ಭಟ್ಕಳ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಸುನಿಲ್ ನಾಯ್ಕ

Source: S O New service | By I.G. Bhatkali | Published on 2nd June 2018, 1:21 AM | Coastal News | Don't Miss |

ಭಟ್ಕಳ: ಭಟ್ಕಳ ಸರಕಾರಿ ಆಸ್ಪತ್ರೆಗೆ ಶಾಸಕ ಸುನಿಲ್ ನಾಯ್ಕ ಭೇಟಿ ನೀಡಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೆಚ್ಚಿನ ಸೌಲಭ್ಯ ವದಗಿಸಲು ಮತ್ತು ತುರ್ತು ಸಂದರ್ಭದಲ್ಲಿ ವೈದ್ಯರು ಲಭ್ಯರಿರುವಂತೆ ಮಾಡಲು ಕ್ರಮ ಕೈಗೊಳ್ಳುವ ಕುರಿತು ಆಡಳಿತ ವೈದ್ಯಾಧಿಕಾರಿ ಹಾಗೂ ಹಿರಿಯ ವೈದ್ಯರೊಂದಿಗೆ ಚರ್ಚಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸುನಿಲ್ ನಾಯ್ಕ ಭಟ್ಕಳದಲ್ಲಿ ಸಂಜೆಯಾದ ನಂತರ ಸಣ್ಣ ಪುಟ್ಟ ಘಟನೆಯಾದರೂ ಜನರು ಸರಕಾರಿ ಆಸ್ಪತ್ರೆಯನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದೆ.  ಇಲ್ಲಿನ ಖಾಸಗೀ ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆಯಿಂದಾಗಿ ಜನರು ಸರಕಾರಿ ಆಸ್ಪತ್ರೆ ಇಲ್ಲವೇ ಕುಂದಾಪುರದ ಖಾಸಗೀ ಆಸ್ಪತ್ರೆಗೆ ತೆರಳುವುದು ಸಾಮಾನ್ಯವಾಗಿದೆ.  ಸರಕಾರಿ ಆಸ್ಪತ್ರೆಯ ವೈದ್ಯರು ಸರಿಯಾಗಿ ಕರ್ತವ್ಯ ನಿಭಾಯಿಸಿದರೂ ಕೆಲವೊಮ್ಮೆ ದೂರುಗಳು ಬರುವುದು ಸಾಮಾನ್ಯ. ಅವುಗಳನ್ನು ಹೋಗಲಾಡಿಸಿಕೊಂಡು ಜನತೆಗೆ ಉತ್ತಮ ಸೌಲಭ್ಯ ನೀಡಬೇಕಾಗಿದೆ. ಆ ಬಗ್ಗೆ ಯಾವ ರೀತಿಯಲ್ಲಿ ಸಾಧ್ಯವಾಗುವುದು ಆ ರೀತಿಯಲ್ಲಿ ಕ್ರಮ ಕೈಗೊಳ್ಳಲು ಸಿದ್ಧನಿದ್ದು ವೈದ್ಯರ ಸಲಹೆ ಅಗತ್ಯವಾಗಿದೆ ಎಂದರು. 

