ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಕಳೆದ ಬಳಿಕ ಇದೀಗ ಚುನಾವಣಾ ನಂತರದ ಸಮೀಕ್ಷೆಗಳು ಪ್ರಕಟವಾಗುತ್ತಿದೆ. ಹಲವು ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ವಿಧಾನಸಭೆ ಸೃಷ್ಟಿಯ ಕುರಿತು ಪ್ರತಿಪಾದಿಸಿ, ಕಾಂಗ್ರೆಸ್ ಹೆಚ್ಚು ಸೀಟುಗಳನ್ನು ಪಡೆಯಲಿದೆ ಎಂದು ಹೇಳಿದೆ. ಈ ನಡುವೆ ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ಹೇಳಿದೆ.
ಕಾಂಗ್ರೆಸ್ ಪಕ್ಷವು 122 ರಿಂದ 140 ಸೀಟುಗಳನ್ನು ಗಳಿಸಿ ಸ್ಪಷ್ಟ ಬಹುಮತ ಪಡೆದರೆ, ಬಿಜೆಪಿ 62-80, ಜೆಡಿಎಸ್ 20-25 ಹಾಗೂ ಇತರ ಪಕ್ಷಗಳು 0-3 ಸೀಟುಗಳನ್ನು ಗಳಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ವಿವಿಧ ಸಮೀಕ್ಷೆಗಳ ಪ್ರಕಾರ ಈ ಬಾರಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
* ಇಂಡಿಯಾ ಟುಡೇ ಸಮೀಕ್ಷೆ
ಕಾಂಗ್ರೆಸ್: 122–140
ಬಿಜೆಪಿ: 62–80
ಜೆಡಿಎಸ್: 20–25
ಇತರರು: 0–3
* ಟುಡೇಸ್ ಚಾಣಕ್ಯ ಸಮೀಕ್ಷೆ
ಕಾಂಗ್ರೆಸ್: 120
ಬಿಜೆಪಿ: 92
ಜೆಡಿಎಸ್: 12
ಇತರರು: 3
* ಟಿವಿ9 ಕನ್ನಡ, ಸಿ–ವೋಟರ್ ಸಮೀಕ್ಷೆ
ಕಾಂಗ್ರೆಸ್: 100–112
ಬಿಜೆಪಿ: 89–95
ಜೆಡಿಎಸ್: 21–29
ಇತರರು: 2–6
* ಟಿವಿ9 ಭಾರತವರ್ಷ್, ಪೋಲ್‌ಸ್ಟ್ರಾಟ್ ಸಮೀಕ್ಷೆ
ಕಾಂಗ್ರೆಸ್: 99–109
ಬಿಜೆಪಿ: 88–98
ಜೆಡಿಎಸ್: 21–26
ಇತರರು: 0–4 ಸ್ಥಾನ
* ಏಷ್ಯಾನೆಟ್ ಸುವರ್ಣನ್ಯೂಸ್, ಜನ್ ಕೀ ಬಾತ್ ಎಕ್ಸಿಟ್ ಪೋಲ್ ಸಮೀಕ್ಷೆ
ಕಾಂಗ್ರೆಸ್: 91–106
ಬಿಜೆಪಿ: 94–117
ಜೆಡಿಎಸ್: 14–24
ಇತರರು: 0-2
* ಜೀ ನ್ಯೂಸ್ ಮ್ಯಾಟ್ರೈಜ್ ಸಮೀಕ್ಷೆ
ಕಾಂಗ್ರೆಸ್: 103–118
ಬಿಜೆಪಿ: 79–94
ಜೆಡಿಎಸ್: 25–33
ಇತರರು: 2–5
* ಪಿ–ಮಾರ್ಕ್, ರಿಪಬ್ಲಿಕ್ ಸಮೀಕ್ಷೆ
ಕಾಂಗ್ರೆಸ್: 94–108
ಬಿಜೆಪಿ: 85–100
ಜೆಡಿಎಸ್: 24–32
ಇತರರು: 2–6
* ಎಬಿಪಿ, ಸಿ–ವೋಟರ್ ಸಮೀಕ್ಷೆ
ಕಾಂಗ್ರೆಸ್: 99–109
ಬಿಜೆಪಿ: 88–98
ಜೆಡಿಎಸ್: 21-26
ಇತರರು: 0
* ಟೈಮ್ಸ್ ನೌ ಹಾಗೂ ಇಟಿಜಿ ಸಮೀಕ್ಷೆ
ಕಾಂಗ್ರೆಸ್: 113
ಬಿಜೆಪಿ: 85
ಜೆಡಿಎಸ್: 23
ಇತರರು: 3
* ನ್ಯೂಸ್ 18 ಸಮೀಕ್ಷೆ
ಕಾಂಗ್ರೆಸ್: 99-109
ಬಿಜೆಪಿ: 88-98
ಜೆಡಿಎಸ್: 21-26
ಇತರರು: 0–4
* ನ್ಯೂಸ್ ನೇಷನ್ – ಸಿಜಿಎಸ್ ಸಮೀಕ್ಷೆ
ಕಾಂಗ್ರೆಸ್: 86
ಬಿಜೆಪಿ: 114
ಜೆಡಿಎಸ್: 21
* ನವ ಭಾರತ್ ಸಮೀಕ್ಷೆ
ಕಾಂಗ್ರೆಸ್: 106–120
ಬಿಜೆಪಿ: 78-92
ಜೆಡಿಎಸ್: 20-26
ಇತರರು: 2–4
* ಇಂಡಿಯಾ ಟಿವಿ–ಸಿಎನ್‌ಎಕ್ಸ್ ಸಮೀಕ್ಷೆ
ಕಾಂಗ್ರೆಸ್: 115
ಬಿಜೆಪಿ: 85
ಜೆಡಿಎಸ್: 22
ಇತರರು: 2