ಕೊರೋನಾ ಸೋಂಕಿತ ಭಟ್ಕಳದ ಸಂಪರ್ಕಕ್ಕಿಲ್ಲ-  ಸ್ಪಷ್ಟಪಡಿಸಿದ ಸಹಾಯಕ ಆಯುಕ್ತ

Source: sonews | By Staff Correspondent | Published on 23rd March 2020, 1:13 AM | Coastal News | Don't Miss |

ಭಟ್ಕಳ: ಮಾ.19 ರಂದು ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿರುವ ಭಟ್ಕಳ ಮೂಲದ ಯುವಕನಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಎಸ್.ಭರತ್ ಭಾನುವಾರ ತುರ್ತುಪತ್ರಿಕಾ ಗೋಷ್ಟೀಯನ್ನು ಕರೆದು ಸ್ಪಷ್ಟನೆ ನೀಡಿದ್ದು ಸೋಂಕು ದೃಢಪಟ್ಟಿರುವ ಯುವಕ ಭಟ್ಕಳದ ಸಂಪರ್ಕಕ್ಕೆ ಬಂದಿಲ್ಲ.

ದುಬೈಯಿಂದ ಮಂಗಳೂರಿಗೆ ಬಂದ ಯುವಕನನ್ನು ನೇರವಾಗಿ ಆಸ್ಪತ್ರೆಗೆ ಸಾಗಿಸಿ ಅಲ್ಲಿ ಚಿಕಿತ್ಸೆಯನ್ನು ನೀಡಗುತ್ತಿದೆ. ಆತನೊಂದಿಗೆ ಬಂದಿರುವ ಇತರ ಮೂವರು ಭಟ್ಕಳಿಗರಿಗೆ ಯಾವುದೇ ರೀತಿಯ ಸೋಂಕು ಇರುವುದಿಲ್ಲ. ಅವರನ್ನು ಗೃಹಬಂಧನದಲ್ಲಿರಿಸಿ ತೀವ್ರ ನಿಗಾ ಇಡಲಾಗಿದೆ ಎಂದರು. ಭಟ್ಕಳದ ಜನರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಹೊರದೇಶದಿಂದ ಬಂದಿರುವ ಎಲ್ಲರನ್ನೂ ಕೂಡ ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ದಿನಾಲೂ ಪರಿಶೀಲನೆ ನಡೆಸುತ್ತಿದ್ದಾರೆ. ಎಲ್ಲರೂ ಕೂಡ ತಮ್ಮ ತಮ್ಮ ಆರೋಗ್ಯದ ಬಗ್ಗೆ ಜಾಗೃತಿ ವಹಿಸಿ ಹೊರಗಡೆ ಜನ ಸೇರುವ ಪ್ರದೇಶಗಳಿಗೆ ಹೋಗದೆ ಅಂತರ ಕಾಯ್ದುಕೊಳ್ಳುವಂತೆ ಅವರು ಸೂಚಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಅಶೋಕ್, ತಾಲೂಕಾ ಆರೋಗ್ಯಾಧಿಕಾರಿ ಡಾ.ಮೂರ್ತಿರಾಜ್ ಭಟ್, ತಹಸಿಲ್ದಾರ್ ವಿ.ಪಿ.ಕೊಟ್ರೋಳ್ಳಿ ಉಪಸ್ಥಿತರಿದ್ದರು. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...