ಜಾನುವಾರು ಸಾಗಾಟಕ್ಕೆ ನಿರಂತರ ತಡೆ ಹಿನ್ನೆಲೆ; ಬಕ್ರೀದ್ ಹಬ್ಬಕ್ಕಾಗಿ ಭಟ್ಕಳಕ್ಕೆ ಬಂದ ಸಾವಿರಾರು ಕುರಿಗಳು; ಭಟ್ಕಳದಲ್ಲಿ ಬೀಡುಬಿಟ್ಟ ಪರ ಜಿಲ್ಲೆಗಳ ಕುರಿಗಾಹಿಗಳು

Source: S O news service | By V. D. Bhatkal | Published on 19th July 2021, 12:25 PM | Coastal News | Special Report |

ಭಟ್ಕಳ: ಇಸ್ಲಾಮ್ ಧರ್ಮೀಯರ ಪವಿತ್ರ ಹಬ್ಬ ಬಕ್ರೀದ್‍ಗೆ 3 ದಿನಗಳಷ್ಟೇ ಬಾಕಿ ಇದೆ. ಜಾನುವಾರು ಸಾಗಾಟಕ್ಕೆ ಪೊಲೀಸರು ನಿರಂರವಾಗಿ ತಡೆಯೊಡ್ಡಿರುವ ಹಿನ್ನೆಲೆಯಲ್ಲಿ ಈ ವರ್ಷವೂ ಹೆಚ್ಚಿನ ಜನರು ಕುರಿಗಳ ಬಲಿದಾನಕ್ಕೆ ಮುಂದಾಗಿದ್ದಾರೆ. 

ಉತ್ತರಕನ್ನಡ ಜಿಲ್ಲೆಯಲ್ಲಿ ಕುರಿಗಳ ಸಾಕಾಣಿಕೆ ಹಾಗೂ ಮಾರಾಟಕ್ಕೆ ಭಟ್ಕಳದ ಮೋಟಿಯಾ ಗೋಟ್ ಫಾರ್ಮಗೆ ದೊಡ್ಡ ಹೆಸರಿದೆ. ವರ್ಷದ 12 ತಿಂಗಳೂ ಧರ್ಮ ಭೇದವಿಲ್ಲದೇ ಕುರಿಗಳನ್ನು ಖರೀದಿಸಲು ಜನರು ಬರುತ್ತಾರೆ. ಮುಸ್ಲೀಮರ ಬಕ್ರೀದ್ ಮಾತ್ರವಲ್ಲ, ತಾಲೂಕಿನ ಸೋಡಿಗದ್ದೆ, ನೇತ್ರಾಣಿ ಪೂಜೆ, ಉತ್ಸವದ ಸಂದರ್ಭದಲ್ಲಿಯೂ ಇಲ್ಲಿ ಹೆಚ್ಚಿನ ಕುರಿಗಳು ಮಾರಾಟವಾಗುತ್ತವೆ. ಈ ಬಾರಿ ಜು.21ರಂದು ಬಕ್ರೀದ್ ಆಚರಿಸಲಾಗುತ್ತಿದ್ದು, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಹೈದರಾಬಾದ್‍ಗಳಿಂದ ಸಾವಿರಾರು ಕುರಿಗಳನ್ನು ಭಟ್ಕಳಕ್ಕೆ ಕರೆ ತರಲಾಗಿದೆ. ಕುರಿ ಮಾರಾಟಕ್ಕಾಗಿಯೇ ಇಲ್ಲಿನ ಟಿಎಫ್‍ಸಿ

ನಾವು ವರ್ಷ ಪೂರ್ತಿ ಕುರಿ ಸಾಕಾಣಿಕೆ ಹಾಗೂ ಮಾರಾಟದಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದೇವೆ. ಈ ಬಾರಿ ಜಾನುವಾರು ಸಾಗಾಟ, ಮಾರಾಟ ಕಡಿಮೆಯಾಗಿರುವುದರಿಂದ ಕುರಿಗಳಿಗೆ ಹೆಚ್ಚಿನ ಬೇಡಿಕೆಯ ನಿರೀಕ್ಷೆ ಇಟ್ಟುಕೊಂಡಿದ್ದೇವೆ
   - ಅರ್ಸಲಾನ್ ಮೋಟಿಯಾ, ಮೋಟಿಯಾ ಗೋಟ್ ಫಾರ್ಮ ಮಾಲಕ 

