ಬೈಲೂರಿನಲ್ಲಿ ಸಾರ್ವಜನಿಕ ಬಳಕೆಯ ನಿವೇಶನ ಖರೀದಿಗೆ ವಿರೋಧ

Source: S.O. News Service | By MV Bhatkal | Published on 29th November 2017, 9:42 PM | Coastal News | Don't Miss |

ಭಟ್ಕಳ: ತಾಲೂಕಿನ ಬೈಲೂರು ತೂದಳ್ಳಿ ವಾರ್ಡಿನ ಶ್ರೀ ವೀರಮಾಸ್ತಿ ದೇವಸ್ಥಾನಕ್ಕೆ ಲಗ್ತಾ ಇರುವ, ಸರ್ವೆ ನಂಬರ್ 494 ಹಿಸ್ಸಾ 1 ಕ್ಷೇತ್ರ 0-11-00ರ ಸಾರ್ವಜನಿಕ ಬಳಕೆಯಲ್ಲಿರುವ ಜಮೀನನ್ನು ವ್ಯಕ್ತಿಯೋರ್ವರು ತಮ್ಮ ಸ್ವಂತ ಹಿತಾಸಕ್ತಿಗಾಗಿ ಖರೀದಿ ಮಾಡಿರುವುದರಿಂದ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿರು ಅಲ್ಲಿನ ಶ್ರೀ ವೀರಮಾಸ್ತಿ ಯುವಕ ಸಂಘ ಇದರ ಸದಸ್ಯರು ಹಾಗೂ ಸಾರ್ವಜನಿಕರು ಖರೀದಿ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಕೋರಿ ಮಂಗಳವಾರ ಭಟ್ಕಳ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
  ಸದರಿ ಜಮೀನು ಕಳೆದ 40 ವರ್ಷಗಳಿಂದ ದೇವಸ್ಥಾನದ ವಿಶೇಷ ಕಾರ್ಯಕ್ರಮಗಳಿಗಾಗಿ ಬಳಕೆಯಾಗುತ್ತಿದೆ. ಶಾಲಾ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಇಲ್ಲಿಯೇ ನಡೆಸುತ್ತಾರೆ. ಇದೇ ಜಾಗದಲ್ಲಿ ನಾಮಧಾರಿ ಸಮಾಜದವರ ಶ್ರೀ ಹಳೆಕೋಟೆ ಹನುಮಂತ ದೇವರ ಪಲ್ಲಕ್ಕಿ ಉತ್ಸವ ಮತ್ತು ಮೊಗೇರ ಸಮಾಜದ ಜಿನ್ನೋಡ ಅಮ್ಮನವರ ಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳೂ ನಡೆಯುತ್ತವೆ. ಮೊಗೇರ ಸಮಾಜದವರು ಪ್ರತಿ ವರ್ಷ ಶ್ರೀ ಗಣೇಶೋತ್ಸವ ಕಾರ್ಯಕ್ರಮ ನಡೆಸುತ್ತ ಬಂದಿದ್ದಾರೆ. ಅಲ್ಲದೇ ಊರಿನ ಸ್ತ್ರೀ ಶಕ್ತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘ, ಮತ್ಸ್ಯ ಮಹಿಳಾ ಸಂಘ ಇವುಗಳ ಸಭೆ,ವಿವಿಧ ಕಾರ್ಯಕ್ರಮಕ್ಕೂ ಇದೇ ಸ್ಥಳವನ್ನು ಬಳಸಲಾಗುತ್ತದೆ. ಇದೇ ಜಾಗದಲ್ಲಿ ಹಲವು ಮದುವೆ ಕಾರ್ಯಗಳೂ ನಡೆದಿವೆ. ಇಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ನಿರ್ಮಿಸಲಾದ ವೇದಿಕೆ ಇದೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರದಾಸೋಹ ಅಡುಗೆ ಕೋಣೆ, ಮಕ್ಕಳ ಶೌಚಾಲಯ ಕಟ್ಟಡ, ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಬಳಕೆಗಾಗಿ ಶೌಚಾಲಯ ಕಟ್ಟಡವನ್ನೂ ನಿರ್ಮಿಸಿದ್ದು ಇರುತ್ತದೆ. ಈ ನಿವೇಶನದ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಸಾರ್ವಜನಿಕ ಬಳಕೆಗಾಗಿ ಉಪಯೋಗವಾಗುವಂತಹ ಬೇರೆ ಯಾವುದೇ ನಿವೇಶನವೂ ಇಲ್ಲದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯ ವ್ಯಕ್ತಿಯೋರ್ವರು ಜನರಿಗೆ ತೊಂದರೆ ಕೊಡುವ ಉದ್ದೇಶದಿಂದ ಈ ಜಮೀನನ್ನು ಖರೀದಿಸಿದ್ದಾರೆ. ಇದು ಜನರಿಗೆ ಮಾಡುವ ದ್ರೋಹವಾಗಿದೆ. ಕೂಡಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಸಂದರ್ಭದಲ್ಲಿ ಸತೀಶ ಮೊಗೇರ, ಗಣಪತಿ ಮೊಗೇರ, ದಯಾನಂದ ಎನ್.ಮೊಗೇರ, ಅಕ್ಷಯ ಆರ್. ನಾಯ್ಕ, ಶನಿಯಾರ ನಾಯ್ಕ, ಹನ್ಮಂತ ನಾಯ್ಕ, ದೇವಿದಾಸ ಮೊಗೇರ, ಶ್ರೀಧರ ನಾಯ್ಕ, ಅನಿಲ್ ಉಪಸ್ಥಿತರಿದ್ದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...