ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ; ಅವ್ಯವಸ್ಥೆ ಕುರಿತಂತೆ ವೈದ್ಯರಿಗೆ  ತರಾಟೆ

Source: sonews | By Staff Correspondent | Published on 18th January 2018, 12:49 AM | Coastal News | State News | Don't Miss |

ಭಟ್ಕಳ: ತಾಲೂಕಿನ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯ ಆಗಾರವಾಗಿದ್ದು ಸಾಕಷ್ಟು ವೈದ್ಯರಿದ್ದರೂ ಸಹ ಸರಿಯಾಗಿ ಕರ್ತವ್ಯ ನಿರ್ವಹಿಸದೆ ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್  ತಾಲೂಕಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದು ತಾಲೂಕು ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. 
ಕಳೆದ ಹಲವಾರು ವರ್ಷಗಳಿಂದ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯು ಮೀತಿ ಮೀರಿದ್ದು, ಸದ್ಯಕ್ಕೆ ಇಲ್ಲಿ ರೋಗಿಗಳಿಗೆ ಚಿಕಿತ್ಸೆ ತಪಾಸಣೆ ಮಾಡಲು ಯಾವೊಬ್ಬ ವೈದ್ಯರಿಲ್ಲದೇ ಪರದಾಡಿದ ಸ್ಥಿತಿ ನಿರ್ಮಾಣ ಆಗಿದ್ದನ್ನು ಮನಗೊಂಡ ಸಾರ್ವಜನಿಕರು ವಿವಿಧ ಸಂಘಟನೆಗಳ ಪ್ರಮುಖರು ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಪರಿಶೀಲಿಸಲು ಬಂದ ಜಿಲ್ಲಾ ಆರೋಗ್ಯಾಧಿಕಾರಿ ಅಶೋಕರನ್ನು ತರಾಟೆಗೆ ತೆಗೆದುಕೊಂಡರು ಎಂದು ಹೇಳಲಾಗುತ್ತಿದೆ.
ಆಸ್ಪತ್ರೆಯಲ್ಲಿನ ಅವ್ಯವಸ್ಥೆಯ ಬಗ್ಗೆ ಈ ಹಿಂದೆ ಸಾಕಷ್ಟು ಬಾರಿ ದೂರಿಕೊಂಡರು ಸಹ ಕೇವಲ ಸುಳ್ಳು ಭರವಸೆಯನ್ನು ನೀಡಿ ಮೇಲಾಧಿಕಾರಿಗಳು ತೆರಳುತಿÀದ್ದುದ್ದು ಸಮಸ್ಯೆ ಪರಿಹಾರವಾಗುವ ಬದಲು ಇನ್ನಷ್ಟು ಉಲ್ಭಣಗೊಳ್ಳುತ್ತಿತ್ತು ಎನ್ನಲಾಗಿದೆ.
ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತಂತೆ ಜಯಕರ್ನಾಟಕ ಸಂಘದ ಸದಸ್ಯರು ಜಿಲ್ಲಾವೈದ್ಯಾಧಿಕಾರಿಗಳ ಗಮನಕ್ಕೆ ತಂದಿದ್ದು ತಾಲೂಕು ವೈದ್ಯಾಧಿಕಾರಿಯ ನಿರ್ಲಕ್ಷತನದಿಂದಾಗಿ ಇಡೀ ವ್ಯವಸ್ಥೇಯೆ ಹಾಳಾಗಿದ್ದು ಮೊದಲು ವೈದ್ಯಾಧಿಕಾರಿಯನ್ನು ಸರಿಪಡಿಸುವಂತೆ ಆಗ್ರಹಿಸಿದರು ಎನ್ನಲಾಗಿದೆ. ಇಲ್ಲಿನ ಆಸ್ಪತ್ರೆಯ ನಗುಮಗುವಿನ ಅಂಬುಲೆನ್ಸ ಹಾಗೂ ತುರ್ತು ಅಂಬುಲೆನ್ಸನಲ್ಲಿ ಚಾಲಕರಿಗೆ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಉಚಿತವಾಗಿ ಕರೆದೊಯ್ಯಬೇಕೆ ಅಥವಾ ಡಿಸೇಲ್ ಚಾರ್ಜ ಹಣ ಪಡೆದುಕೊಳ್ಳಬೇಕೆ ಎಂಬ ಬಗ್ಗೆ ಇಲ್ಲಿನ ಆಸ್ಪತ್ರೆಯ ಮುಖ್ಯ ಆರೋಗ್ಯ ವೈದ್ಯಾಧಿಕಾರಿ ಸರಿಯಾಗಿ ಮಾಹಿತಿ ನೀಡದೇ ರೋಗಿಗಳಿಂದಲೇ ಹಣ ಪಡೆದು ಡಿಸೇಲ್ ಹಣ ಪಡೆದುಕೊಳ್ಳುವಂತೆ ಮಾಡಿದ್ದಾರೆ. ಆದರೆ ರೋಗಿಯೂ ಬಿಪಿಎಲ್ ಕಾರ್ಡ ಹೊಂದಿದ್ದರೆ ಹಾಗೂ ತೀರಾ ಬಡವರಿದ್ದರೆ ಅಂತಹವರಿಗೆ ಉಚಿತವಾಗಿ ಅಂಬುಲೆನ್ಸನಲ್ಲಿ ಕರೆದೊಯ್ಯಬೇಕೇಂದು ಅಂಬುಲೆನ್ಸ ಚಾಲಕರಿಗೆ ಸೂಚನೆಯನ್ನು ನೀಡಿದಿರುವುದು ಅಧಿಕಾರಿಯ ನಿರ್ಲಕ್ಷ್ಯತೆಯನ್ನು ತೋರಿಸುತ್ತದೆ. ಹಾಗೂ ಇಲ್ಲಿನ ಮುಖ್ಯ ಆರೋಗ್ಯಾಧಿಕಾರಿ ತಮ್ಮ ವೈಯಕ್ತಿಕ ವಿಚಾರಕ್ಕೆ ಅಂಬುಲೇನ್ಸ ಬಳಸಿಕೊಂಡು ಈಗಾಗಲೇ 60 ಸಾವಿರ ಸರಕಾರಿ ಹಣವನ್ನು ದುರ್ಬಳಕೆ ಮಾಡಿಕೊಂಡ ಬಗ್ಗೆ ಸಂಘಟನೆಯಿಂದ ಆರೋಪಗಳು ಕೇಳಿ ಬಂದವು. ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಸಹ ತಾಕಿತು ಮಾಡಿದರು.     