ಹೊಟೆಲ್ ಪಕ್ಕದಲ್ಲಿ ಪ್ರತ್ಯೇಕ ಮಾರಾಟ ಕೇಂದ್ರವನ್ನು ತೆರೆಯಲಾಗಿದೆ. ಜಮುನಾ ಪಾರಿ, ಶಿರೋಯಿ, ಕೋಟಾ, ಸ್ಥಳೀಯ ಟಗರು ಜಾತಿಯ ಕುರಿಗಳು ಮಾರಾಟ ಕೇಂದ್ರದಲ್ಲಿ ಸದ್ದು ಮಾಡುತ್ತಿವೆ. ವಿಶೇಷ ಎಂದರೆ ಈ ಬಾರಿ ಮೋಟಿಯಾ ಗೋಟ್ ಫಾರ್ಮ ಮಾತ್ರವಲ್ಲದೇ ಭಟ್ಕಳದಲ್ಲಿ ಪಟೇಲ್ ಗೋಟ್ ಫಾರ್ಮ, ಸುಲ್ತಾನ್ ಗೋಟ್ ಫಾರ್ಮ, ಫ್ರೆಂಡ್ಸ್ ಗೋಟ್ ಫಾರ್ಮ, ಇನಾಮ್ ಗೋಟ್ ಫಾರ್ಮ ಹೆಸರಿನಲ್ಲಿ ಹೊಸದಾಗಿ ವಿಭಿನ್ನ ಕುರಿ ಮಾರಾಟ ಕೇಂದ್ರಗಳು ತಲೆ ಎತ್ತಿ ನಿಂತಿವೆ. 

5000ಕ್ಕೂ ಹೆಚ್ಚು ಮಾರಾಟ ನಿರೀಕ್ಷೆ:
ಈ ಬಾರಿ ಜಾನುವಾರು ಸಾಗಾಟಕ್ಕೆ ಕಟ್ಟುನಿಟ್ಟಾಗಿ ಪೊಲೀಸರು ತಡೆಯೊಡ್ಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ 5000ಕ್ಕೂ ಹೆಚ್ಚು ಕುರಿಗಳು ಮಾರಾಟವಾಗುವ ನಿರೀಕ್ಷೆಯನ್ನು ಮೋಟಿಯಾ ಗೋಟ್ ಫಾರ್ಮ ಮಾಲಕ ಅರ್ಸಲಾನ್ ಮೋಟಿಯಾ ಇಟ್ಟುಕೊಂಡಿದ್ದಾರೆ. ಭಟ್ಕಳದ ಸುತ್ತಮುತ್ತಲಿನ ತಾಲೂಕುಗಳ ಜನರೂ ಕುರಿಗಳಿಗಾಗಿ ಭಟ್ಕಳಕ್ಕೆ ಲಗ್ಗೆ ಇಟ್ಟಿದ್ದಾರೆ. ಸಾಧಾರಣವಾಗಿ ರು.15000-20000 ಬೆಲೆಯ ಕುರಿಗಳನ್ನೇ ಇಲ್ಲಿನ ಮಧ್ಯಮ ವರ್ಗದ ಗ್ರಾಹಕರು ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಲದೇ ಜಾನುವಾರು ಸಾಗಾಟ, ಬಲಿದಾನ ಎರಡೂ ಸ್ಥಳೀಯವಾಗಿ ಆಗಾಗ್ಗೆ ಗೊಂದಲ, ಸಮಸ್ಯೆಯನ್ನು ಉಂಟು ಮಾಡುತ್ತಿರುವುದರಿಂದ ಕುರಿಗಳಿಗೆ ಈ ಬಾರಿ ಖಂಡಿತವಾಗಿ ಬೇಡಿಕೆ ಹೆಚ್ಚಾಗಲಿದೆ. ಈ ಬಾರಿಯ ವಿಶೇಷ ಏನೆಂದರೆ ಇಲ್ಲಿಯೇ ಕುರಿಗಳ ಬಲಿದಾನಕ್ಕೂ ವ್ಯವಸ್ಥೆ ಕಲ್ಪಿಸಿದ್ದೇವೆ. ಬಲಿದಾನಕ್ಕೆ ಸೂಕ್ತ ಸ್ಥಳಾವಕಾಶ ಇಲ್ಲದೇ ಇದ್ದವರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು, ಬೇಡಿಕೆ ಮತ್ತಷ್ಟು ಹೆಚ್ಚಾದರೆ ಪರರಾಜ್ಯಗಳಿಂದ ಇನ್ನಷ್ಟು ಕುರಿಗಳನ್ನು ತರಿಸಿಕೊಳ್ಳುತ್ತೇವೆ ಎನ್ನುತ್ತಾರೆ ಅರ್ಸಲಾನ್.

