9 ವರ್ಷಗಳ ಮೋದಿ ಆಳಿಕೆಯಲ್ಲಿ ಸಾಲ 155 ಲಕ್ಷ ಕೋಟಿ ರೂ.ಗೆ ಏರಿಕೆ; ಕಾಂಗ್ರೆಸ್ ಆರೋಪ

Source: Vb | By I.G. Bhatkali | Published on 13th June 2023, 8:08 AM | National News |

ಹೊಸದಿಲ್ಲಿ: ಹಿಂದಿನ 14 ಪ್ರಧಾನಿಗಳ 67 ವರ್ಷಗಳ ಒಟ್ಟು ಆಡಳಿತಾವಧಿಯಲ್ಲಿ ದೇಶದ ಸಾಲವು 55 ಲಕ್ಷ ಕೋಟ ರೂ.ಗಳಿಷ್ಟಿದ್ದುದು, ನರೇಂದ್ರ ಮೋದಿ ಸರಕಾರದ 9 ವರ್ಷಗಳ ಆಳ್ವಿಕೆಯಲ್ಲಿ 155 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಕಾಂಗ್ರೆಸ್ ಪಕ್ಷ ಆಪಾದಿಸಿದೆ.

ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಥೆ ಶನಿವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ 'ಮಾಧ್ಯಮಗಳಲ್ಲಿ ತಲೆಬರಹಗಳ ನಿರ್ವಹಣೆಯನ್ನು ಮಾಡಿದ ಹಾಗೆ ಆರ್ಥಿಕ ನಿರ್ವಹಣೆಯನ್ನು ಮಾಡಲಾಗದು' ಎಂದು ಕೇಂದ್ರದ ವಿರುದ್ಧ ವ್ಯಂಗ್ಯವಾಡಿದರು.

2014ರಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದಾಗಿನಿಂದ ಆರ್ಥಿಕತೆಯ ಕೆಟ್ಟ ನಿರ್ವಹಣೆಯಿಂದಾಗಿ ಸಾಲದ ಮೊತ್ತದಲ್ಲಿ 100 ಲಕ್ಷ ಕೋಟಿ ರೂ. ಏರಿಕೆಯಾಗಿದೆ ಎಂದರು.

“ಆರ್ಥಿಕ ನಿರ್ವಹಣೆಯನ್ನು ಟೆಲಿಪ್ರಾಂಪ್ಟರ್‌ಗಳು ಅಥವಾ ವಾಟ್ಸ್ ಆ್ಯಪ್ ಫಾರ್ವಡ್್ರ ಸಂದೇಶಗಳ ಮೂಲಕ ಮಾಡಲು ಸಾಧ್ಯವಿಲ್ಲ. ಭಾರತದ ಆರ್ಥಿಕತೆಯ ಅಪಾಯದ ಗೆರೆಗಳು ಎಂದ ಶ್ರೀನಾಥೆ, ದೇಶದ ಆರ್ಥಿಕತೆಯ ಬಗ್ಗೆ ಕೇಂದ್ರ ಸರಕಾರ ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿದರು.

ಶೇ.50ರಷ್ಟು ಭಾರತೀಯರು ದೇಶದ ಸಂಪತ್ತಿನ ಕೇವಲ ಶೇ.3ರಷ್ಟು ಭಾಗವನ್ನು ಹೊಂದಿದ್ದು, ಶೇ. 64ರಷ್ಟು ಜಿಎಸ್‌ಟಿ ತೆರಿಗೆಯನ್ನು ಅವರು ಪಾವತಿಸುತ್ತಿದ್ದಾರೆ. ದೇಶದ ಸಂಪತ್ತಿನ ಶೇ.80ರಷ್ಟು ಪಾಲನ್ನು ಹೊಂದಿರುವ ಶೇ.10ರಷ್ಟು ಶ್ರೀಮಂತರು ಕೇವಲ ಶೇ.3ರಷ್ಟು ಜಿಎಸ್ ಟಿಯನ್ನು ಪಾವತಿಸುತ್ತಿದ್ದಾರೆ ಎಂದವರು ಹೇಳಿದರು. ಹೆಚ್ಚುತ್ತಿರುವ ಸಾಲದ ಮೊತ್ತಕ್ಕೆ ಭಾರತವು ವಾರ್ಷಿಕವಾಗಿ 11 ಲಕ್ಷ ಕೋಟಿ ರೂ. ಬಡ್ಡಿಯನ್ನು ಪಾವತಿಸಬೇಕಾಗಿದೆ ಎಂದು ಶ್ರೀನಾಥೆ ತಿಳಿಸಿದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...