ಬಿಹಾರ: ಚುನಾವಣೋತ್ತರ ಸಮೀಕ್ಷೆಗಳನ್ನು ಬುಡಮೇಲುಗೊಳಿಸಿದ ಫಲಿತಾಂಶ

Source: sonews | By Staff Correspondent | Published on 11th November 2020, 10:21 AM | National News |

ಪಾಟ್ನಾ: ಈ ಹಿಂದೆ ನಡೆಸಿದ ಚುನಾವಣೋತ್ತರ ಸಮೀಕ್ಷೆಗಳು ಶೇ.೯೯ರಷ್ಟು ನಿಖರವಾಗಿದ್ದು ಹಾಲಿ ಬಿಹಾರದಲ್ಲಿ ನಡೆಸಿದ ಚುನಾವಣೋತ್ತರ ಸಮೀಕ್ಷೆಗಳು ಮಾತ್ರ ತಲೆಕೆಳಗಾಗಿದ್ದು ಸಮೀಕ್ಷೆ ಮಾಡಿದ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿವೆ. ಅಲ್ಲದೆ ಉಪಚುನಾವಣೆಯ ಫಲಿತಾಂಶಗಳು ಸಮೀಕ್ಷೆಗನುಗುಣವಾಗಿದ್ದು ಬಿಹಾರ ಸಮೀಕ್ಷೆಗಳು ಯಾಕೆ ವಿಫಲಗೊಂಡಿವೆ ಎಂಬುದನ್ನು ತಲೆಕೆಡಿಸಿಕೊಳ್ಳುವಂತೆ ಮಾಡಿವೆ.

ಬಿಹಾರ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳನ್ನು ರಾಜ್ಯದ ಫಲಿತಾಂಶ ಸುಳ್ಳಾಗಿಸಿದೆ. ಇದು ಹಲವು ರಾಜಕೀಯ ಪಂಡಿತರಲ್ಲಿ ಅಚ್ಚರಿ ಮೂಡಿಸಿದ್ದು, ಮತಗಟ್ಟೆ ಸಮೀಕ್ಷೆಗಳು ಎಲ್ಲಿ ಎಡವಿದವು ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳುವಂತಾಗಿದೆ.

ಬಹುತೇಕ ಸಮೀಕ್ಷೆಗಳು ತೇಜಸ್ವಿ ಯಾದವ್ ನೇತೃತ್ವದ ಮಹಾಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿದ್ದವು. ಆರ್‌ಜೆಡಿ ಕೂಟ ಆರಂಭಿಕ ಮುನ್ನಡೆ ಗಳಿಸಿದರೂ ಕ್ರಮೇಣ ನಿಕಟ ಸ್ಪರ್ಧೆಯಲ್ಲಿ ಹಿನ್ನಡೆ ಸಾಧಿಸಿತು. ಕೆಲ ಕ್ಷೇತ್ರಗಳಲ್ಲಂತೂ ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿತು.

ಬಹುತೇಕ ಸಮೀಕ್ಷೆಗಳಲ್ಲಿ ಮತ ಗಳಿಕೆ ಪ್ರಮಾಣವನ್ನು ಅಂದಾಜಿಸಿ ಅಲ್ಗೋರಿಥಮ್ ಬಳಸಿಕೊಂಡು ಅದನ್ನು ಸ್ಥಾನಗಳಾಗಿ ಪರಿವರ್ತಿಸುತ್ತವೆ. ಕೆಲವೊಮ್ಮೆ ಈ ಪರಿವರ್ತನೆ ತಪ್ಪು ಅಂದಾಜಿಸುವಿಕೆಗೆ ಕಾರಣವಾಗುತ್ತದೆ. ಈ ಬಾರಿ ಹಲವು ಸಮೀಕ್ಷೆಗಳು ಅಂದಾಜಿಸಿದ್ದ ಮತಗಳಿಕೆ ಪ್ರಮಾಣ ಕೂಡಾ ತಪ್ಪಾಗಿದೆ.

ಉದಾಹರಣೆಗೆ ಟುಡೇಸ್ ಚಾಣಕ್ಯ ಸಮೀಕ್ಷೆ, ಮಹಾಮೈತ್ರಿಕೂಟ ಶೇಕಡ 44ರಷ್ಟು ಮತ ಗಳಿಕೆಯೊಂದಿಗೆ 180 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಭವಿಷ್ಯ ನುಡಿದಿತ್ತು. ಎನ್‌ಡಿಎ ಮತಗಳಿಗೆ ಶೇಕಡ 34ರಷ್ಟಾಗಲಿದೆ ಎಂದು ಅಂದಾಜಿಸಿತ್ತು. ಟೈಮ್ಸ್ ನೌ- ಸಿ ವೋಟರ್ ನಿರ್ಗಮನ ಸಮೀಕ್ಷೆಯಲ್ಲಿ ಮಹಾಮೈತ್ರಿ ಕೂಟಕ್ಕೆ 120 ಸ್ಥಾನಗಳನ್ನು ಮತ್ತು ರಿಪಬ್ಲಿಕ್ ಟಿವಿ- ಜನ್ ಕಿ ಬಾತ್ ಸಮೀಕ್ಷೆಯಲ್ಲಿ ಮೈತ್ರಿಕೂಟಕ್ಕೆ 118-138 ಸ್ಥಾನ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು.

