ಕರಾವಳಿ ಕಡಲತೀರದಲ್ಲಿ ನೀಲಿ ಬೆಳಕು. ಮಂಗಳೂರಲ್ಲಿ ಗೋಚರಿಸಿದ ಬೆಳಕಿನ‌ ವಿಸ್ಮಯ

Source: SO News | By Laxmi Tanaya | Published on 23rd November 2020, 7:08 PM | Coastal News | Don't Miss |

ಮಂಗಳೂರು : ಕರಾವಳಿಯ ಹಲವು ಕಡಲತೀರಗಳಲ್ಲಿ ಸಮುದ್ರ ನೀರು ರಾತ್ರಿ ನೀಲಿಯಾಗಿ ಕಾಣಿಸಿಕೊಳ್ಳತೊಡಗಿದ್ದು ಜನರ ಕುತೂಹಲಕ್ಕೆ ಕಾರಣವಾಗಿದೆ.

 ರಾತ್ರಿ ಕಡಲು ನೋಡಲೆಂದು ಹೋದವರು ತಮಗೆ ಸಿಗುವ ನೀಲಿ ಬಣ್ಣದ ನೀರಿನ ಫೋಟೋಗಳನ್ನು ಸಾಮಾಜಿಕ  ತಾಣಗಳಲ್ಲಿ ಹರಿಯ ಬಿಡುತ್ತಿದ್ದಾರೆ. ಇದು ಸಮುದ್ರ ನೀರಿನಲ್ಲಿ ಉಂಟಾಗುವ  ಪ್ರಕ್ರಿಯೆ ಜೈವದೀಪ್ತಿ ಯಿಂದಾಗಿ ಕಾಣಿಸಿಕೊಳ್ಳುತ್ತದೆ ಸಮುದ್ರ ನೀರಿನಲ್ಲಿರುವ    ಡೈನೋಪ್ಲಾಜಲ್ಲೇಟ್ ಎನ್ನುವ ಪಾಚಿಯಂತಹ ಜೀವಿಗಳು ದೇಹದಲ್ಲಿರುವ ರಾಸಾಯನಿಕದಿಂದಾಗಿ ಈ ರೀತಿಯ ನೀಲಿ ಬಣ್ಣದ ಬೆಳಕು ಕಾಣಿಸಿಕೊಳ್ಳುತ್ತದೆ.

 ಸಾಮಾನ್ಯವಾಗಿ ಅಮವಾಸ್ಯೆ ರಾತ್ರಿಯಲ್ಲಿ ಇದು ಹೆಚ್ಚಾಗಿ ಕಾಣುತ್ತದೆ ಹೆಚ್ಚು ಬೆಳಕಿರುವ ಬೀಚುಗಳಲ್ಲಿ ಗೋಚರಿಸದು ಬದಲು ದಟ್ಟ ಕತ್ತಲ ತೀರದಲ್ಲಿ ಕಾಣಿಸುತ್ತವೆ. ಇವು ಇದು ಪ್ರತಿ ವರ್ಷವೂ ಅಕ್ಟೋಬರ್ ನವೆಂಬರ್ ನಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಪ್ರಕ್ರಿಯೆ ಎಂದು ಮೀನುಗಾರರು ಹೇಳಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...