ಕುರಿ ಸಾಕಾಣಿಕೆಯೇ ನಮ್ಮ ಹೊಟ್ಟೆಪಾಡಿನ ಕಸುಬು. ಪ್ರತಿ ವರ್ಷ ಬಕ್ರೀದ್ ಸಂದರ್ಭದಲ್ಲಿ ಭಟ್ಕಳಕ್ಕೆ ಬಂದು 15-20 ದಿನ ಇಲ್ಲಿಯೇ ಇರುತ್ತೇವೆ. ಬಕ್ರೀದ್ ಮುಗಿದ ನಂತರ ಊರಿಗೆ ಹೊರಡುತ್ತೇವೆ
    - ಉಚ್ಚರೆಪ್ಪ, ಕುರಿಗಾಹಿ, ಕೊಪ್ಪಳ

ಭಟ್ಕಳದಲ್ಲಿ ಬೀಡು ಬಿಟ್ಟ ಕುರಿಗಾಹಿಗಳು:
 ಬಕ್ರೀದ್‍ಗಾಗಿ ಬಂದ ಕುರಿಗಳ ಪಾಲನೆಗಾಗಿ ಕೊಪ್ಪಳ ಮತ್ತಿತರ ಜಿಲ್ಲೆಗಳಿಂದ 10ಕ್ಕೂ ಹೆಚ್ಚು ಕುರಿಗಾಹಿಗಳನ್ನು ಕರೆಯಿಸಿಕೊಳ್ಳಲಾಗಿದೆ. ಕುರಿಗಳು ಮಾರಾಟವಾಗುವವರೆಗೂ ಕುರಿಗಳಿಗೆ ಇವರೇ ಆಹಾರ, ನೀರು ಒದಗಿಸುತ್ತಿದ್ದಾರೆ. ಬಕ್ರೀದ್ ಬಂತೆಂದರೆ ಇವರಿಗೂ ಹಬ್ಬ! ಊರಿನಲ್ಲಿಯೂ ಕುರಿ ಸಾಕಾಣಿಕೆಯೇ ನಮ್ಮ ಕಸುಬು. ಪ್ರತಿ ವರ್ಷ ಬಕ್ರೀದ್‍ಗಾಗಿ ಭಟ್ಕಳಕ್ಕೆ ಬಂದು 15 -20 ದಿನ ಇಲ್ಲಿಯೇ ನೆಲೆಸುತ್ತೇವೆ, ಕೈ ತುಂಬ ಸಂಬಳವನ್ನು ನೀಡಲಾಗುತ್ತದೆ. ಬಕ್ರೀದ್ ಮುಗಿಯುತ್ತಿದ್ದಂತೆಯೇ ಊರಿಗೆ ಹೊರಟು ಬಿಡುತ್ತೇವೆ ಎನ್ನುತ್ತಾರೆ ಕೊಪ್ಪಳದ ಉಚ್ಚರೆಪ್ಪ. ಈ ಕುರಿಗಳ ಪಾಲನೆಯ ಬಗ್ಗೆ ಕೊಪ್ಪಳ, ಬಾಗಲಕೋಟೆ ಭಾಗದ ಕುರಿಗಾಹಿಗಳಿಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ಕೆಲಸವನ್ನು ಇಲ್ಲಿನ ಕಾರ್ಮಿಕರಿಗೆ ವಹಿಸಿದರೆ ನಿರ್ವಹಣೆ ಕಷ್ಟಸಾಧ್ಯ. ಅಲ್ಲದೇ ಪ್ರತಿ ಕ್ಷಣವೂ ಇಲ್ಲಿಯೇ ನಿಂತು ಮಾರ್ಗದರ್ಶನ ನೀಡುವುದಕ್ಕೂ ನಮಗೆ ಆಗುವುದಿಲ್ಲ, ಅದಕ್ಕಾಗಿಯೇ ಕುರಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುವ ಕುರಿಗಾಹಿಗಳು, ಮಾತ್ರವಲ್ಲ ಕುರಿಗಳ ಆರೋಗ್ಯವನ್ನು ನೋಡಿಕೊಳ್ಳಲು ವೈದ್ಯರನ್ನೂ ಕರೆಯಿಸಿಕೊಂಡಿದ್ದೇವೆ ಎನ್ನುತ್ತಾರೆ ಕುರಿ ಮಾರಾಟ ಕೇಂದ್ರದ ಮಾಲಕ ಅರ್ಸಲಾನ್. ಒಟ್ಟಿನಲ್ಲಿ ಇನ್ನೂ 4-5 ದಿನ ಭಟ್ಕಳದಲ್ಲಿ ಬಕ್ರೀದ್ ಕುರಿಗಳದ್ದೇ ಕಾರುಬಾರು ಎನ್ನಬಹುದೇನೋ! 