ಗುರುವಾರ ರಾತ್ರಿ ಅಪಘಾತದಿಂದ ಗಾಯಗೊಂಡ ವ್ಯಕ್ತಿಯೋರ್ವ ಆಸ್ಪತ್ರೆಗೆ ಬಂದಾಗ ಅರ್ಧ ಗಂಟೆಯಾದರೂ ಕರ್ತವ್ಯದಲ್ಲಿದ್ದ ವೈದ್ಯರು ಬರದೇ ತೀವ್ರ ತೊಂದರೆಯಾಯಿತು. ಇದರಿಂದ ಆಸ್ಪತ್ರೆಯಲ್ಲಿಯ ಹೆಸರು ಹಾಳಾಗುವುದಲ್ಲದೇ ಇಲ್ಲಿ ಕರ್ತವ್ಯ ನಿರ್ವಹಿಸುವ ಇತರೇ ವೈದ್ಯರಿಗೂ ಕೆಟ್ಟ ಹೆಸರು ಬರುವುದು.  ರಾತ್ರಿ ಪಾಳಿಯ ಡಾ. ಜನಾರ್ಧನ ಅವರಿಗೆ ಕರೆ ಮಾಡಿದರೆ ಅರ್ಧ ಗಂಟೆಯಾದರೂ ಬರಲಿಲ್ಲ ಎನ್ನುವ ದೂರು ನನಗೆ ಬಂದಿದ್ದು ಈ ರೀತಿ ನಿರ್ಲಕ್ಷಕ್ಕೆ ಕಾರಣ ಎನು ಎಂದೂ ಅವರು ಪ್ರಶ್ನಿಸಿದರು. ಆಸ್ಪತ್ರೆಯ ಎಲ್ಲ ವೈದ್ಯರು, ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಮಾಡಬೇಕಾಗಿದೆ.  ಭಟ್ಕಳ ಸರಕಾರಿ ಆಸ್ಪತ್ರೆಗೆ ಅತೀ ಹೆಚ್ಚಿನ ರೋಗಿಗಳು ಬರುತ್ತಿದ್ದು ಅವರಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗಬೇಕು ಎನ್ನುವುದು ತನ್ನ ಆಶಯ ಎಂದೂ ಹೇಳಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಆಡಳಿತ ವೈದ್ಯಾಧಿಕಾರಿ ಡಾ. ದಿನಕರ ಅವರು ಇಲ್ಲಿ ಎಲ್ಲಾ ವೈದ್ಯರೂ ಕೂಡಾ ಸಮಾನ ಹುದ್ದೆಯವರಾಗಿದ್ದಾರೆ. ಯಾವುದೇ ರೀತಿಯ ಲೋಪವಾದರೂ ಸಹ ಆಡಳಿತ ವೈದ್ಯಾಧಿಕಾರಿಯಾಗಿ ನಾನೊಂದು ನೋಟೀಸು ನೀಡಬಹುದೇ ವಿನಹ ಯಾವುದೇ ಕ್ರಮ ತೆಗೆದುಕೊಳ್ಳಲು ಅವಕಾಶವಿಲ್ಲ.  ಡಾ. ಜನಾರ್ಧನ ಅವರಿಗೆ ಈಗಾಗಲೇ ಹಲವು ಬಾರಿ ಹೇಳಿದ್ದರೂ ಅವರು ಕರ್ತವ್ಯದಲ್ಲಿ ಸುಧಾರಿಸಿಕೊಂಡಿಲ್ಲ. ಇದಕ್ಕೆ ನಾವೇನು ಮಾಡಲು ಸಾಧ್ಯವಿಲ್ಲ, ಹಿರಿಯ ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಹೇಳಿದರು. 

ನಂತರ ಶಾಸಕರು  ಇಲ್ಲಿನ ಡಯಾಲಿಸಿಸ್ ಸೆಂಟರ್‍ಗೆ ತೆರಳಿ ಮಾಹಿತಿ ಪಡೆದರು. ಇಲ್ಲಿ ದಿನವೊಂದರ ನಾಲ್ಕು ಜನರಿಗೆ ಡಯಾಲಿಸಿಸ್ ಮಾಡಬಹುದಾಗಿದ್ದು ಮತ್ತೆ ಯಾರಿಗೂ ಅವಕಾಶವಿಲ್ಲ ಎನ್ನುವ ದೂರು ಸಾರ್ವಜನಿಕರು ನೀಡಿದ್ದು  ಇದಕ್ಕೆ ಪ್ರತಿಕ್ರಿಯಿಸಿದ ಡಯಾಲಿಸಿಸ್ ಸೆಂಟರ್ ಮುಖ್ಯಸ್ಥ ತಮ್ಮಲ್ಲಿರುವ ಎರಡು ಡಯಾಲಿಸಿಸ್ ಯಂತ್ರಗಳಲ್ಲಿ ಒಬ್ಬರಿಗೆ ನಾಲ್ಕು ತಾಸು ಬೇಕಾಗುತ್ತದೆ.  ನಾವು ನಮ್ಮ ಡ್ಯೂಟಿ ಸಮಯದ ಹೊರತಾಗಿಯೂ ಕೆಲಸ ಮಾಡಿದರೆ ನಾಲ್ಕು ಜನರಿಗೆ ಮಾತ್ರ ಡಯಾಲಿಸಿಸ್ ಮಾಡಲು ಸಾಧ್ಯ ಎಂದರು. 

