ಕಲ್ಯಾಣ ರಾಷ್ಟ್ರ ನಿರ್ಮಾಣಕ್ಕೆ ಸಂವಿಧಾನ ಅತ್ಯಗತ್ಯ.: ನಾಗಮೋಹನ ದಾಸ್

Source: so news | By MV Bhatkal | Published on 23rd June 2019, 4:40 PM | Coastal News | Don't Miss |

ಕಾರವಾರ: ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಳಿಗೆ ನಿಯಮಗಳನ್ನು ರೂಪಿಸಿರುವಂತಹದ್ದು ಸಂವಿಧಾನವಾಗಿದ್ದು,  ಕಲ್ಯಾಣ ರಾಷ್ಟ್ರ ನಿರ್ಮಾಣಕ್ಕೆ ಸಂವಿಧಾನ ಅತ್ಯಗತ್ಯ.ವಾಗಿದೆ ಎಂದು ಹೈಕೋರ್ಟನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಹೇಳಿÀದರು. 
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ನ್ಯಾಯವಾಧಿಗಳ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ರವಿವಾರ ನಗರದ ಜಿಲ್ಲಾ ರಂಗ ಮಂದಿರದಲ್ಲಿ ಆಯೋಜಿಸಲಾದ ಸಂವಿಧಾನ ಓದು ಕಾರ್ಯಗಾರವನ್ನು,  ಭಾರತ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಉದ್ಘಾಟಿಸಿ ಮಾತನಾಡಿದರು.  ಭಾರತ ಸಂವಿಧಾನದಲ್ಲಿ ಯಾವುದೇ ದೋಷಗಳಿಲ್ಲ, ಆದರೆ ಸಂವಿಧಾನ ಜಾರಿಗೊಳಿಸುವಲ್ಲಿ ದೋಷಗಳಾಗುತ್ತಿವೆ. ಈ ನಿಟ್ಟಿನಲ್ಲಿ ಜನರು ಸಂವಿಧಾನ ಓದಿ ತಿಳಿದು ಅರ್ಥಮಾಡಿಕೊಳ್ಳಬೇಕಾಗಿರುವುದು ಇಂದಿನ ಅಗತ್ಯವಾಗಿದೆ. 
ನಮ್ಮ ಭಾರತದ ಸಂವಿಧಾನ ಕೇವಲ ದೊಡ್ಡ ಸಂವಿಧಾನ ಮಾತ್ರವಲ್ಲ ಅತ್ಯುತ್ತಮ ಸಂವಿಧಾನ ಕೂಡಾ ಆಗಿದೆ. ಸರ್ವಜನರ ಒಳತಿಗಾಗಿ ರಚಿಸಿದಂತಹದ್ದಾಗಿದೆ. ಮಹಿಳೆಯರು, ದೀನ ದಲಿತರು, ಬುಡಕಟ್ಟರು ತಲೆ ಎತ್ತಿ ಬದುಕುತ್ತಿದ್ದಾರೆಂದರೆ ಅದಕ್ಕೆ ಸಂವಿಧಾನ ಮೂಲ ಕಾರಣವಾಗಿದೆ ಎಂದು ತಿಳಿಸಿದರು. 
 ಸಂವಿಧಾನದಡಿ ಕಾಯಿದೆ ಕಾನೂನುಗಳನ್ನು ರೂಪಿಸಲಾಗಿದೆ. ಪ್ರತಿ ವ್ಯಕ್ತಿಯೂ ಹುಟ್ಟಿನಿಂದ ಸಾಯುವರೆಗೂ ಕಾನೂನಡಿ ಬದುಕುತ್ತಾನೆ. ಸಂವಿಧಾನವು ಸಮಾನತೆಯ, ಸ್ವಾತಂತ್ರ್ಯದ, ಶೋಷಣೆಯ ವಿರುದ್ದ, ಧಾರ್ಮಿಕ ಸ್ವಾತಂತ್ರ್ಯ, ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಹಕ್ಕನ್ನು ನೀಡಿರುತ್ತದೆ.  ಆದ್ದರಿಂದ ಎಲ್ಲರೂ ಸಂವಿಧಾನವನ್ನು ಓದಿ ಅರ್ಥೈಸಿಕೊಳ್ಳುವುದು ಅಗತ್ಯವಾಗಿದೆ. ಸಂವಿಧಾನದ ಭಾಗ -4ರಲ್ಲಿರುವ ರಾಜ್ಯ ನಿರ್ದೇಶಕ ತತ್ವಗಳು ಕೂಡಾ ಕಲ್ಯಾಣ ರಾಜ್ಯಕಾಗಿ ಮಾಡಬೇಕಾಗಿರುವುದನ್ನು ಹೇಳಿವೆ. ಇಂತಹ ನಮ್ಮ ಸಂವಿಧಾನವನ್ನು ಸರಿಯಾಗಿ ಓದಿ ಅರ್ಥಮಾಡಿಕೊಂಡು ಅದನ್ನು ರಕ್ಷಿಸಬೇಕಾಗಿದೆ ಎಂದು ಅವರು ಹೇಳಿದರು. 
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಗೋವಿಂದಯ್ಯ ಸ್ವಾಗತಿಸಿದರು. ಜಿಲ್ಲಾ ನ್ಯಾಯವಾಧಿಗಳ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಚ್. ನಾಯ್ಕ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.   ಸಂವಿಧಾನ ಓದು ಅಭಿಯಾನ ಸಮಿತಿಯ ಸಂಚಾಲಕ ವಿಠ್ಠಲ ಭಂಡಾರಿ ವಂದನಾರ್ಪಣೆ ಸಲ್ಲಿಸಿದರು. 
ಜಿಲ್ಲಾ ಪಂಚಾಯತ್ ಪ್ರಭಾರ ಯೋಜನಾಧಿಕಾರಿ ಶ್ರೀಮತಿ ಶಾಮಲಾ ಮಹಾಲೆ, ಸಹಯಾನ ಕೆರೆಕೋಣ ಸಂಸ್ಥೆಯ ಶಾಂತಾರಾಮ ನಾಯಕ, ಹಿಚ್ಕಡ ಸೇರಿದಂತೆ ಇತರರು ವೇಧಿಕೆ ಮೇಲೆ ಉಪಸ್ಥಿತರಿದ್ದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...