ನ್ಯೂ ಶಮ್ಸ್ ಸ್ಕೂಲ್ ವಿದ್ಯಾರ್ಥಿಗಳ ಘಟಿಕೋತ್ಸವ ಸಮಾರಂಭ

Source: sonews | By Staff Correspondent | Published on 25th July 2017, 7:10 PM | Coastal News | Don't Miss |


ಭಟ್ಕಳ: ಇಲ್ಲಿನ ಹೆಬಳೆ ಗ್ರಾ.ಪಂ ವ್ಯಾಪ್ತಿಯ ನ್ಯೂ ಶಮ್ಸ್ ಸ್ಕೂಲ್ ಐಸಿ‌ಎಸ್ಸಿ ಪಠ್ಯಕ್ರಮ ವಿದ್ಯಾರ್ಥಿಗಳ ಪ್ರಥಮ ಘಟಿಕೋತ್ಸವ ಸಮಾರಂಭ ಶಾಲಾ ಸಭಾಭವನದಲ್ಲಿ ಜರಗಿತು. 
ಸಮಾರಂಭದ ಆಧ್ಯಕ್ಷತೆವಹಿಸಿ ಮಾತನಾಡಿದ ತರಬಿಯತ್ ಎಜ್ಯುಕೇಶನ್ ಸೂಸೈಟಿ ಅಧ್ಯಕ್ಷ ಅಬ್ದುಲ್ ಕಾದಿರ್ ಬಾಷಾ ರುಕ್ನುದ್ದೀನ್, ನ್ಯೂಶಮ್ಸ್ ಸ್ಕೂಲ್‌ನ  ಐಸಿ‌ಎಸ್ಸಿ ಪಠ್ಯಕ್ರಮದ ವಿದ್ಯಾರ್ಥಿಗಳು ಈ ವರ್ಷ ಜರಗಿದ ೧೦ನೇ ವರ್ಗದ ಪರೀಕ್ಷೆಯಲ್ಲಿ ಶೇ.೧೦೦% ಫಲಿತಾಂಶ ಸಾಧಿಸಿದ್ದು ಇದೊಂದು ಉತ್ತಮ ಬೆಳವಣೆಗೆಯಾಗಿದೆ ಎಂದರು. 
ಮುಸ್ಲಿಮರು ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದಿದ್ದಾರೆ ಎಂಬ ಆರೋಪಗಳು ಎಲ್ಲೆಡೆ ಕೇಳಿ ಬರುತ್ತಿದ್ದು ಇದು ಸತ್ಯಕ್ಕೆ ದೂರವಾಗಿದೆ ಎಂದ ಅವರು ಪ್ರವಾದಿ ಮುಹಮ್ಮದ್ ಪೈಗಂಬರರಿಗೆ ಅವತೀರ್ಣಗೊಂಡ ಪ್ರಥಮ ವಹಿ(ದಿವ್ಯವಾಣಿ) ಇಖ್ರಾ (ಓದು) ಎಂದಾಗಿದ್ದು ಮುಸ್ಲಿಮರು ಆರಂಭದಿಂದಲೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಬಂದಿದ್ದಾರೆ. ಶಿಕ್ಷಣವು ನಮ್ಮಲ್ಲಿ ಹಲವು ಬದಲಾವಣೆಗಳನ್ನು ತರುತ್ತದೆ. ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಮೂಲಕ ವಿದ್ಯಾರ್ಥಿಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುತ್ತಿದ್ದು ಸಮಾಜದಲ್ಲಿ ತನ್ನ ಜವಬ್ದಾರಿಯನ್ನು ಅರಿತು ಬದುಕುವ ಶಿಕ್ಷಣ ಇಲ್ಲಿ ಲಭ್ಯವಾಗುತ್ತಿದೆ ಎಂದರು. 
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ  ಭಟ್ಕಳ ಮೂಲದ ಅಮೇರಿಕಾ ಕ್ಯಾಲಿಫೋರ್ನಿಯ ನಿವಾಸಿ ಮುಬಶ್ಶಿರ್ ಕಾಝಿಯಾ ಮಾತನಾಡಿ, ಕಲಿಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಜಾಣ ವಿದ್ಯಾರ್ಥಿಗಳು ಸ್ನೇಹ ಬೆಳೆಸಿ ಅವರನ್ನೂ ಕಲಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಶಾಲಾ ವಾತವರಣ ಒಂದು ಕುಟುಂಬ ಇದ್ದಂತೆ ವರ್ಗದಲ್ಲಿ ಎಲ್ಲ ವಿದ್ಯಾರ್ಥಿಗಳು ಪರಸ್ಪರ ಸಹೋದರರ ರೀತಿಯಲ್ಲಿ ಒಬ್ಬರು ಇನ್ನೊಬ್ಬರನ್ನು ಮುನ್ನಡೆಸುತ್ತ ಶಾಲೆಯಲ್ಲಿ ಕಲಿಕಾ ವಾತವರಣ ನಿರ್ಮಿಸಬೇಕು ಎಂದರು. 
ಇದೇ ಸಂದರ್ಭದಲ್ಲಿ ೨೦೧೬-೧೭ನೇ ಸಾಲಿನಲ್ಲಿ ತೇರ್ಗಡೆ ಹೊಂದಿದೆ ವಿದ್ಯಾರ್ಥಿಗಳಿಗೆ  ಗೌನು ತೊಡಿಸುವುದರ ಮೂಲಕ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. 
ವಿದ್ಯಾರ್ಥಿಗಳಾದ ಅಮಾನುಲ್ಲಾ ಹಾಗೂ ಸುಹೈಲ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲೆ ಫಹಮಿದಾ ಮುಲ್ಲಾ ಸ್ವಾಗತಿಸಿದರು. 
ಎಸ್.ಎಸ್.ಎಲ್.ಸಿಯಲ್ಲಿ ಶೇ.೯೦ಕ್ಕೂ ಹೆಚ್ಚು ಅಂಕ ಗಳಿಸಿದ ಹನಾ ಖಾಝಿಯಾ, ಖತಿಜಾ ಝುಹಾ, ಮರ್ಯಮ್ ಸಹರ್ ವಿದ್ಯಾರ್ಥಿನೀಯರುನ್ನು ಪುರಸ್ಕಲಾಯಿತು. 
ಸಂಸ್ಥಯ ಉಪಾಧ್ಯಕ್ಷ ಸೈಯ್ಯದ್ ಅಶ್ರಫ್ ಬರ್ಮಾವರ್, ಹಳೆ ವಿದ್ಯಾರ್ಥಿ ಸಂಘದ ದುಬೈ ಮುಖ್ಯಸ್ಥ ರಝೀಮ್ ಎಸ್.ಎಂ, ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮುಹಮ್ಮದ್ ರಝಾ ಮಾನ್ವಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...

ಪ್ರಜಾಧ್ವನಿ ಸಮಾವೇಶ: ಭಟ್ಕಳದಿಂದ ಕುಮಟಾ ದ ವರೆಗೆ ಬೈಕ್ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪ್ರಜಾಧ್ವನಿ- 2 ಸಮಾವೇಶಕ್ಕೂ ಪೂರ್ವ ಬೃಹತ್ ಬೈಕ್ ರ್ಯಾಲಿ ಮೂಲಕ ಕರಾವಳಿಯಲ್ಲಿ ...