ಆಡಳಿತ ವೈದ್ಯಾಧಿಕಾರಿ ಡಾ. ದಿನಕರ ಮಾತನಾಡಿ ಸರಕಾರಿ ಆಸ್ಪತ್ರೆಯ ಎಲ್ಲಾ ವೈದ್ಯರೂ ಕೂಡಾ ಒಂದೇ ಗ್ರೇಡ್‍ನವರಾಗಿರುವುದರಿಂದ ಆಡಳಿತ ವೈದ್ಯಾಧಿಕಾರಿಯಾಗಿ ನಾನು ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ.  ಕೇವಲ ಅವರಿಗೆ ನೋಟೀಸು ನೀಡಬಹುದು ಮತ್ತು ಮೇಲಧಿಕಾರಿಗಳಿಗೆ ತಿಳಿಸಲು ಅವಕಾಶವಿದೆ ಎಂದರು. 

Read These Next

ಅಕ್ರಮ ಗಣಿಗಾರಿಕೆ; ಬಂಧಿತ ರೌಡಿಶೀಟ‌ರ್ ಬಿಡುಗಡೆ ಮಾಡಲು ಪೊಲೀಸರಿಗೆ ಬೆದರಿಕೆ; ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್

ಅಕ್ರಮ ಕಲ್ಲಿನಕೋರೆ ಪ್ರಕರಣದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ ವೇಳೆ ಠಾಣೆಗೆ ಬಂದು ಪೊಲೀಸರಿಗೆ ಬೆದರಿಕೆ ಹಾಕಿ ...

ಕುಂದಾಪುರ: ತಾಯಿಯ ಕೊಳೆತ ಮೃತದೇಹದೊಂದಿಗೆ 3 ದಿನ ಕಳೆದ ವಿಕಲಚೇತನ ಮಗಳು – ಆಸ್ಪತ್ರೆಯಲ್ಲಿ ನಿಧನ

ಮನೆಯಲ್ಲೇ ಮೃತಪಟ್ಟು ಕೊಳೆತ ಸ್ಥಿತಿಯಲ್ಲಿದ್ದ ತಾಯಿಯ ಮೃತದೇಹದ ಜೊತೆ ಅನ್ನಾಹಾರ ಇಲ್ಲದೇ ಮೂರು ನಾಲ್ಕು ದಿನ ಕಳೆದ 32ರ ಹರೆಯದ ...

ರಸ್ತೆಯಲ್ಲಿ ಕಸ ಎಸೆಯುವುದನ್ನು ತಪ್ಪಿಸಲು ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿ ಸಿಸಿಟಿವಿ ಕ್ಯಾಮರಾ ಕಣ್ಗಾವಲು

ಸ್ಥಳೀಯ ಜನರ ಸಹಕಾರದಿಂದ ಹನೀಫಾಬಾದ್ ರಸ್ತೆಯಲ್ಲಿ ಮೂರು, ಜಾಮಿಯಾಬಾದ್ ರಸ್ತೆಯಲ್ಲಿ ಮೂರು, ಮಿನಾ ರಸ್ತೆಯಲ್ಲಿ ಒಂದು ಕ್ಯಾಮೆರಾ ...

ರಾಷ್ಟಿಯ ಹೆದ್ದಾರಿ ಕಾಮಗಾರಿಗಳನ್ನು ನಿಗದಿತ ಯೋಜನೆಯಂತೆ ಪೂರ್ಣಗೊಳಿಸಿ - ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಜಿಲ್ಲೆಯಲ್ಲಿ ಹಾದು ಹೋಗಿರುವ ಚತುಷ್ಪತ ರಾಷ್ಟಿಯ ಹೆದ್ದಾರಿಯ ಕಾಮಗಾರಿಯಲ್ಲಿ , ಉದ್ದೇಶಿತ ಯೋಜನೆಯಲ್ಲಿ ತಿಳಿಸಿರುವ ಎಲ್ಲಾ ...