ಅಘಾಡಿಯನು ಒಡೆದ ಬಿಜೆಪಿ; ಅನರ್ಹತೆಯಿಂದ ಪಾರಾಗಲು ಅಜಿತ್ ಬಣಕ್ಕೆ ಬೇಕಿದೆ 36 ಶಾಸಕರ ಬಲ!

Source: Vb | By I.G. Bhatkali | Published on 3rd July 2023, 3:58 PM | National News |

ಮುಂಬೈ: ಎನ್‌ಸಿಪಿಯ 53 ಶಾಸಕರ ಪೈಕಿ 40ಕ್ಕೂ ಅಧಿಕ ಶಾಸಕರ ಬೆಂಬಲವನ್ನು ತಾನು ಹೊಂದಿದ್ದೇನೆ ಎಂದು ಹೇಳಿಕೊಂಡಿರುವ ಅಜಿತ್ ಪವಾರ್‌ ಅವರ ನಡೆಯಿಂದ ಕಳೆದ 24 ವರ್ಷಗಳಿಂದಲೂ ಹಲವಾರು ಸವಾಲುಗಳನ್ನು ಎದುರಿಸಿ ಎನ್ ಸಿಪಿಯನ್ನು ಮುನ್ನಡೆಸಿಕೊಂಡು ಬಂದಿರುವ ಪಕ್ಷದ ಸ್ಥಾಪಕ ಶರದ್ ಪವಾ‌ ತೀರ ಮುಜುಗರಕ್ಕೆ ಒಳಗಾಗಿದ್ದಾರೆ. ತನ್ನ ಸೋದರನ ಪುತ್ರ ಒಂದು ದಿನ ತನ್ನ ಬುಡಕ್ಕೇ ನೀರು ಕಾಯಿಸುತ್ತಾನೆ ಎಂದು ಅವರು ಕನಸುಮನಸಿನಲ್ಲಿಯೂ ಎಣಿಸಿರಲಿಲ್ಲ.

ಮಹಾರಾಷ್ಟ್ರ ಸಂಪುಟವು ಶೀಘ್ರವೇ ವಿಸ್ತರಣೆಗೊಳ್ಳಲಿದೆ ಎಂದು ಫಡ್ನವೀಸ್ ಶುಕ್ರವಾರವಷ್ಟೇ ಹೇಳಿದ್ದರು. ಸಿಎಂ ಏಕನಾಥ ಶಿಂದೆ ಅವರೂ ಇತ್ತೀಚಿಗೆ ದಿಲ್ಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದರು.

ಆದರೂ ಮೈತ್ರಿಕೂಟಕ್ಕೆ ಅಜಿತ್ ಪವಾರ್ ಬೆಂಬಲಿಗರ ಸೇರ್ಪಡೆಗೆ ಮುಖ್ಯಮಂತ್ರಿ ಏಕನಾಥ್ ಶಿಂದೆ ಆಂತರಿಕವಾಗಿ ವಿರೋಧಿಸುತ್ತಿದ್ದಾರೆನ್ನಲಾಗಿದೆ. ಅಜಿತ್ ಪವಾರ್ ಅವರು ಎನ್ ಸಿಪಿ ಶಾಸಕರ ಗುಂಪಿನೊಂದಿಗೆ ಸೇರ್ಪಡೆಗೊಂಡರೆ ತಾನು ಸರಕಾರದಿಂದ ಹೊರನಡೆಯುವುದಾಗಿ ಇದೇ ಶಿಂದೆ ಕಳೆದ ಎಪ್ರಿಲ್ ನಲ್ಲಿ ಬೆದರಿಕೆಯೊಡ್ಡಿದ್ದರು ಎನ್ನುವುದು ಇಲ್ಲಿ ಗಮನಾರ್ಹವಾಗಿದೆ.

ಅನರ್ಹತೆಯಿಂದ ಪಾರಾಗಲು ಅಜಿತ್ ಬಣಕ್ಕೆ ಬೇಕಿದೆ 36 ಶಾಸಕರ ಬಲ!: ಅಜಿತ್ ಪವಾರ್‌ ಪಕ್ಷಾಂತರ ನಿಷೇಧ ಕಾನೂನಿನಿಂದ ಪಾರಾಗಲು ಎನ್ ಅಪಿಯ ಶಾಸಕರ ಪೈಕಿ ಕನಿಷ್ಠ 3 ಶಾಸಕರನ್ನು ತನ್ನೊಂದಿಗೆ ಒಯ್ಯವ ಅಗತ್ಯವಿದೆ.

ಸಂವಿಧಾನದ 10ನೇ ಅನುಸೂಚಿಯಡಿ ಎನ್‌ಸಿಪಿ ಈಗಲೂ ಎಲ್ಲ ಬಂಡುಕೋರ ಶಾಸಕರ ಅನರ್ಹತೆಗೆ ಕ್ರಮ ಕೈಗೊಳ್ಳಬಹುದು. ಅಜಿತ್ ಪವಾರ್ ತನ್ನದೇ ಅಸಲಿ ಎನ್‌ಸಿಪಿ ಎಂದು ಚುನಾವಣಾ ಆಯೋಗದ ಎದುರು ಸಾಬೀತು ಮಾಡುವವರೆಗೂ ಅವರ ಮತ್ತು ಬೆಂಬಲಿಗ ಶಾಸಕರ ತಲೆಯ ಮೇಲೆ ಅನರ್ಹತೆಯ ಕತ್ತಿ ತೂಗಾಡುತ್ತಲೇ ಇರುತ್ತದೆ.

