ಎಂನರೇಗಾ: ಕೇಂದ್ರದಿಂದ ರಾಜ್ಯಗಳಿಗೆ 6,366 ಕೋಟಿ ರೂ. ಬಾಕಿ, ಪ.ಬಂಗಾಳಕ್ಕೆ ಗರಿಷ್ಠಪಾವತಿ ಬಾಕಿ, ಕರ್ನಾಟಕಕ್ಕೆ 630 ಕೋ.ರೂ. ಬಾಕಿ

Source: Vb | By I.G. Bhatkali | Published on 3rd August 2023, 11:25 AM | National News |

ಹೊಸದಿಲ್ಲಿ: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯಗಳು ಹಾಗೂ ಕೇಂದ್ರಾಡಳಿತಗಳಿಗೆ 6,366 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಬಾಕಿ ಯಿರಿಸಿರುವುದಾಗಿ ಗ್ರಾಮೀಣ ಅಭಿವೃದ್ಧಿಸಚಿವಾಲ ಯವು ಮಂಗಳವಾರ ಲೋಕಸಭೆಗೆ ತಿಳಿಸಿದೆ.

ಕಾಂಗ್ರೆಸ್ ಸಂಸದೆ ರಮ್ಯಾ ಹರಿದಾಸ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗ್ರಾಮೀಣ ಅಭಿವೃದ್ಧಿ ಖಾತೆಯ ಸಹಾಯಕ ಸಚಿವೆ ಸಾದ್ದಿ ನಿರಂಜನ್ ಈ ಮಾಹಿತಿಯನ್ನು ನೀಡಿದ್ದಾರೆ.

ಕೇಂದ್ರ ಸರಕಾರವು ಪಶ್ಚಿಮಬಂಗಾಳಕ್ಕೆ 2,813 ಕೋಟಿ ರೂ. ಬಾಕಿಯಿರಿಸಿದ್ದು, ಇದು ಅತ್ಯಧಿಕವಾಗಿದೆ. ಐದು ತಿಂಗಳುಗಳಿಗೂ ಅಧಿಕ ಸಮಯದವರೆಗೆ ಕೇಂದ್ರದಿಂದ ಎಂನರೇಗಾ ಹಣ ಪಾವತಿಗೆ ಬಾಕಿಯಿರುವ ಏಕೈಕ ರಾಜ್ಯ ಪಶ್ಚಿಮಬಂಗಾಳವಾಗಿದೆಯೆಂದು ಅವರು ಹೇಳಿದರು. ಉತ್ತರಪ್ರದೇಶಕ್ಕೆ 700 ಕೋಟಿ ರೂ. ಹಾಗೂ ಕರ್ನಾಟಕಕ್ಕೆ 630 ಕೋಟಿ ರೂ.ಗಳೊಂದಿಗೆ ಕ್ರಮವಾಗಿ ಆನಂತರದ ಸ್ಥಾನಗಳಲ್ಲಿವೆ.

ಎಂನರೇಗಾ ಸಂಘರ್ಷ ಮೋರ್ಚಾ ಹಕ್ಕುಗಳ ಸಮಿತಿ ನೀಡಿರುವ ಅಂಕಿಅಂಶಗಳ ಪ್ರಕಾರ 2021ರ ಡಿಸೆಂಬರ್ 26ರಂದು ಪಶ್ಚಿಮಬಂಗಾಳದಲ್ಲಿ ಎಂನರೇಗಾ ಕಾರ್ಮಿಕರಿಗೆ ಕೊನೆಯ ಬಾರಿಗೆ ವೇತನ ಪಾವತಿಸಲಾಗಿತ್ತು. ಕೇಂದ್ರ ಸರಕಾರವು ಕೂಲಿ ವೇತನ ಸೇರಿದಂತೆ ಎಂನರೇಗಾ ನಿಧಿಗೆ 7,500 ಕೋಟಿಗೂ ಅಧಿಕ ಹಣವನ್ನು ಪಾವತಿಸುವುದನ್ನು ಬಾಕಿಯಿರಿಸಿದೆ. ಎಂನರೇಗಾ ಯೋಜನೆಯಲ್ಲಿ ರಾಜ್ಯ ಸರಕಾರಿ ಮಟ್ಟದಲ್ಲಿ ಭ್ರಷ್ಟಾಚಾರ ನಡೆದಿರುವುದು ಪಶ್ಚಿಮಬಂಗಾಳಕ್ಕೆ ನಿಧಿಯ ವಿತರಣೆಯನ್ನು ತಡೆಹಿಡಿಯಲು ಕಾರಣವೆಂದು ಕೇಂದ್ರ ಸರಕಾರ ಹೇಳಿಕೊಂಡಿದೆ. 2005ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಜಾರಿಗೊಳಿಸಿದ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯು ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೆ 100 ದಿನಗಳ ಕೌಶಲ್ಯರಹಿತ ಕೆಲಸವನ್ನು ಖಾತರಿಪಡಿಸುತ್ತಿದೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...