Read These Next

ಜು.21 ರಿಂದ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಿಂದ ಚಾತುರ್ಮಾಸ್ಯ ವೃತಾಚರಣೆ ಆರಂಭ

ಭಟ್ಕಳ : ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ...

ಕಾರವಾರ: ಶಕ್ತಿ ಯೋಜನೆಗೆ ತುಂಬಿತು ವರ್ಷ: ಜಿಲ್ಲೆಯಲ್ಲಿ 6.19 ಕೋಟಿ ಮಹಿಳೆಯರಿಗೆ ಉಚಿತ ಪ್ರಯಾಣದ ಹರ್ಷ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಸಂಚರಿಸುವ ಉಚಿತ ...

ಮೇ 31 ವಿಶ್ವ ತಂಬಾಕು ರಹಿತ ದಿನ; ಜಿಲ್ಲೆಯಲ್ಲಿ ತಂಬಾಕು ದುಷ್ಪರಿಣಾಮಗಳ ನಿಯಂತ್ರಣಕ್ಕೆ ವಿವಿಧ ಕಾರ್ಯಕ್ರಮ

ಉತ್ತರ ಕನ್ನಡ ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ನಿಯಂತ್ರಣಕ್ಕೆ ಕಳೆದ ಒಂದು ವರ್ಷದಿಂದ ಜಿಲ್ಲಾ ಹಾಗೂ ತಾಲೂಕು ...

ಭಟ್ಕಳ: ಮುರುಡೇಶ್ವರಕ್ಕೆ ಅಪ್ಪಳಿಸಿದ ಜನಮಾರುತ; ಸರಕಾರದ ಮಹಾ ಶಕ್ತಿ ಸಂಗಮಕ್ಕೆ ಪ್ರವಾಸಿ ತಾಣ ತತ್ತರ

ಮುಂಗಾರು ಆಗಮನಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ವಾರದ ರಜೆ ರವಿವಾರ ಪ್ರವಾಸಿಗರ ಸಮೂಹ ಮುರುಡೇಶ್ವರಕ್ಕೆ ಮಾರುತವಾಗಿ ...

ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ಬಂದರೂ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಭಟ್ಕಳ ತಾಲೂಕು

ನೀರಿನ ಸಮಸ್ಯೆಯಿಂದಾಗಿ ಭಟ್ಕಳದ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಿವಾಸಿಗಳು ಟ್ಯಾಂಕರ್ ಮೂಲಕ ಸರಬರಾಜು ಮಾಡುವ ನೀರಿಗಾಗಿ ಸರತಿ ...