳ: ಇಲ್ಲಿನ ಹೂವಿನ ಚೌಕ್ ಕ್ರಾಸ್ ಬಳಿ 60 ಲಕ್ಷ ಮೌಲ್ಯದ 1.5ಕೆಜಿ ಬಂಗಾರದ ನಮೂನೆಯ ಬಿಸ್ಕಿಟ್ ಮತ್ತು ಎಂಟು ಚಿನ್ನದ ಗಟ್ಟಿಗಳನ್ನು ...