ತಾಲೂಕಿನ ವ್ಯಾಪ್ತಿಯಲ್ಲಿ ಬಳಕೆಯಾಗಬೇಕಾದ ನಗುಮಗು ಅಂಬುಲೆನ್ಸನ್ನು ಜಿಲ್ಲೆಯಾದ್ಯಂತ ಅನಾವಶ್ಯಕ ವಿಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಸಂಘಟನೆಯಿಂದ ಒತ್ತಡ ಹೇರಲಾಯಿತು. ಅದೇ ರೀತಿ ಇಲ್ಲಿನ ಆಸ್ಪತ್ರೆಯ ರಕ್ತ ಪರೀಕ್ಷಾ ಕೇಂದ್ರದ ರಕ್ತವನ್ನು ಖಾಸಗಿಯವರಿಗೆ ಮಾರಾಟ ಮಾಡಿ ಈ ಕೆಲಸಕ್ಕೆ ಓರ್ವ ಖಾಸಗಿ ಲ್ಯಾಬ್ ವ್ಯಕ್ತಿಯನ್ನು ನೇಮಿಸಿ ಅವ್ಯವಹಾರದಲ್ಲಿ ಓರ್ವ ವೈದ್ಯ ಹಾಗೂ ರಕ್ತ ಪರೀಕ್ಷಾ ಕೇಂದ್ರ ತಂತ್ರಜ್ಞನೂ ಶ್ಯಾಮಿಲಾಗಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದನ್ನು ಜಿಲ್ಲಾ ಆರೋಗ್ಯಾಧಿಕಾರಿಯ ಮುಂದಿಟ್ಟರು. ಈ ಬಗ್ಗೆ ಸೂಕ್ತ ದಾಖಲೆಯಿದ್ದರೆ ಆ ಮೂಲಕ ತನಿಖೆ ಮಾಡಿ ಸೂಕ್ತ ಕ್ರಮ ಜರುಗಿಸುವ ಬಗ್ಗೆ ಭರವಸೆಯನ್ನು ನೀಡಿದರು. ಹಾಗೂ ಆಸ್ಪತ್ರೆಯಲ್ಲಿ ರೋಗಿಗಳು ಮಲಗುವ ಬೆಡ್‍ಗೆ ಹಾಕಲಾದ ಬಟ್ಟೆಯ ಸ್ವಚ್ಛತೆಯನ್ನು ಮಾಡದೇ ರೋಗಿಗಳು ಇನ್ನಷ್ಟು ರೋಗಕ್ಕೆ ತುತ್ತಾಗುವಂತೆ ಮಾಡುತ್ತಿದ್ದಾರೆ. ಮತ್ತು ಇಲ್ಲಿನ ಹಾಲಿ ಮುಖ್ಯ ಆರೋಗ್ಯಾಧಿಕಾರಿ ಡಾ. ಮಂಜುನಾಥ ಶೆಟ್ಟಿ ಯವರಿಗೆ ಆಸ್ಪತ್ರೆಯನ್ನು ನಡೆಸಿಕೊಂಡು ಹೋಗುವ ಕ್ಷಮತೆ ಇಲ್ಲದ ಕಾರಣ ಅವರನ್ನು ಆ ಹುದ್ದೆಯಿಂದ ಕೆಳಗಿಳಿಸಿ ಸೂಕ್ತ ವೈದ್ಯರನ್ನು ಅವರ ಸ್ಥಾನಕ್ಕೆ ಭರ್ತಿ ಮಾಡಿ ಎಂಬ ಬಗ್ಗೆ ಜಯ ಕರ್ನಾಟಕ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಜಿಲ್ಲಾ ಆರೋಗ್ಯಾಧಿಕಾರಿ ಅಶೋಕ ಕುಮಾರವರಿಗೆ ಸೂಚನೆ ನೀಡಿದರು. ಒಟ್ಟಾರೆ ಸಮಸ್ಯೆ ಅರಿತು ಪರಿಹಾರಕ್ಕೆ ಸೂಕ್ತ ಕ್ರಮ ಜರುಗಿಸಿ ಆಸ್ಪತ್ರೆಯ ಅವ್ಯವಸ್ಥೆಗೆ ಅಂತ್ಯ ಸಿಗಲಿದೆಯಾ ಎಂದು ಕಾದುನೋಡಬೇಕಾಗಿದೆ. 
