ಭಟ್ಕಳದಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ.

Source: so news | By MV Bhatkal | Published on 16th June 2018, 2:01 PM | Coastal News | Don't Miss |

ಆಯಾ ಪ್ರದೇಶದ ಮಸೀದಿಗಳಲ್ಲೇ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮುಸ್ಲೀಂ ಬಾಂದವರು.

ಭಟ್ಕಳ : ಕಳೆದ 29 ದಿನಗಳಿಂದ ನಡೆಸುತ್ತಿದ್ದ ರಮ್ಜಾನ್ ಉಪವಾಸ ಗುರುವಾರದಂದು ಸಂಜೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ  ಭಟ್ಕಳದ ಮುಸ್ಲೀಂ ಬಾಂದವರು ಈದ್‍ಉಲ್ ಪಿತ್ರ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. 
ಮಳೆಯ ಹಿನ್ನೆಲೆಯಲ್ಲಿ ಆಯಾ ಭಾಗದ ಮಸೀದಿಗಳಲ್ಲೇ ಮುಸ್ಲೀಂ ಬಾಂದವರು ಈದ್ ಹಬ್ಬದ ವಿಶೇಷ ಪಾರ್ಥನೆ ನಡೆಸಿದರು. ಹಬ್ಬದ ಪ್ರಯುಕ್ತ ಬಿಳಿ ಬಣ್ಣದ ಶುಭ್ರ ಬಟ್ಟೆ ಧರಿಸಿದ ಮುಸ್ಲೀಮರು ಪರಸ್ಪರ ಅಪ್ಪುಗೆಯ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು. 
ತಾಲೂಕಿನ ಪ್ರತಿ ಮಸೀದಿಗಳಲ್ಲಿಯೂ ಸಮುದಾಯದ ಧಾರ್ಮಿಕ ಮುಖಂಡರಾದ ಮೌಲಾನಾಗಳು ಪವಿತ್ರ ರಮ್ಜಾನ್ ಉಪವಾಸದ ಮಹತ್ವ, ಉದ್ದೇಶ ಹಾಗೂ ಈದ್ ಉಲ್ ಫಿತರ್ ಹಬ್ಬದ ಕುರಿತು ಪ್ರವಚನ ನೀಡಿದರು. ಪಟ್ಟಣದ ನೂರ್ ಮಸೀದಿ, ಚಿನ್ನದ ಪಳ್ಳಿ, ಹೆಬಳೆ ಜಾಮೀಯಾ ಹಾಗೂ ಮುರ್ಡೇಶ್ವರ ಸೇರಿದಂತೆ ಎಲ್ಲಾ ಜುಮ್ಮಾ ಮಸೀದಿಗಳಲ್ಲಿ ಪ್ರಾರ್ಥನೆಗಾಗಿ ಮುಸ್ಲೀಂ ಬಾಂಧವರು ಕಿಕ್ಕಿರಿದು ಸೇರಿರುವುದು ವಿಶೇಷವಾಗಿ ಕಂಡು  
ಈದ್ ಉಲ್ ಫಿತರ್ ಹಬ್ಬದ ವಿಶೇಷ ಸಾಮೂಹಿಕ ಪ್ರಾರ್ಥನೆಯನ್ನು ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿನ ಎಲ್ಲಾ ಪ್ರಮುಖ ಜುಮ್ಮಾ ಮಸೀದಿಗಳಲ್ಲಿ ನಡೆಸಲಾಯಿತು. ಬೆಳಿಗ್ಗೆ 7.45ಕ್ಕೆ ಜಾಮಿಯಾ ಮಸೀದಿಯಲ್ಲಿ (ಚಿನ್ನದ ಪಳ್ಳಿ) ಸೇರಿದಂತೆ ಪಟ್ಟಣದ ಹತ್ತಕ್ಕೂ ಅಧಿಕ ಮಸೀದಿಗಳಲ್ಲಿ ಮೌಲಾನಾಗಳು ನಮಾಜ್ ಬೋಧಿಸಿ ಈದ್ ಉಲ್ ಪಿತ್ರ ಹಬ್ಬದ ಮಹತ್ವವನ್ನು ತಿಳಿಸಿದರು. ಮುರ್ಡೇಶ್ವರದ ಮಸೀದಿಯಲ್ಲೂ ಸಹ ಈದ್ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಹಬ್ಬದ ಪ್ರಯುಕ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮಸೀದಿ ಎದುರು ವ್ಯಾಪಕ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದೆ. 
ಡಿವೈಎಸ್ಪಿ. ವೆಲೆಂಟನ್ ಡಿಸೋಜಾ, ಸಿ.ಪಿ.ಐ. ಕೆ.ಎಲ್.ಗಣೇಶ, ನಗರ ಠಾಣೆಯ ಪಿ.ಎಸೈ. ಬಸವರಾಜ್, ಗ್ರಾಮೀಣ ಠಾಣೆಯ ಪಿ.ಎಸೈ. ರವಿ, ಮುರ್ಡೇಶ್ವರ ಠಾಣೆಯ ಹಾಗೂ ಬೇರೆ ಕಡೆಗಳಿಂದ ಬಂದ ಪೊಲೀಸ್ 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...