ಬಿರುಸಿನ ಮಳೆಗೆ ಇಂದು ಬಿಡುವು; ಮೂರು ದಿನಗಳ ನಿರಂತರ ಮಳೆಗೆ ಸಾವಿರಾರು ರೂ ನಷ್ಟ

Source: sonews | By Staff Correspondent | Published on 12th July 2019, 11:17 PM | Coastal News | Don't Miss |

ಭಟ್ಕಳ: ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ಬಿದ್ದ ಮಳೆಗೆ ಶುಕ್ರವಾರ ಬಿಡುವು ದೊರೆತಿದ್ದು ಮೂರುದಿನಗಳಲ್ಲಿ ತಾಲೂಕಿನ ಜನತೆ ಹಲವು ಅವಾಂತರಗಳನ್ನು ಎದುರಿಸುವಂತಾಗಿದೆ. ಮಳೆಗೆ ತಾಲೂಕಿನಾದ್ಯಂತ ಹಲವು ಮನೆಗಳು ಕುಸಿದು ಬಿದ್ದಿದ್ದು ಸಾವಿರಾರು ರೂ ನಷ್ಟ ಸಂಭವಿಸಿದೆ.

ಮಳೆಯಿಂದಾಗಿ ತಾಲೂಕಿನಾದ್ಯಂತ ಹಲವು ಅವಾಂತರಗಳಿಗೆ ಕಾರಣವಾಗಿದ್ದು, ಸಾಕಷ್ಟು ಕಡೆಗಳಲ್ಲಿ ವಿದ್ಯುತ ಕಂಬ ಬಿದ್ದು ಹಾನಿ ಸಂಭವಿಸಿದ್ದರ ಜೊತೆಗೆ ಇದೀಗ ಕೆಲವು ಕಡೆ ಭಾಗಶಃ ಮನೆಗಳು ಹಾಗೂ ಗೋಡೆಗಳು ಕುಸಿದಿದೆ. 

ಇಲ್ಲಿನ ಕಾಯ್ಕಿಣಿ ಗ್ರಾಮದ ಹೆರಾಡಿ ಮಜರೆಯ ಗಣಪತಿ ತಿಮ್ಮಪ್ಪ ನಾಯ್ಕ ಇವರ ವಾಸ್ತವ್ಯದ ಪಕ್ಕ ಮನೆಯು ಗಾಳಿ-ಮಳೆಗೆ ಕುಸಿದು ಬಿದ್ದಿದ್ದು ಯಾವುದೇ ಪ್ರಾಣಹಾನಿ ಸಂಭವಿಸದೇ ಹಾನಿಯ ಅಂದಾಜು 30 ಸಾವಿರ ಆಗಿದೆ. 

ಇನ್ನು ಹೆಬಳೆ ಗ್ರಾಮದ ತೆಂಗಿನಗುಂಡಿ ಮಜರೆಯಲ್ಲಿ ಗೋವರ್ಧನ ಕೃಷ್ಣ ಕಾಮತ ಇವರ ಕಚ್ಚಾ ಅಂಗಡಿಯ ಗೋಡೆ ಕುಸಿದು ಬಿದ್ದ ಪರಿಣಾಮ ಅಲ್ಲೆ ಪಕ್ಕದಲ್ಲಿ ಇದ್ದ ಮಂಜುನಾಥ ಜಟ್ಟಾ ನಾಯ್ಕ ಇವರ ವಾಸ್ತವ್ಯದ ಮನೆಯ ಗೊಡೆಗೆ ಅಲ್ಪ ಪ್ರಮಾಣದ ಹಾನಿ ಆಗಿರುತ್ತದೆ. ಯಾವುದೇ ಜನ-ಜಾನುವಾರುಗಳಿಗೆ ತೊಂದರೆ ಆಗಿಲ್ಲವಾಗಿದೆ. ಮುಂಡಳ್ಳಿಯ  ಈಶ್ವರ ಶಂಕರಯ್ಯ ಹಳ್ಳೇರ ಇವರ ವಾಸ್ತವ್ಯ ಮನೆಯ ಹಿಂಭಾಗದ ಗೋಡೆ ಕುಸಿದಿದ್ದು, ಅಲ್ಲಿಯೂ ಸಹ ಯಾವುದೇ ಪ್ರಾಣಹಾನಿ ಉಂಟಾಗಿಲ್ಲವಾಗಿದ್ದು 20 ಸಾವಿರ ರೂ. ಹಾನಿ ಸಂಭವಿಸಿದೆ. 

ಇನ್ನುಳಿದಂತೆ ತಾಲೂಕಿನ ಬೇಂಗ್ರೆ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿಯಿಂದ ತುಂಡಾಗಿ ಬಿದ್ದಿದ್ದ ವೇಳೆ ನಾಯಿಯೊಂದು ತಂತಿ ಸ್ಪರ್ಶಿಸಿದ್ದು ಸ್ಥಳಕ್ಕೆ ಸಾವನ್ನಪ್ಪಿದ್ದು, ಹಾಗೂ ಬೆಳಕೆ ಪಂಚಾಯತ ವ್ಯಾಪ್ತಿಯ ಕಟಗೇರಿಯಲ್ಲಿ ಮರ ಬಿದ್ದು ವಿದ್ಯುತ ಕಂಬ ತುಂಡಾಗಿ ವಿದ್ಯುತ ತಂತಿ ಜೋತು ಬಿದಿದ್ದು ಸ್ಥಳಕ್ಕೆ ತೆರಳಿ ಹೆಸ್ಕಾಂ ಇಲಾಖೆ ಸಿಬ್ಬಂದಿಗಳು ವಿದ್ಯುತ ತಂತಿ ಸರಿಪಡಿಸಿದ್ದಾರೆ. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...