ಯಂತ್ರಗಳ ಬಳಕೆಯಿಂದ ಹೆಚ್ಚು ಇಳುವರಿ ಪಡೆಯಲು ಸಾಧ್ಯ-ನಾಗಮ್ಮ ಗೊಂಡ

Source: sonews | By Staff Correspondent | Published on 3rd June 2017, 5:27 PM | Coastal News | Don't Miss |

ಭಟ್ಕಳ: ಕೃಷಿಯಲ್ಲಿ ಇಂದು ಯಂತ್ರಗಳ ಬಳಕೆ ಅನಿವಾರ್ಯವಾಗಿದ್ದು ಯಂತ್ರಗಳ ಬಳಕೆಯಿಂದ ಹೆಚ್ಚು ಇಳುವರಿ ಜೊತೆಗೆ ಸಮಯದ ಉಳಿತಾಯವಾಗುವುದು ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಸದಸ್ಯೆ ನಾಗಮ್ಮ ಮಾಸ್ತಿ ಗೊಂಡ ಹೇಳಿದರು. 
ಅವರು ಉತ್ತರ ಕೊಪ್ಪದ ವಂದಲ್ಸೆ ವನವಾಸಿ ಕಲ್ಯಾಣ ಸಭಾ ಭವನದಲ್ಲಿ ಎರ್ಪಡಿಸಲಾಗಿದ್ದ ಕೃಷಿಯಲ್ಲಿ ಯಂತ್ರಗಳ ಬಳಕೆ ಮತ್ತು ಇಲಾಖಾ ಸೌಲಭ್ಯಗಳ ಬಗ್ಗೆ ವಿಚಾರಗೋಷ್ಟಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಶ ನಾಯ್ಕ ವಹಿಸಿದ್ದರು. 
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಜಿ.ಡಿ.ಮುರಗೋಡ್ ಅವರು ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಮತ್ತು ಇಲಾಖಾ ಸೌಲಭ್ಯಗಳಾದ ಬಿತ್ತನೆ ಬೀಜಪಚಾರ ಹಾಗೂ ಕೀಟನಾಶಕಗಳ ಬಗ್ಗೆ ಸಮರ್ಪಕ ಮಾಹಿತಿ ನೀಡಿದರು. ಇಲಾಖೆಯಲ್ಲಿ ಸ್ಪ್ರೇಯರ್ ಮತ್ತು ತುಂತುರು ನೀರಾವರಿಗೆ ಅನುದಾನವಿರುವ ಬಗ್ಗೆ ತಿಳಿಸಿದ ಅವರು ರೈತರಿಗಾಗಿ ಫಸಲು ಭೀಮಾ ಯೋಜನೆ, ಬೆಳೆವಿಮೆ ಬಗ್ಗೆ, ಶ್ರೀ ಪದ್ಧತಿಯ ನಾಟಿ, ಎರೆ ಘಟಕ ಸ್ಥಾಪನೆಯ ಕುರಿತೂ ರೈತರಿಗೆ ಉಪಯುಕ್ತ ಮಾಹಿತಿಯನ್ನು ನೀಡಿದರು. ರೈತರು ಆಕಸ್ಮಿಕವಾಗಿ ಅನಾಹುತ( ಹಾವು ಕಡಿದು, ಮರದಿಂದ ಬಿದ್ದು)ದಿಂದ ಮರಣ ಹೊಂದಿದರೆ ಸರಕಾರ ಮಟ್ಟದಲ್ಲಿ ಕಮಿಟಿಯೊಂದಿದ್ದು ಅದರ ತೀರ್ಮಾನದಂತೆ ಮೃತರ ಕುಟುಂಬಕ್ಕೆ ೧ ಲಕ್ಷ ಪರಿಹಾರ ದೊರೆಯುವುದು ಎಂದೂ ತಿಳಿಸಿದರು. 
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಮಾದರಿ ರೈತ  ಅನಿಲ್ ರಾಯಸ್ ಕೃಷಿಯಲ್ಲಿ ಒಂದೆ ಬೆಳೆಯನ್ನು ಮಾಡುವ ಬದಲು ಮಿಶ್ರ ಬೇಸಾಯವನ್ನು ಮಾಡುವ ಮೂಲಕ ಮತ್ತು ಸಾವಯವ ಕೃಷಿಗೆ ಹೆಚ್ಚಿನ ಒತ್ತನ್ನು ನೀಡುವ ಮೂಲಕ ಅಧಿಕ ಇಳುವರಿಯೊಂದಿಗೆ ವರ್ಷದ ಎಲ್ಲಾ ಸಮಯದಲ್ಲಿಯೂ ಆದಾಯ ಪಡೆಯಬಹುದು ಎಂದರು.  
ಉಡುಪಿ ಪ್ರಾದೇಶಿಕ ವಿಭಾಗದ ಸಿ‌ಎಚ್‌ಎಸ್‌ಸಿ ಸಮನ್ವಯಾಧಿಕಾರಿ  ಅಶೋಕ್ ಕೃಷಿ ಯಂತ್ರೋಪಕರಣಗಳನ್ನು ಬಳಕೆ ಮಾಡಿಕೊಂಡು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯುವ ಬಗ್ಗೆ ಮಾಹಿತಿ ನೀಡಿದರು. 
ಕಾರ್ಯಕ್ರಮದಲ್ಲಿ  ಪ್ರಾಸ್ತಾವಿಕವಾಗಿ ಮಾತನಾಡಿದ  ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಎಂ. ಎಸ್. ಈಶ್ವರರವರು ರೈತರಾದವರು ಕೃಷಿಯಲ್ಲಿ ಸ್ವ ಉದ್ಯೋಗ ಮಾಡುವ ಮೂಲಕ ಹಣದ ಹಿಂದೆ ನಾವೂ ಹೋಗುವ ಬದಲು ನಮ್ಮ ಹಿಂದೆ ಹಣ ಬರುವ ಹಾಗೇ ಮಾಡಬೇಕು ಎಂದು ತಿಳಿಸಿದರು, 
ಕಾರ್ಯಕ್ರಮದಲ್ಲಿ ವನವಾಸಿ ಕಲ್ಯಾಣದ ಜಿಲ್ಲಾ ಕಾರ್ಯಕರ್ತ ಶ್ರೀಧರ ಸಾಲೆಕಲ್ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಗಣಪತಿ ಮರಾಠಿ ಹಾಗೂ ಮೂರು ಒಕ್ಕೂಟದ ಅಧ್ಯಕ್ಷರು ಪಧಾದಿಕಾರಿಗಳು ಸಂಘದ ಸದಸ್ಯರು, ಸೇವಾ ಪ್ರತಿನಿಧಿಗಳು, ಊರಿನ ನಾಗರೀಕರು ಉಪಸ್ಥಿತರಿದ್ದರು.  ಕಾರ್ಯಕ್ರಮದಲ್ಲಿ ತಾಲೂಕಿನ ಕೃಷಿ ಆಧಿಕಾರಿ ವಿಜಯ್ ಕುಮಾರ್ ಸ್ವಾಗತಿದರು. ವಲಯದ ಮೇಲ್ವಿಚಾರಕ ರಮೇಶ ಎಂ.ಎನ್. ನಿರೂಪಿಸಿದರು. ಸಿ‌ಎಚ್‌ಎಸ್‌ಸಿ ಮ್ಯಾನೇಜರ್  ನಾಗರತ್ನ ಜಿ. ವಂದಿಸಿದರು. 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...