ಕಾರವಾರ: ಮಂಗನ ಕಾಯಿಲೆ ಭಯ ಬೇಡ, ಮುಂಜಾಗ್ರತೆಯಿರಲಿ

Source: S O News | By I.G. Bhatkali | Published on 8th June 2024, 2:38 AM | Coastal News | Special Report |

ಕಾರವಾರ: ಮಂಗನ ಕಾಯಿಲೆ, ಹೆಸರೇ ಹೇಳುವಂತೆ ಇದು ಮಂಗ ಗಳಿAದ  ಹರಡುವ  ಕಾಯಿಲೆ. ಈ ಕಾಯಿಲೆಯು ಪ್ರಪ್ರಥಮವಾಗಿ 1956ರಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಕಾಡಿನಲ್ಲಿ ಪತ್ತೆಯಾದ್ದರಿಂದ ಈ ರೋಗಕ್ಕೆ ಕ್ಯಾಸನೂರು ಕಾಡಿನ ಕಾಯಿಲೆ (ಕೆ.ಎಫ್.ಡಿ)/ ಮಂಗನ ಕಾಯಿಲೆ ಎಂದು ಕರೆಯಲಾಗಿದೆ.

ಆರಂಭದಲ್ಲಿ ಈ ಕಾಯಿಲೆ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಂಡುಬAದಿದ್ದು, 2012 ರಲ್ಲಿ ಇದು ಚಾಮರಾಜನಗರ ಜಿಲ್ಲೆಗೆ ವ್ಯಾಪಿಸಿದೆ. ಡಿಸೆಂಬರ್ ನಿಂದ ಜೂನ್ ತಿಂಗಳ ಅವಧಿಯಲ್ಲಿ ಈ ಕಾಯಿಲೆ ಕಂಡುಬರಲಿದ್ದು, ಫೆಬ್ರವರಿ ಯಿಂದ ಮೇ ವರೆಗೆ ಈ ರೋಗ ಹೆಚ್ಚಿನ ಪ್ರಮಾಣದಲ್ಲಿ ಹರಡಲಿದೆ.

ಮಂಗನ ಕಾಯಿಲೆಗೆ ಪ್ರಮುಖ ಕಾರಣ ವೈರಾಣುಗಳು (ಪ್ಲೆವಿ ವೈರಸ್). ಇದು ಕಾಡಿನಲ್ಲಿರುವ ವೈರಾಣು ಹೊಂದಿದ್ದ ಉಣ್ಣಿಗಳು ಕಚ್ಚುವುದರಿಂದ ಮಾತ್ರ ಬರುತ್ತದೆ. ಈ ಕಾಯಿಲೆಯು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಕಾಡಿನಲ್ಲಿ ಸತ್ತ ಮಂಗಗಳು ಕಾಣುವುದೇ ಈ ಕಾಯಿಲೆಯ ಮುನ್ಸೂಚನೆ.

ಮಂಗನ ಕಾಯಿಲೆಯ ಮುಖ್ಯ ಲಕ್ಷಣಗಳು: ಸತತ ಎಂಟು-ಹತ್ತು  ದಿನಗಳವರೆಗೆ  ಬಿಡದೇ  ಬರುವ  ಜ್ವರ. ವಿಪರೀತ ತಲೆನೋವು, ಸೊಂಟನೋವು, ಕೈಕಾಲು ನೋವು, ನಿಶ್ಯಕ್ತಿ, ಕಣ್ಣು ಕೆಂಪಾಗುವುದು. ಜ್ವರ ಬಂದ ಎರಡು ವಾರದ ನಂತರ ಮೂಗು, ಬಾಯಿ, ಗುದದ್ವಾರದಿಂದ ರಕ್ತಸ್ರಾವವಾಗಬಹುದು. ಸನ್ನಿಪಾತ ಮೆದುಳಿನ ಹೊದಿಕೆಯ ಜ್ವರ ಈ ರೋಗದ ಲಕ್ಷಣವಾಗಿದ್ದು, ರೋಗದ ತೀವ್ರತೆಯು ರೋಗಿಯ ಪ್ರತಿರೋಧಕ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ.

