ಭಟ್ಕಳದಲ್ಲಿ ಮಳೆಗೆ ಮತ್ತೆ 5 ಮನೆಗಳಿಗೆ ಹಾನಿ

Source: S O News Service | By I.G. Bhatkali | Published on 4th September 2019, 5:26 PM | Coastal News | Don't Miss |

ಭಟ್ಕಳ: ನಿರಂತರ ಮಳೆಗೆ ಭಟ್ಕಳ ತಾಲೂಕಿನಲ್ಲಿ ಮತ್ತೆ 5 ಮನೆಗಳಿಗೆ ಹಾನಿಯಾಗಿದೆ.

ಹಾನಿಗೀಡಾದವರನ್ನು ಮಾಸ್ತಿ ಮಂಜಪ್ಪ ಬೆಂಗ್ರೆ, ಲಕ್ಷ್ಮೀ ರಾಮಾ ಮರಾಠಿ ಕಾಸಗೇರಿ ಬೈಲೂರು, ಕುಪ್ಪಯ್ಯ ಲಚ್ಮಯ್ಯ ನಾಯ್ಕ ಹದ್ಲೂರು ಆಶಿಕಾನ್, ಮಾದೇವೇ ಕೋಂ ಜಟ್ಟಪ್ಪ ನಾಯ್ಕ ದೀವಗೇರಿ ಮಾವಳ್ಳಿ 2 , ಹೆರಿಯಾ ಬಿನ್ ಸೋಮ ನಾಯ್ಕ ಬೆಳಕೆ ಎಂದು ಹೆಸರಿಸಲಾಗಿದೆ. ಈ ಪೈಕಿ 3 ಮನೆಗಳಲ್ಲಿ ಜನರು ವಾಸಿಸುತ್ತಿದ್ದರೆ, 2 ಮನೆಗಳು ವಾಸವಿಲ್ಲದ ಮನೆಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಳೆಯಿಂದಾಗಿ ಮನೆಯ ಗೋಡೆಗಳು ಕುಸಿದು ಬಿದ್ದಿವೆ. ಹಾನಿಯ ಒಟ್ಟೂ ಮೌಲ್ಯ ಅಜಮಾಸು ರು.1 ಲಕ್ಷ 50 ಸಾವಿರ ಎಂದು ಅಂದಾಜಿಸಲಾಗಿದೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...