‘ರೈತರ ಸಾಲ ಮನ್ನಾ ವಿಚಾರ : ಸಮರ್ಪಕ ವಿತರಣೆಗೆ ಬ್ಯಾಂಕ ನಿರ್ದೇಶಕ ಎಂ.ಡಿ ನಾಯ್ಕ ಆಗ್ರಹ’

Source: S.O. News Service | Published on 6th August 2019, 8:07 PM | Coastal News | Don't Miss |

ಭಟ್ಕಳ: ಈ ಹಿಂದಿನ ಮೈತ್ರಿ ಸರಕಾರದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅವಧಿಯಲ್ಲಿ ತಮ್ಮ ಕ್ಯಾಬಿನೆಟ್ ಸಭೆ ಕಮಿಟಿಯಲ್ಲಿ ರಾಜ್ಯ ರೈತರ 58 ಸಾವಿರ ಕೋಟಿ ಹಣ ಸಾಲ ಮನ್ನಾ ಮಾಡುವುದಾಗಿ ತೀರ್ಮಾನಿಸಲಾಗಿದ್ದು, ಆದರೆ ಇನ್ನು ತನಕ ಸಾಲ ಸಮರ್ಪಕವಾಗಿ ವಿತರಣೆಯಾಗದೇ ರೈತರು ಪರದಾಡುತ್ತಿದ್ದಾರೆ. ಈ ಬಗ್ಗೆ ಸರಕಾರ ಹಾಗೂ ಇಲ್ಲಿನ ಸ್ಥಳಿಯ ರೈತರ ಸಾಲಮನ್ನಾದ ವಿಚಾರದಲ್ಲಿ ಶಾಸಕರು ಈ ಬಗ್ಗೆ ಗಮನ ವಹಿಸಬೇಕು ಎಂದು ಆಗ್ರಹಿಸಿ ಮಾರುಕೇರಿಯ ವ್ಯವಸ್ಯಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಎಂ.ಡಿ. ನಾಯ್ಕ ಹಾಗೂ ಜಗದೀಶ ಎಮ್. ಗೊಂಡ ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ. 

ಕರ್ನಾಟಕ ರಾಜ್ಯದಲ್ಲಿಯೇ ಐತಿಹಾಸಿಕವಾಗಿ ರೈತರ ಪರವಾಗಿ 58 ಸಾವಿರ ಕೋಟಿ ರೂ. ಸಾಲ ಮನ್ನಾ ಹಣವು ರಾಜ್ಯದ ರೈತರಿಗೆ ವರದಾನವಾಗಿದೆ ಹಾಗೂ ಇದೊಂದು ಅವಿಸ್ಮರಣೀಯ ವಿಚಾರ (ಗಿನ್ನಿಸ್ ದಾಖಲೆ) ಸಹ ಹೌದಾಗಿದೆ. ಇದರಲ್ಲಿ ರೈತರ ಸಾಲವೂ ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ 2 ಲಕ್ಷ ಮತ್ತು ಸಹಕಾರಿ ಬ್ಯಾಂಕುಗಳಿಂದ 1 ಲಕ್ಷದವರೆಗೆ ತೀರ್ಮಾನವಾಗಿ ಬಜೆಟ್ ಪ್ರಕಟಣೆ ಸಹ ಆಗಿದ್ದು, ಕಾರಣ ಸರ್ಕಾರ ಮತ್ತು ಕೆಡಿಸಿಸಿ ಮತ್ತು ಅಪೇಕ್ಸ್ ಬ್ಯಾಂಕುಗಳು ರೈತರ ಖಾತೆಗೆ ಇನ್ನೂ ಜಮಾವಣೆಯನ್ನು ತ್ವರಿತಗತಿಯಲ್ಲಿ ಮಾಡಿಲ್ಲವಾಗಿದೆ.
ರೈತರು ತಮ್ಮ ಸಾಲ ಮನ್ನಾದ ಬಾಬ್ತು ಸೌಲಭ್ಯ ಪಡೆಯಲು ತಮ್ಮ ಬ್ಯಾಂಕುಗಳಲ್ಲಿ ಸಾಲ ಮರುಪಾವತಿ ಮಾಡಿದ್ದಾರೆ. ಆದರೆ ಮರುಪಾವತಿ ಮಾಡಿದ್ದ ಎಲ್ಲಾ ರೈತರಿಗೆ ಹಣ ಜಮಾವಣೆ ಆಗಿಲ್ಲವಾಗಿದೆ. ಕಾರಣ ರೈತರು ಮರುಪಾವತಿಗಾಗಿ ಕೈಗಡ ಸಾಲ, ಬಂಗಾರದ ಸಾಲ, ಫೈನಾನ್ಸ್ ಸಾಲ ಮಾಡಿದ್ದಾರೆ. ಇದರಿಂದ ಇಲ್ಲಿನ ರೈತರು ಸಾಲ ಸಮರ್ಪಕವಾಗಿ ವಿತರಣೆ ಆಗದೇ ಪರದಾಡುವಂತಾಗಿದೆ. ಈ ಬಗ್ಗೆ ತಕ್ಷಣ ಸರಕಾರ ಹಾಗೂ ಕ್ಷೇತ್ರದ ಶಾಸಕರು ರೈತರ ಸಮಸ್ಯೆಯನ್ನರಿತು ಅವರ ಪರವಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ರೈತರ ಪರವಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

 

 

 


   

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...