ಮುಂಜಾಗತಾ ಕ್ರಮ : ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರದ ವೈದ್ಯರನ್ನು ಸಂಪರ್ಕಿಸಬೇಕು. ವಾಸಸ್ಥಳದ ಸುತ್ತಮುತ್ತ ತೋಟ/ಕಾಡು/ ಗದ್ದೆಯಲ್ಲಿ  ಮಂಗ  ಸತ್ತಿರುವುದು  ಗಮನಕ್ಕೆ  ಬಂದೊಡನೆ  ಸ್ಥಳೀಯ ಆರೋಗ್ಯಾಧಿಕಾರಿಗಳು/ಆರೋಗ್ಯ ಇಲಾಖೆ ನೌಕರರಿಗೆ/ ಆಶಾ ಕಾರ್ಯಕರ್ತೆಯರಿಗೆ ತಿಳಿಸಬೇಕು. ಮಂಗ ಸಾಯುತ್ತಿರುವ ಕಾಡಿನಲ್ಲಿ ಸಂಚರಿಸುವಾಗ ಮೈ ತುಂಬಾ ಬಟ್ಟೆ ಧರಿಸಿ, ಆರೋಗ್ಯ ಇಲಾಖೆಯಿಂದ ವಿತರಿಸುವ ಡೆಪೋ ತೈಲವನ್ನು ಕೈಕಾಲುಗಳಿಗೆ ಲೇಪಿಸಿಕೊಂಡು ಹೋಗಬೇಕು. ಒಣಗಿದ ಎಲೆಗಳು ಸೋಂಕಿತ ಉಣ್ಣೆಗಳನ್ನು ಹೊಂದಿರಬಹುದಾದ್ದರಿAದ ಕಾಡಿನಿಂದ ಒಣಗಿದ ಎಲೆಗಳನ್ನು ತಂದು ಮನೆ ಅಥವಾ ಮನೆಯ ಸುತ್ತ-ಮುತ್ತ ರಾಶಿ ಹಾಕಬಾರದು.

ಕೈಗವಸುಗಳನ್ನು ಧರಿಸದೇ ಸತ್ತ ಪ್ರಾಣಿಗಳನ್ನು ಮುಟ್ಟಬಾರದು. ಕಾಡಿನಿಂದ ಬಂದ ನಂತರ ಸೋಪು ಹಚ್ಚಿ ಬಿಸಿ ನೀರಿನಿಂದ ಸ್ನಾನ ಮಾಡಬೇಕು. ಬಟ್ಟೆಗಳನ್ನು ಬಿಸಿ ನೀರಿನಿಂದ ಸೋಪು ಹಚ್ಚಿ ತೊಳೆಯಬೇಕು. ಮನೆ ಸುತ್ತ-ಮುತ್ತ ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಕಾಡಿನಿಂದ ಮನೆಗಳಿಗೆ ಉಣ್ಣೆಗಳು ಬರದಂತೆ ತಡೆಗಟ್ಟಲು ಸುರಕ್ಷತಾ ಕ್ರಮಗಳನ್ನು ವಹಿಸಬೇಕು. ದನಕರುಗಳ ಮೈಯಿಂದ ಉಣ್ಣೆಗಳನ್ನು ತೆಗೆದು, ಉಣ್ಣೆ ನಿವಾರಕ ತೈಲವನ್ನು ಲೇಪಿಸಬೇಕು. ಣ್ಣೆ ನಿವಾರಕ ಔಷÀಧವನ್ನು ದನದ ಕೊಟ್ಟಿಗೆಯ ಒಳಗೆ ಮತ್ತು ಸುತ್ತಮುತ್ತಲೂ ಸಿಂಪಡಿಸಬೇಕು. ಮಂಗ ಸತ್ತ ಪ್ರದೇಶಕ್ಕೆ ಭೇಟಿ ನೀಡಿದ್ದಲ್ಲಿ ತಕ್ಷಣ ಅಧಿಕಾರಿಗಳಿಗೆ ವರದಿ ಮಾಡಬೇಕು. ಅರಣ್ಯದಲ್ಲಿ ಚಾರಣ ಮಾಡುವ ಚಾರಣಿಗರು ಚಾರಣದ ಸಮಯದಲ್ಲಿ ಉಣ್ಣೆ ಕಡಿತವನ್ನು ನಿರ್ಲಕ್ಷಿಸದೇ ಡೇಪಾ ಉಣ್ಣೆ ವಿಕರ್ಷಕ ತೈಲವನ್ನು ಲೇಪಿಸಿಕೊಳ್ಳಬೇಕು. ಜ್ವರ ಇತ್ಯಾದಿ ರೋಗ ಲಕ್ಷಣಗಳು ಇದ್ದಲ್ಲಿ, ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ತಕ್ಷಣ ಭೇಟಿ ನೀಡಿ ಪರೀಕ್ಷಿಸಿಕೊಳ್ಳಬೇಕು. ಗ್ರಾಮ ಪಂಚಾಯತ್, ಅರಣ್ಯ, ಕಂದಾಯ, ಪಶುಸಂಗೋಪನೆ ಇಲಾಖೆಗಳು, ಆರೋಗ್ಯ ಇಲಾಖೆಗಳು ನೀಡುವ ಸೂಚನೆಗಳನ್ನು ಪಾಲಿಸುವುದರ ಜೊತೆಗೆ ಇಲಾಖೆಗಳೊಂದಿಗೆ ಸಹಕರಿಸಬೇಕು.

