ಬೆಣಂದೂರು ಕೊಲೆ ಆರೋಪಿಗಳು ಪೊಲೀಸ್ ಬಲೆಗೆ

Source: sonews | By Staff Correspondent | Published on 24th August 2020, 4:47 PM | Coastal News | Don't Miss |

ಭಟ್ಕಳ: ಇತ್ತಿಚೆಗೆ ತಾಲೂಕಿನ  ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬೆಣಂದೂರು ಗ್ರಾಮದಲ್ಲಿ  ಸಿನಿಮೀಯ ರೀತಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನ ಆರೋಪಿಗಳನ್ನು ಗ್ರಾಮೀಣ ಪೊಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಬೆಣಂದೂರು ನಿವಾಸಿ ಪದ್ಮಯ್ಯ ಜಟ್ಟಾ ನಾಯ್ಕ(44) ಅವರನ್ನು .14ರಂದು ಹಾಡು ಹಗಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ಬೆಣಂದೂರು ನಿವಾಸಿ ಜಯಂತ ಬಲೀಂದ್ರ ನಾಯ್ಕ, ಮಂಜುನಾಥ ಬಲೀಂದ್ರ ನಾಯ್ಕ, ದೇವೇಂದ್ರ ಬಲೀಂದ್ರ ನಾಯ್ಕ, ಸುಬ್ರಹ್ಮಣ್ಯ ಬಲೀಂದ್ರ ನಾಯ್ಕ, ಬಲೀಂದ್ರ ಹೊನ್ನಪ್ಪ ನಾಯ್ಕ, ಮಹೇಶ ಜಟ್ಟಪ್ಪ ನಾಯ್ಕ, ಸುರೇಶ ಮಾದೇವ ನಾಯ್ಕ, ಸುನೀಲ್ ಮಾದೇವ ನಾಯ್ಕ ಇವರನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಒರ್ವ ಕೋವಿಡ್ ಸೋಂಕಿತನಾಗಿದ್ದು ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡ ಆರೋಪಿತರ ಪತ್ತೆಗಾಗಿ ಉತ್ತರ ಕನ್ನಡ ಜಿಲ್ಲೆಯ ಮೊಲೀಸ ಅಧೀಕ್ಷಕ ಶಿವಪ್ರಕಾಶ ದೇವರಾ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದ್ರಿನಾಥ ಎಸ್ ಮಾರ್ಗದರ್ಶನದಲ್ಲಿ ಎಎಸ್‍ಪಿ ನಿಖಿಲ್ ಬಿ, ನೇತೃತ್ವದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳ 3 ತಂಡ ರಚಿಸಲಾಗಿತ್ತು. ತಂಡದ ಉಸ್ತುವಾರಿಯನ್ನು ಸಿ.ಪಿ. ದಿವಾಕರ ಪಿ. ವಹಿಸಿದ್ದರು. ಒಂದು ತಂಡವನ್ನು ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಹಾಗೂ ಇನ್ನೊಂದು ತಂಡವನ್ನು ಬೆಳಗಾವಿಯ ಗೋಕಾಕ ತಾಲೂಕಿನ ಮೂಡಲಗಿಗೆ ಹಾಗೂ 03 ನೇ ತಂಡ ಭಟ್ಕಳದಲ್ಲಿ ಕಾರ್ಯಚರಣೆ ನಡೆಸಿದೆ. ಆರೋಪಿತರನ್ನು ಬಂಧಿಸಿದ ಪೊಲೀಸರು ಅವರಿಂದ ಕೃತ್ಯಕ್ಕೆ ಉಪಯೋಗಿಸಿದ ಕಾರು, ಬಡಿಗೆ, ಕಟ್ಟಣದ ರಾಡ್‍ಗಳನ್ನು ಜಪ್ತ ಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್. ಓಂಕಾರಪ್ಪ, ಭಟ್ಕಳ ಶಹರ ಠಾಣೆಯ ಪಿ.ಎಸ್. ಭರತಕುಮಾರ ವಿ, ಹೆಚ್. ಕುಡಗುಂಟಿ, ಹೊನ್ನಾವರ ಠಾಣೆಯ ಪಿ.ಎಸ್. ಅಶೋಕಕುಮಾರ, ಕುಮಟಾ ವಿ.ಎಸ್. ರವಿ ಗುಡ್ಡಿ, ಭಟ್ಕಳ ಗ್ರಾಮೀಣ ಠಾಣೆಯ ಮುರ್ಡೇಶ್ವರ ಮೊಲೀಸಠಾಣೆಯ ಪಿ.ಎಸ್. ರವೀಂದ್ರ ಬಿರಾದಾರ, .ಎಸ್. ಮಂಜುನಾಥ ಗೌಡರ್, ನವೀನ್ ಬೋರ್ಕರ್, ಗೋಪಾಲ ನಾಯಕ ಹಾಗೂ ದೀಪಕ .ಎಸ್. ನಾಯ್ಕ, ಮಹೇಶ ಪಟಗಾರ, ವಿನಾಯಕ ಪಾಟೀಲ್, ನಾಗರಾಜ ಮೊಗೇರ, ಗಣೇಶ ಗಾಂವಕರ, ಅಶೋಕ ನಾಯ್ಕ, ದೇವು. ಆರ್. ನಾಯ್ಕ, ವಿಶೇಷ ತಂಡದ ಸಿಬ್ಬಂದಿಯವರಾದ ಸಂತೋಷ. ಹೊನ್ನಾಳ, ಮೋಹನ ಪೂಜಾರಿ, ರಾಜು ಗೌಡ, ಮಲ್ಲಿಕಾರ್ಜುನ ಉಟಗಿ, ನಿಂಗನಗೌಡ ಪಾಟೀಲ್, ಮಲ್ಲಿಕಾರ್ಜುನ ನಾಯ್ಕ, ಸಚೀನ ಪವಾರ, ರವಿ ಪಟಗಾರ, ಈರಣ್ಣಾ ಪೂಜಾರಿ, ಲೋಕೇಶ ಕತ್ತಿ, ಗೌತಮ ದೊಡ್ಡಣ್ಣನವರ ಹಾಗೂ , ಸಿ.ಡಿ.ಆರ್ ವಿಭಾಗದ ಸಿಬ್ಬಂದಿ ಸುಧೀರ ಮಡಿವಾಳ, ರಮೇಶ ನಾಯ್ಕ, ಅಣ್ಣಪ್ಪ ಬುಡಗೇರಿ ಚಾಲಕರಾದ ದೇವರಾಜ ಮೊಗೇರ, ಕುಬೇರ ಹೊಸುರ ಇವರು ಕರ್ತವ್ಯ ನಿರ್ವಹಿಸಿದ್ದರು.

 

Read These Next

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...

ಕಾರವಾರ: ಹಣ, ಉಡುಗೊರೆ ಹಂಚಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಿ : ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿ ಕುಮಾರ್

ಮತದಾರರಿಗೆ ಹಣ, ಉಡುಗೊರೆ ಮತ್ತಿತರ ಆಮಿಷಗಳನ್ನು ಒಡ್ಡುವುದರ ಕುರಿತಂತೆ ತೀವ್ರ ನಿಗಾ ವಹಿಸಬೇಕು, ಈ ಕುರಿತಂತೆ ದೂರುಗಳು ಬಂದ ...