ಜಿಲ್ಲಾ ಆರೋಗ್ಯಾಧಿಕಾರಿ ಅಶೋಕ ಕುಮಾರ, “ಆಸ್ಪತ್ರೆಯಲ್ಲಿ ಮುಖ್ಯವಾಗಿ ಆಡಳಿತ ವೈದ್ಯಾಧಿಕಾರಿ ಹಾಗೂ ಉಳಿದ ವೈದ್ಯರ ನಡುವೆ  ಹೊಂದಾಣಿಕೆ ಇಲ್ಲದ ಕಾರಣ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ. ಈ ಬಗ್ಗೆ ಪರಿಶೀಲನೆ ಮಾಡಿದ್ದು ಹಾಲಿ ಇರುವ ಆಡಳಿತ ವೈದ್ಯಾಧಿಕಾರಿಯನ್ನು ಬದಲಿಸಿ 9 ಮಂದಿ ವೈದ್ಯರಲ್ಲಿ ಓರ್ವ ಸೂಕ್ತ ವೈದ್ಯರನ್ನು ಹಾಲಿ ಸ್ಥಾನಕ್ಕೆ ಸೇರ್ಪಡೆ ಮಾಡಿ ವ್ಯವಸ್ಥೆಯನ್ನು ಸರಿಪಡಿಸುತ್ತೇವೆ. ಆಸ್ಪತ್ರೆಯ ಬೆಡ್ ಸ್ವಚ್ಛತೆಯ ಬಗ್ಗೆ ಇವತ್ತಿನಿಂದಲೇ ಸರಿಪಡಿಸಿ ಸಮಸ್ಯೆ ಪರಿಹಾರ ಮಾಡುತ್ತೇವೆ. ಆಸ್ಪತ್ರೆಯಲ್ಲಾದ ಎಲ್ಲಾ ಅವ್ಯವಹಾರದ ಬಗ್ಗೆ ಕುದ್ದು ನಾನೇ ಬಂದು ಪರಿಶೀಲಿಸಿ ಸೂಕ್ತ ಕ್ರಮವನ್ನು ಜರುಗಿಸಲಾಗುವುದು. ಸಮಸ್ಯೆಯೂ ಆರೋಗ್ಯ ಸಚಿವರು ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ಬಂದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆಗೆ ಮುಂದಿನ ಕ್ರಮದ ಬಗ್ಗೆ ಚರ್ಚಿಸಿ ತಿಳಿಸಲಾಗುವುದು. ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. 
ಜಯ ಕರ್ನಾಟಕ ರಕ್ಷಣಾ ಸಂಘ ತಾಲುಕಾ ಅಧ್ಯಕ್ಷ ಸುಧಾಕರ ನಾಯ್ಕ,“ತಾಲುಕಾಸ್ಪತ್ರೆಯಲ್ಲಿ ಹಲವು ವರ್ಷದಿಂದ ಸಾಕಷ್ಟು ಸಮಸ್ಯೆಯಲ್ಲಿಯೇ ನಡೆದುಕೊಂಡು ಬಂದಿದ್ದು ಬರುವಂತಹ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಈ ಹಿಂದೆ ಎರಡು ಬಾರಿ ಜಿಲ್ಲಾ ಆರೋಗ್ಯಾಧಿಕಾರಿ ಅವರ ಗಮನಕ್ಕು ಸಹ ತಂದಿದ್ದು ಸಮಸ್ಯೆಗೆ ಇತ್ಯರ್ಥ ಸಿಕ್ಕಿಲ್ಲವಾಗಿತ್ತು. ಆದರೆ ಸೋಮವಾರದಂದು ಯಾವೊಬ್ಬ ವೈದ್ಯರು ರೋಗಿಗಳ ತಪಾಸಣೆಗ ಇಲ್ಲದೇ ರೋಗಿಗಳಿಗೆ ತೊಂದರೆಯಾಗಿತ್ತು. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಇನ್ನು ಗಮನ ನೀಡಿದೇ ಇಲ್ಲಿನ ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂಬ ಎಚ್ಚರಿಕೆಯನ್ನು ನೀಡಿದರು.        

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...

ಪ್ರಜಾಧ್ವನಿ ಸಮಾವೇಶ: ಭಟ್ಕಳದಿಂದ ಕುಮಟಾ ದ ವರೆಗೆ ಬೈಕ್ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪ್ರಜಾಧ್ವನಿ- 2 ಸಮಾವೇಶಕ್ಕೂ ಪೂರ್ವ ಬೃಹತ್ ಬೈಕ್ ರ್ಯಾಲಿ ಮೂಲಕ ಕರಾವಳಿಯಲ್ಲಿ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...