ಮಂಗನ ಕಾಯಿಲೆಗೆ ನಿರ್ದಿಷ್ಟವಾದ ಯಾವುದೇ ಔಷÀಧಿ ಇರುವುದಿಲ್ಲ. ಈ ಕಾಯಿಲೆಯು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹರಡುವುದರಿಂದ ಖಚಿತವಾಗಿ ಇಂತಹದೇ ನಿರ್ದಿಷ್ಟ ಸ್ಥಳದಲ್ಲಿ ಕಾಯಿಲೆ ಬರುತ್ತದೆ ಎಂದು ಹೇಳುವುದು ಅಸಾಧ್ಯ. ಆರೋಗ್ಯ ಇಲಾಖೆಯಿಂದ ಮಂಗಗಳ ಸತ್ತಿರುವ ಪ್ರದೇಶಗಳಲ್ಲಿನ 50 ರಿಂದ 60 ಮೀ ವ್ಯಾಪ್ತಿಯೊಳಗೆ ವ್ಯಾಪಕ ಸರ್ವೆ ನೆಡಸಿ, ಉಣ್ಣೆಗಳನ್ನು ಸಂಗ್ರಹಿಸಿ, ಅವುಗಳನ್ನು ನಾಶ ಮಾಡುವ ಮೂಲಕ ಅವು ಮನುಷ್ಯರಿಗೆ ಕಚ್ಚುವುದನ್ನು ತಡೆದು, ರೋಗ ಹರಡುವುದು ನಿಯಂತ್ರಿಸಬಹುದಾಗಿದೆ.

ಕಾಡಿನಲ್ಲಿ ಸಾಯುವ ಎಲ್ಲಾ ಮಂಗಗಳನ್ನು ಪಶುಪಾಲನಾ ಇಲಾಖೆ ವತಿಯಿಂದ ಶವ ಪರೀಕ್ಷೆ ಮಾಡಿ ಸಾವಿಗೆ ನಿಖರ ಕಾರಣವನ್ನು ಪತ್ತೆ ಹಚ್ಚಬೇಕು. ಸಾರ್ವಜನಿಕರು ಮಂಗನ ಕಾಯಿಲೆಯ ರೋಗ ಲಕ್ಷಣಗಳು ಕಂಡುಬAದಲ್ಲಿ ತಕ್ಷಣ ಅಗತ್ಯ ಚಿಕಿತ್ಸೆ ಪಡೆಯುವುದರ ಮೂಲಕ ಮಂಗನ ಕಾಯಿಲೆಯಿಂದ ಉಂಟಾಗುವ ಗಂಭೀರ ಸಮಸ್ಯೆಗಳಿಂದ ಪಾರಾಗಬಹುದಾಗಿದ್ದು, ಅರಿವು,  ಜಾಗೃತಿ,  ಮುಂಜಾಗ್ರತೆ,  ಮುನ್ನೆಚ್ಚರಿಕೆಯೇ  ಸರ್ವ  ರೋಗಗಳಿಗೂ  ದೊರೆಯುವ  ಉಚಿತ  ಮತ್ತು ಖಚಿತ ಮದ್ದು...

