ಕುಖ್ಯಾತ ಪಾತಕಿ, ರೌಡಿ ಶೀಟರ್ ವಿಕಾಸ್ ದುಬೆ ಎನ್ ಕೌಂಟರ್ ನಲ್ಲಿ ಸಾವು

Source: ANI | Published on 10th July 2020, 11:47 PM | National News | Don't Miss |

 

ಲಕ್ನೋ: ಎಂಟು ಮಂದಿ ಪೊಲೀಸರನ್ನು ಹತ್ಯೆ ಮಾಡಿ, ಪರಾರಿಯಾಗಿದ್ದ ಕುಖ್ಯಾತ ರೌಡಿಶೀಟರ್‌ ವಿಕಾಸ್‌ ದುಬೆ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ್ದಾನೆ. 
ವಿಕಾಸ್ ದುಬೆಯನ್ನು ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಪೊಲೀಸರು ಗುರುವಾರ ಬಂಧಿಸಿದ್ದರು. ಆತನನ್ನು ಮಧ್ಯಪ್ರದೇಶ ಪೊಲೀಸರು ಉತ್ತರ ಪ್ರದೇಶ ಪೊಲೀಸರಿಗೆ ಹಸ್ತಾಂತರಿಸಿದ್ದು, ಕಾನ್ಪುರಕ್ಕೆ ಕರೆತರುವ ವೇಳೆ ಪೊಲೀಸರ ಬೆಂಗಾವಲು ವಾಹನ ಮಗುಚಿದೆ. ಈ ನಡುವೆ ಪರಾರಿಯಾಗಲು ಯತ್ನಿಸಿದ ವಿಕಾಸ್‌ ದುಬೆ ಎನ್‌ಕೌಂಟರ್‌ನಿಂದ ಸಾವನ್ನಪ್ಪಿರುವುದಾಗಿ ಉತ್ತರ ಪ್ರದೇಶ ಪೊಲೀಸರು ದೃಢಪಡಿಸಿದ್ದಾರೆ.
ವಾಹನ ಉರುಳುವ ಮೊದಲು ಗುಂಡಿನ ಸದ್ದು ಕೇಳಿಸಿತು. ಮಳೆಯಿಂದ ತೊಯ್ದಿದ್ದ ರಸ್ತೆಯಲ್ಲಿ ವಾಹನ ಪಲ್ಟಿಯಾಯಿತು. ಈ ವೇಳೆ ಜೊತೆಗಿದ್ದ ಪೊಲೀಸರಿಂದ ರಿವಲ್ವಾರ್ ಕಸಿದು ವಿಕಾಸ್ ದುಬೆ ಪರಾರಿಯಾಗಲು ಯತ್ನಿಸಿದ್ದ ಎಂದು ಹೇಳಿದ್ದಾರೆ. ಅಪಘಾತದ ಬೆನ್ನಲ್ಲೆ ವಿಕಾಸ್‌ ದುಬೆ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿದ್ದಾರೆ. ಎನ್‌ಕೌಂಟರ್‌ನಲ್ಲಿ ವಿಕಾಸ್‌ ದುಬೆ ಮೃತಪಟ್ಟಿದ್ದಾನೆ ಎಂದು ಕಾನ್ಪುರ ಐಜಿ ಮೋಹಿತ್‌ ಅಗರ್ವಾಲ್‌ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ

Read These Next

‘ಕಾನೂನುಬಾಹಿರವಾಗಿ ಇಟ್ಟ ವಿಗ್ರಹ ಹೇಗೆ ದೇವರಾಯಿತು ಎಂಬ ಪ್ರಶ್ನೆಗೆ ಸುಪ್ರೀಂ ಕೋರ್ಟ್ ಉತ್ತರಿಸಿಲ್ಲ’

ಹೊಸದಿಲ್ಲಿ: ಬಾಬರಿ ಮಸೀದಿಯನ್ನು ಕಾನೂನು ಬಾಹಿರವಾಗಿ ಕೆಡವಲಾಯಿತು ಹಾಗೂ ಅದು ಯಾವಾಗಲೂ ಮಸೀದಿಯಾಗಿಯೇ ಉಳಿಯಲಿದೆ ಎಂದು ಅಖಿಲ ಭಾರತ ...

ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಹೊನ್ನಾವರ ಠಾಣೆಯ ಪೊಲೀಸರು

ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಹೊನ್ನಾವರ ಠಾಣೆಯ ಪೊಲೀಸರು

ಭಟ್ಕಳ; ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಕೋವಿಡ್-19 ‘ಮರಳಿ ಸೃಷ್ಟಿಕರ್ತನ ಕಡೆಗೆ ಆಬಿಯಾನ’ಕ್ಕೆ ಚಾಲನೆ

ಭಟ್ಕಳ: ಇತ್ತಿಚೆಗೆ ನಡೆಯುತ್ತಿರುವ ಘಟನೆಗಳು ಮಾನವನನ್ನು ಎಚ್ಚರಿಸುತ್ತಿದ್ದು, ಮನುಷ್ಯರನ್ನು ಸರಿದಾರಿಗೆ ತರಲು ದೈವಿಕ ...

ಭಟ್ಕಳ: 60 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನದ ಬಿಸ್ಕತ್ ವಶ; ಪೊಲೀಸರ ಬಲೆಗೆ ಬಿದ್ದ ಶೈಲೇಶ್ ಮತ್ತು ವಿಫುಲ್

ಭಟ್ಕಳ: ಇಲ್ಲಿನ ಹೂವಿನ ಚೌಕ್ ಕ್ರಾಸ್ ಬಳಿ 60 ಲಕ್ಷ ಮೌಲ್ಯದ 1.5ಕೆಜಿ ಬಂಗಾರದ ನಮೂನೆಯ ಬಿಸ್ಕಿಟ್ ಮತ್ತು ಎಂಟು ಚಿನ್ನದ ಗಟ್ಟಿಗಳನ್ನು ...