ಅಜಿತ್ ಸಭೆಯ ಬಗ್ಗೆ ನನಗೆ ತಿಳಿದಿರಲಿಲ್ಲ; ಶರದ್ ಪವಾರ್ ರವಿವಾರ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸುವ ಮುನ್ನ ಛಗನ್ ಭುಜಬಲ್ ಸೇರಿದಂತೆ ಎನ್ ಸಿಪಿಯ ಹಿರಿಯ ನಾಯಕರು ಅವರ ನಿವಾಸದಲ್ಲಿ ಸಭೆ ಸೇರಿದ್ದರು. ಎನ್‌ಸಿಪಿಯ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಲೆ ಅವರೂ ಸಭೆಯಲ್ಲಿ ಭಾಗವಹಿಸಿದ್ದರು.

ಈ ವೇಳೆ ಪುಣೆಯಲ್ಲಿದ್ದ ಶರದ್ ಪವಾರ್‌, ತನಗೆ ಸಭೆಯ ಬಗ್ಗೆ ತಿಳಿದಿಲ್ಲ. ಆದರೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಪಕ್ಷ ನಾಯಕನಾಗಿ ಅಜಿತ್ ಪವಾರ್‌ ಶಾಸಕರ ಸಭೆಯನ್ನು ಕರೆಯಬಹುದು ಎಂದು ಹೇಳಿದರು.

ಪಕ್ಷದಲ್ಲಿನ ಮಹತ್ವದ ರಾಜಕೀಯ ಬೆಳವಣಿಗೆಯಿಂದಾಗಿ ತಾನು ಯಾರ ಬಗ್ಗೆಯೂ ಅಸಮಾಧಾನ ಗೊಂಡಿಲ್ಲವೆಂದು ಶರದ್ ಪವಾರ್ ಹೇಳಿದ್ದಾರೆ.

ಇಂತಹ ವಿದ್ಯಮಾನಗಳು ತನಗೆ ಹೊಸದೇನೂ ಅಲ್ಲವೆಂದು ಹೇಳಿದ ಪವಾರ್, ಪರಿಸ್ಥಿತಿ ತಿಳಿಯಾಗಲು ಇನ್ನೂ ಕೆಲವು ದಿನ ಕಾಯುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

ಪಕ್ಷದ ನಾಯಕರ ಸಭೆಯನ್ನು ಸೋಮವಾರ ತಾನು ಕರೆದಿದ್ದು, ಅಲ್ಲಿ ಈ ವಿಷಯವಾಗಿ ವಿವರವಾಗಿ ಚರ್ಚಿಸಲಾಗುವುದು ಎಂದವರು ಹೇಳಿದರು.

ಜನರು ಈ ಆಟವನು ಸಹಿಸುವುದಿಲ್ಲ: ರಾವುತ್:  ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ರವಿವಾರ ಬೆಳಿಗ್ಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಶಿವಸೇನೆ(ಠಾಕ್ರೆ ಬಣ) ನಾಯಕ ಸಂಜಯ್ ರಾವುತ್ ಅವರು, ಕೆಲವರು ಮಹಾರಾಷ್ಟ್ರ ರಾಜಕೀಯವನ್ನು 'ಸ್ವಚ್ಛಗೊಳಿಸುವ' ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಅವರು ತಮ್ಮ ದಾರಿಯಲ್ಲಿ ಸಾಗಲಿ, ಬಿಡಿ. ಜನರು ಈ ಆಟವನ್ನು ಹೆಚ್ಚುಕಾಲ ಸಹಿಸುವುದಿಲ್ಲ ಎಂದು ಹೇಳಿದರು.

ರಾಜಕೀಯ ಬೆಳವಣಿಗೆಗಳ ಬಗ್ಗೆ ತಾನು ಈಗಷ್ಟೇ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಜೊತೆ ಮಾತನಾಡಿದ್ದೇನೆ. 'ನಾನು ಬಲಿಷ್ಠನಾಗಿದ್ದೇನೆ. ನಮಗೆ ಜನರ ಬೆಂಬಲವಿದೆ. ಉದ್ಧವ ಠಾಕ್ರೆಯವರೊಂದಿಗೆ ಸೇರಿಕೊಂಡು ನಾವು ಪ್ರತಿಯೊಂದನ್ನೂ ಮರುನಿರ್ಮಾಣ ಮಾಡುತ್ತೇವೆ' ಎಂದು ಅವರು ತಿಳಿಸಿದ್ದಾರೆ” ಎಂದು ರಾವುತ್ ಹೇಳಿದರು.

ಅಜಿತ್ ಪವಾರ್ ಬಂಡಾಯದ ಬಳಿಕ ಎನ್‌ಸಿಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಶಿವಸೇನೆ (ಠಾಕ್ರೆ ಬಣ) ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರೂ ಪ್ರತಿಕ್ರಿಯಿಸಿದ್ದಾರೆ. ಭ್ರಷ್ಟರು ಮತ್ತು ಜೈಲುಪಾಲಾಗಿದ್ದ ಎನ್‌ ಸಿಪಿ ಶಾಸಕರು ಮಹಾರಾಷ್ಟ್ರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಯಾವುದೇ ಬೆಲೆಯನ್ನಾದರೂ ತೆತ್ತು ಅಧಿಕಾರವನ್ನು ಬಯಸುವ ರಾಜಕೀಯ

ಅವಕಾಶವಾದಿಗಳನ್ನು ಬಿಜೆಪಿಯು ಒಳಗೊಂಡಿದೆ ಮತ್ತು ಅದು ಸೈದ್ಧಾಂತಿಕ ಮೈತ್ರಿಗಳ ಕುರಿತು ಮಾತನಾಡಬಾರದು ಎಂದು ಹೇಳಿದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...