Read These Next

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಅಪರಾಧಿ :ನ್ಯಾಯಾಲಯ ತೀರ್ಪು

ಬೆಂಗಳೂರು: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾರವಾರ ಶಾಸಕ ಸತೀಶ್ ಸೈಲ್ ಸೇರಿದಂತೆ ಈ ...

ಸ್ಕ್ಯಾನಿಂಗ್ ಸೆಂಟರ್‌ಗಳ ತಪಾಸಣೆ ನಿರಂತರವಾಗಿರಲಿ; ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ

ಜಿಲ್ಲೆಯಲ್ಲಿರುವ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ನಿಯಮಿತವಾಗಿ ತಪಾಸಣೆ ಮಾಡುವ ಮೂಲಕ, ಜಿಲ್ಲೆಯಲ್ಲಿ ಗರ್ಭ ಪೂರ್ವ ಮತ್ತು ...

ಕಾರವಾರ: ದೀಪಾವಳಿ ಹಬ್ಬವನ್ನು ಬೆಳಕಿನ ಹಬ್ಬವಾಗಿ ಮತ್ತು ಪರಿಸರ ಸ್ನೇಹಿಯಾಗಿ ಆಚರಿಸಿ; ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ

ತಿ ವರ್ಷವು ದೀಪಾವಳಿ ಹಬ್ಬವನ್ನು ಸಾಂಪ್ರ‍್ರದಾಯಿಕವಾಗಿ ದೇಶದಾದ್ಯಂತ ಆಚರಿಸಲಾಗುತ್ತಿದ್ದು, ದೀಪಾವಳಿ ಹಬ್ಬವನ್ನು ದೀಪಗಳ ಸಾಲಿನ ...

ನೈತಿಕ ಮೌಲ್ಯಗಳು ಮತ್ತು ಸಚ್ಚಾರಿತ್ರ್ಯ: ಪ್ರವಾದಿ ಮುಹಮ್ಮದ್ (ಸ) ಅವರ ಬದುಕಿನ ದಾರ್ಶನಿಕತೆ

ಇಂದು ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ ನೈತಿಕ ಮೌಲ್ಯಗಳ ಅಧಪತನ ಮತ್ತು ...

ಕಾರವಾರ: ಶಕ್ತಿ ಯೋಜನೆಗೆ ತುಂಬಿತು ವರ್ಷ: ಜಿಲ್ಲೆಯಲ್ಲಿ 6.19 ಕೋಟಿ ಮಹಿಳೆಯರಿಗೆ ಉಚಿತ ಪ್ರಯಾಣದ ಹರ್ಷ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಸಂಚರಿಸುವ ಉಚಿತ ...

ಮೇ 31 ವಿಶ್ವ ತಂಬಾಕು ರಹಿತ ದಿನ; ಜಿಲ್ಲೆಯಲ್ಲಿ ತಂಬಾಕು ದುಷ್ಪರಿಣಾಮಗಳ ನಿಯಂತ್ರಣಕ್ಕೆ ವಿವಿಧ ಕಾರ್ಯಕ್ರಮ

ಉತ್ತರ ಕನ್ನಡ ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ನಿಯಂತ್ರಣಕ್ಕೆ ಕಳೆದ ಒಂದು ವರ್ಷದಿಂದ ಜಿಲ್ಲಾ ಹಾಗೂ ತಾಲೂಕು ...