ಭಟ್ಕಳಕ್ಕೆ ಗೃಹಸಚಿವ ಪರಮೇಶ್ವರ ಭೇಟಿ. ಬರುವ ದಿನಗಳಲ್ಲಿ ಹಂತಹಂತವಾಗಿ ಪೊಲೀಸ್ ಇಲಾಖೆ ಬದಲಾವಣೆ : ಜಿ. ಪರಮೇಶ್ವರ

Source: SO News | By Laxmi Tanaya | Published on 24th December 2023, 8:49 PM | Coastal News |

ಭಟ್ಕಳ :  ಗೃಹಸಚಿವ ಜಿ. ಪರಮೇಶ್ವರ ಭಾನುವಾರ ಭಟ್ಕಳಕ್ಕೆ ಭೇಟಿ ನೀಡಿದರು. ಸಾಗರ ರಸ್ತೆ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಪೊಲೀಸ್ ವಸತಿ ಗೃಹವನ್ನ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ 45 ಸಾವಿರ ಮನೆಗಳನ್ನ ನಿರ್ಮಾಣ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಶೇಕಡಾ ನೂರರಷ್ಷು ಸಿಬ್ಬಂದಿಗಳಿಗೆ  ವಸತಿ ವ್ಯವಸ್ಥೆ ಮಾಡುತ್ತೇವೆ. ಇದರಿಂದ ಸಿಬ್ಬಂದಿಗಳಿಗೆ ಕೆಲಸ ಮಾಡಲು ಹೆಚ್ಚಿನ ರೀತಿಯಲ್ಲಿ ಉತ್ತೇಜನ ಸಿಗಲಿದೆ ಎಂದರು.
ಅಂತರಜಿಲ್ಲಾ ಪೊಲೀಸರ ವರ್ಗಾವಣೆ ವಿಚಾರಕ್ಕೆ ಪ್ರತಿಕ್ರೀಯಿಸಿದ  ಅವರು, ಬೇರೆ ಇಲಾಖೆಗೂ ನಮ್ಮ ಇಲಾಖೆಗೂ ವ್ಯತ್ಯಾಸವಿದೆ. ಯಾವುದೇ ಕೇಸ್ ನಡೆಸುತ್ತಿರುವಾಗ ವರ್ಗಾವಣೆ ಮಾಡಿದ್ರೆ ಕೇಸಿನ ಇತಿಮಿತಿ ಬದಲಾಗುತ್ತೆ. ಹೀಗಾಗಿ ಗಂಡ-ಹೆಂಡತಿ , ಹೆಲ್ತ್ ಪ್ರಕರಣ ನೋಡಿ ವರ್ಗಾವಣೆ ಮಾಡುತ್ತೇವೆಂದು ಹೇಳಿದರು.
ಬರುವ ದಿನಗಳಲ್ಲಿ  ಪೊಲೀಸ್ ಇಲಾಖೆಗೆ  ಆಧುನಿಕತೆಯನ್ನ  ತರುತ್ತೇವೆ. ಎಲ್ಲೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ತಂತ್ರಜ್ಞಾನ ಉಪಯೋಗಿಸುತ್ತೇವೆ. ಪ್ರತಿಯೊಂದು ಸ್ಟೇಷನ್ ಲಿಂಕ್ ಹೆಡ್ ಕ್ವಾಟರ್ಸ್‌ನಲ್ಲಿ  ಮಾನಿಟರ್ ಮಾಡುವ ವ್ಯವಸ್ಥೆಯನ್ನ  ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ಇಲಾಖೆಯನ್ನ ಹಂತಹಂತವಾಗಿ ಬದಲಾವಣೆ ಮಾಡುತ್ತೇವೆ ಹೇಳಿದರು.

ಹಿಜಾಬ್ ವಿವಾದದ ಬಗ್ಗೆ ಪ್ರತಿಪಕ್ಷದ ನಾಯಕರ ಹೇಳಿಕೆಗೆ  ಪ್ರತಿಕ್ರಿಯಿಸಿದ ಪರಮೇಶ್ವರ,  ಅವರು ಹೇಳಿದರೇ ಏನಾಗುತ್ತೆ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಎಸ್ಪಿ ವಿಷ್ಣುವರ್ಧನ್ ಉಪಸ್ಥಿತರಿದ್ದರು.

Read These Next

ಕಾರವಾರ: ಹಣ, ಉಡುಗೊರೆ ಹಂಚಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಿ : ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿ ಕುಮಾರ್

ಮತದಾರರಿಗೆ ಹಣ, ಉಡುಗೊರೆ ಮತ್ತಿತರ ಆಮಿಷಗಳನ್ನು ಒಡ್ಡುವುದರ ಕುರಿತಂತೆ ತೀವ್ರ ನಿಗಾ ವಹಿಸಬೇಕು, ಈ ಕುರಿತಂತೆ ದೂರುಗಳು ಬಂದ ...

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...