ಮತದಾರರ ಅಂತಿಮ ಪಟ್ಟಿ ರಾಜಕೀಯ ಪಕ್ಷಕ್ಕೆ ಹಸ್ತಾಂತರ

Source: S O News | By I.G. Bhatkali | Published on 24th January 2024, 7:07 PM | Coastal News | Don't Miss |

ಭಟ್ಕಳ: ವಿಧಾನಸಭಾ ಕ್ಷೇತ್ರದ ವಿಶೇಷ ಪರಿಷ್ಕರಣೆ-2024ರ ಮತದಾರರ ಅಂತಿಮಪಟ್ಟಿಯನ್ನು ರಾಜಕೀಯ ಪಕ್ಷದ ವಕ್ತಾರರಿಗೆ ಉಪವಿಭಾಗಾಧಿಕಾರಿ ನಯನಾ ಅವರು ಹಸ್ತಾಂತರಿಸಿದರು.

ನಂತರ ವಿವಿಧ ರಾಜಕೀಯ ಪಕ್ಷದ ವಕ್ತಾರೊಂದಿಗೆ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದ್ದು, ಭಟ್ಕಳ ವಿಧಾನಸಭಾ ಕ್ಷೇತ್ರದ ಚುನಾವಣೆಯ ಅಂತಿಮ ಮತದಾರರ ಪಟಿಯಲ್ಲಿ 1,14,053 ಪುರುಷ ಮತದಾರರು ಮತ್ತು 1,11,075 ಮಹಿಳಾ ಮತದಾರರು ಸೇರಿ ಒಟ್ಟು 2,25,128 ಮತದಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಮತದಾರರ ಪಟ್ಟಿಯಿಂದ 2,740 ಹೆಸರನ್ನು ತೆಗೆದುಹಾಕಲಾಗಿದ್ದು, 4,434 ಹೆಸರುಗಳನ್ನೂ ತಿದ್ದುಪಡಿಮಾಡಲಾಗಿದೆ ಅಲ್ಲದೆ 1,799 ಹೊಸದಾಗಿ ಮತದಾರರು ಸೇರ್ಪಡೆಗೊಂಡಿದ್ದಾರೆ ಅಂತಹವರಿಗೆ ಅಂಚೆಯ ಮೂಲಕ ಅವರುಗಳ ಮನೆಗೆ ಮತದಾರರ ಗುರುತಿನ ಚೀಟಿಯನ್ನ ಕಳುಹಿಸಲಾಗುವುದು ಎಂದರು.

ವಿಶೇಷ ಪರಿಷ್ಕರಣೆ ಅವಧಿಯಲ್ಲಿ ಮನೆ ಮನೆ ಸಮೀಕ್ಷೆ ಕಾರ್ಯವನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಮರಣ, ವರ್ಗಾವಣೆ ಹೊಂದಿದ ಮತದಾರರನ್ನು ಸೇರ್ಪಡೆ ಹಾಗೂ ಕಡಿಮೆ ಮಾಡಲು ಸಲ್ಲಿಸಿದ ಅರ್ಜಿಗಳನ್ನು ಮತಗಟ್ಟೆ ಮೇಲ್ವಿಚಾರಕರು,

ಕಂದಾಯ ನಿರೀಕ್ಷಕರು, ಉಪ ತಹಶೀಲ್ದಾರರು ಹಾಗೂ ತಹಶೀಲ್ದಾರರು ಸ್ವತಃ ಪರಿಶೀಲಿಸಿ ನಿಯಮಾನುಸಾರ ದೃಢೀಕರಿಸಿದ ನಂತರದಲ್ಲಿ ಪತದಾರರ ಪಟ್ಟಿಯನ್ನು ಅಂತಿಮಗೊಳಿಸಲಾಗಿ ದೆ ಎಂದು ಪರಿಷ್ಕರಣೆಯ ಕುರಿತು ವಿವರಣೆ ನೀಡಿದರು.

ತಿದ್ದುಪಡಿಗೆ ಇನ್ನೂ ಕಾಲಾವಕಾಶವಿದ್ದು, ಬಿಡುಗಡೆಗೊಳಿಸಿದ ಅಂತಿಮ ಮತದಾರ ಪಟ್ಟಿಯಲ್ಲಿನ ತಮ್ಮ ಹೆಸರು ವಿಳಾಸವನ್ನು ಪರಿಶೀಲಿಸಿ ತಿದ್ದುಪಡಿ ಮಾಡಬಹುದಾಗಿ ದ್ದು, ಬದಲಾವಣೆಗೆ ಅಥವಾ ತಿದ್ದುಪಡಿ ಗೆ ಫಾರ್ಮ 8ರ ಮೂಲಕ ಆನ್‌ಲೈನ್ ಮೂಲಕ ಇಲ್ಲವೆ ನೇರವಾಗಿ ಇಲಾಖೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ ನಯನಾ, ಸಾರ್ವಜನಿಕರು, ಮತದಾರರು ಮತದಾರರ ಪಟ್ಟಿ ಕಾರ್ಯಚಟುವಟಿಕೆಗಳ ಲಾಭವನ್ನು ಪಡೆದಕೊಂಡು ಯಾವುದೇ ಕಚೇರಿಗೆ ಹೋಗದೆ ಅವರಿರುವ ಸ್ಥಳದಿಂದಲೇ web Portal-voters.eci.gov. in, Voter Helpline mobile App ಅಥವಾ 1950 voter Help- line ಮುಖಾಂತರ ಆಗಿರುವ ತಪ್ಪುಗಳಿಗೆ ಸಂಬಂಧಪಟ್ಟ ನಮೂನೆಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ ಪಕ್ಷದ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ ಮೂಡಭಟ್ಕಳ, ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಮುಖಂಡ ತಿಲಕಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...