ಭಾರತದ ಯುಪಿಐ-ಸಿಂಗಾಪುರದ ಪೇ ನೌ ಜೊತೆ ಲಿಂಕ್; ಗಡಿಯಾಚೆಗಿನ ಪಾವತಿ ಸಂಪರ್ಕ ಆರಂಭ

Source: Vb | By I.G. Bhatkali | Published on 23rd February 2023, 8:55 AM | National News |

ಹೊಸದಿಲ್ಲಿ: ಸಿಂಗಾಪುರದ ಪೇ ನೌ ಜೊತೆಗೆ ಯುಪಿಐಯನ್ನು ಜೋಡಿಸಲಾಗಿದೆ ಎಂದು ಕೇಂದ್ರ ಸರಕಾರ ಮಂಗಳವಾರ ಪ್ರಕಟಿಸಿದೆ.

ಈ ಕ್ರಮ ಉಭಯ ದೇಶಗಳ ಬಳಕೆದಾರರಿಗೆ ಗಡಿಯಾಚೆಗಿನ ವಹಿವಾಟುಗಳನ್ನು ನಡೆಸಲು ಅನುವು ಮಾಡಿಕೊಡುತ್ತದೆ. ಇದು ಉಭಯ ದೇಶಗಳ ನಡುವಿನ ಈ ರೀತಿಯ ಮೊದಲ ಒಪ್ಪಂದವಾಗಿದೆ.

ಯುಪಿಐ-ಪೇ ನೌ ಲಿಂಕ್ ಅನ್ನು ಪ್ರಾರಂಭಿಸಿದ ನಂತರ ಎರಡು ದೇಶಗಳ ನಡುವಿನ ಹಣದ ವಹಿವಾಟು ತುಂಬಾ ಸುಲಭ ವಾಗುತ್ತದೆ. ಇನ್ನು ಮುಂದೆ ಜನರು ದೇಶದ ಒಳಗೆ ಹಣವನ್ನು ವರ್ಗಾವಣೆ ಮಾಡುವಂತೆ ಯುಪಿಐ ಮೂಲಕ ಸಿಂಗಾಪುರಕ್ಕೆ ಹಣ ವರ್ಗಾಯಿಸಲು ಸಾಧ್ಯವಾಗುತ್ತದೆ. ಸಿಂಗಾಪುರ ದಲ್ಲಿ ನೆಲೆಸಿರುವ ಭಾರತೀಯರು ಪೇ ನೌ ಹಾಗೂ ಯುಪಿಐ ಮೂಲಕ ಹಣದ ವಹಿವಾಟು ನಡೆಸಬಹುದಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಇಂಡಿಯನ್ ಓವರ್ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್‌ ಗ್ರಾಹಕರು ಹಣವನ್ನು ಸ್ವೀಕರಿಸುವ ಹಾಗೂ ರವಾನಿಸುವ ಎರಡೂ ಸೌಲಭ್ಯವನ್ನು ಪಡೆಯುತ್ತಾರೆ. ಆಕ್ಸಿಸ್ ಬ್ಯಾಂಕ್ ಮತ್ತು ಡಿಸಿಬಿ ಬ್ಯಾಂಕ್ ಗ್ರಾಹಕರು ಹಣವನ್ನು ರವಾನೆ ಮಾತ್ರ ಮಾಡಬಹುದು.

ಯುಪಿಐ-ಪೇ ನೌ ಸಂಪರ್ಕ ಉಭಯ ದೇಶಗಳ ಡಿಜಿಟಲ್ ಪಾವತಿ ವ್ಯವಸ್ಥೆಗಳ ಬಳಕೆದಾರರಿಗೆ ಇತರ ಪಾವತಿ ವ್ಯವಸ್ಥೆಯ ಅಗತ್ಯವಿಲ್ಲದೇ ಪರಸ್ಪರ ಆಧಾರದ ಮೇಲೆ ತ್ವರಿತವಾಗಿ, ಕಡಿಮೆ ವೆಚ್ಚದಲ್ಲಿ ನಿಧಿ ವರ್ಗಾವಣೆ ಮಾಡಲು ಅನುವು ಮಾಡಿ ಕೊಡುತ್ತದೆ.

ಇದು ಸಿಂಗಾಪುರದಲ್ಲಿರುವ ಭಾರತೀಯ ವಲಸಿಗರಿಗೆ, ವಿಶೇಷವಾಗಿ ವಲಸೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ ಸಿಂಗಾಪುರದಿಂದ ಭಾರತಕ್ಕೆ ತ್ವರಿತವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಹಣ ವರ್ಗಾವಣೆ ಮಾಡಲು ಸಹಾಯ ಮಾಡುತ್ತದೆ.

ಆರ್‌ಬಿಐ ರವಾನೆ ಸಮೀಕ್ಷೆ 2021ರ ಪ್ರಕಾರ 2020-21ರಲ್ಲಿ ಭಾರತಕ್ಕೆ ಒಟ್ಟು ಆಂತರಿಕ ಹಣ ರವಾನೆಗಳಲ್ಲಿ ಸಿಂಗಾಪುರದ ಪಾಲು ಶೇ. 5.7 ಇದೆ.

ಯುಪಿಐ ಹಾಗೂ ಪೇ ನೌ ಅನ್ನು ಲಿಂಕ್ ಮಾಡುವ ಘೋಷಣೆಯ ವೀಡಿಯೊ ಕಾನ್ವರೆನ್ಸಿಂಗ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಂಗಾಪುರದ ಪ್ರಧಾನಿ ಲೀ ಸಿಯೇನ್ ಲೂಂಗ್, ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹಾಗೂ ಸಿಂಗಾಪುರದ ವಿತ್ತೀಯ ಪ್ರಾಧಿಕಾರದ ಆಡಳಿತ ನಿರ್ದೇಶಕ ರವಿ ಮೆನನ್ ಮೊದಲಾದವರು ಪಾಲ್ಗೊಂಡಿದ್ದರು. ಈ ಸಂದರ್ಭ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಕ್ರಮ ಗಡಿಯಾಚೆಗಿನ ಪಾವತಿ ಸಂಪರ್ಕದ ಹೊಸ ಅಧ್ಯಾಯವನ್ನು ತೆರೆಯುತ್ತದೆ. ಇಂದಿನಿಂದ ಸಿಂಗಾಪುರ ಹಾಗೂ ಭಾರತದ ಜನರು ತಮ್ಮ ದೇಶದಲ್ಲಿ ಮೊಬೈಲ್ ಮೂಲಕ ಹಣ ವರ್ಗಾವಣೆ ಮಾಡಿದಂತೆ ವರ್ಗಾವಣೆ ಮಾಡಲು ಸಾಧ್ಯವಾಗಲಿದೆ ಎಂದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...