ಮೂರು ಪ್ರಮುಖ ಅಂಶಗಳು ಮತದಾನೋತ್ತರ ಸಮೀಕ್ಷೆಗಳನ್ನು ತಿರುಚಿವೆ ಎನ್ನುವುದು ತಜ್ಞರ ಅಭಿಮತ. ಒಂದನೆಯದು ಕಾಲಘಟ್ಟ. ಮೊದಲ ಹಂತದ ಚುನಾವಣೆ ಬಳಿಕ ಎನ್‌ಡಿಎ ಚೇತರಿಸಿಕೊಂಡಿತ್ತು. ಎರಡನೆಯದಾಗಿ ಎನ್‌ಡಿಎಗೆ ಹೆಚ್ಚಾಗಿ ಮತ ಹಾಕಿದ ಮಹಿಳೆಯರ ಪ್ರಾತಿನಿಧ್ಯ ಮತಗಟ್ಟೆ ನಿರ್ಗಮನ ಸಮೀಕ್ಷೆಯಲ್ಲಿ ಇಲ್ಲದಿದ್ದುದು ಹಾಗೂ ಕೊನೆಯದಾಗಿ, ದೊಡ್ಡ ಸಂಖ್ಯೆಯ ಮೌನ ಮತದಾರರಿಗೆ ಸಮೀಕ್ಷೆಗಳು ಪ್ರಾತಿನಿಧ್ಯ ನಿಡದಿದ್ದುದು. ಈ ವರ್ಗ ಕೂಡಾ ಎನ್‌ಡಿಎಯನ್ನು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಿತ್ತು.

Read These Next

ಜನವರಿ 26ಕ್ಕೆ ಟ್ರ್ಯಾಕ್ಟರ್‌ ಪರೇಡ್‌ ಖಚಿತ; ಶಾಂತಿಯುತವಾಗಿ ದೆಹಲಿ ರಿಂಗ್‌ ರೋಡ್‌ನಲ್ಲಿ ರ್ಯಾಲಿ

ನವದೆಹಲಿ : ದೆಹಲಿ ಪೊಲೀಸ್‌ನ ತಕರಾರಿನ ನಡುವೆಯೂ ದೆಹಲಿ ಗಡಿಯಲ್ಲಿ ನೆರೆದಿರುವ ರೈತರು ತಮ್ಮ ಈ ಹಿಂದಿನ ನಿರ್ಧಾರದಂತೆ ಜನವರಿ 26ರ ...

ಸುಪ್ರೀಂ ಕೋರ್ಟ್‌ ಸಮಿತಿ ನೇಮಿಸಿದ ಸಮಿತಿಯ ಮುಂದೆ ಹೋಗುವುದಿಲ್ಲ : ರೈತ ಮುಖಂಡ ದರ್ಶನ್‌ ಪಾಲ್‌

9ನೇ ಸುತ್ತಿನ ಮಾತುಕತೆಯ ಮೂಲಕ ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳ ಜೊತೆಗೆ ಮಾತುಕತೆ ಮುಕ್ತಾಯಗೊಂಡಿದೆ. ಇನ್ನೇನಿದ್ದರೂ ...

ಸರ್ಕಾರ-ರೈತರ ನಡುವೆ 9ನೇ ಸುತ್ತು; ತಾನು ಬಗ್ಗದೆ, ಮೃದುವಾಗುವಂತೆ ರೈತರಿಗೆ ಆಗ್ರಹಿಸಿದ ಸರ್ಕಾರ

ನವದೆಹಲಿ : ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ 9ನೇ ಸುತ್ತಿನ ಮಾತುಕತೆಯ ನಡೆಯುವುದೋ ಇಲ್ಲವೋ ಎಂಬ ಗೊಂದಲದ ನಡುವೆಯೇ ...

ರೈತ ಹೋರಾಟವನ್ನು ಖಾಲಿಸ್ತಾನಿ ತಂತ್ರವೆಂದ ಗೋದಿ ಮೀಡಿಯಾ: ಕಿಸಾನ್‌ ಏಕ್ತಾ ಮೋರ್ಚಾ ಖಂಡನೆ

ನವದೆಹಲಿ : ಕಳೆದ 50ದಿನಗಳಿಂದ ನಡೆಯುತ್ತಿರುವ ಹೋರಾಟವನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸುವ ಪ್ರಯತ್ನವನ್ನು ಸರ್ಕಾರ ಹಾಗೂ ...