ಯುವಕರನ್ನು ಜೀವಂತ ಸುಟ್ಟ ಪ್ರಕರಣ; ಬಜರಂಗದಳದ ಮೋನು ಮನೇಸರ್ ಸಹಿತ 21 ಮಂದಿ ವಿರುದ್ಧ ಕೇಸ್ ದಾಖಲಿಸಿದ ಪೊಲೀಸರು

Source: Vb | By I.G. Bhatkali | Published on 23rd May 2023, 7:13 AM | National News |

ಹೊಸದಿಲ್ಲಿ: ಫೆಬ್ರವರಿಯಲ್ಲಿ ಗೋಹತ್ಯೆ ಶಂಕೆಯ ಹಿನ್ನೆಲೆಯಲ್ಲಿ ಇಬ್ಬರು ಮುಸ್ಲಿಮ್ ಯುವಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀ ಸರು ಬಜರಂಗದಳ ನಾಯಕ ಮೋನು ಮನೇಸರ್ ಮತ್ತು ಇತರ 21 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಜುನೈದ್ ಮತ್ತು ನಾಸಿರ್ ಎಂಬ ಇಬ್ಬರು ಯುವಕರ ಬರ್ಬರ ಹತ್ಯೆ ದೇಶಾದ್ಯಂತ ಆಕ್ರೋಶ ಸೃಷ್ಟಿಸಿತ್ತು. ರಾಜಸ್ಥಾನದ ಘಟ್ಟಕ ಗ್ರಾಮದ ಸೋದರ ಸಂಬಂಧಿ ಗಳಾದ ಜುನೈದ್ ಮತ್ತು ನಾಸಿರ್ ಅವರ ಮೇಲೆ ದಾಳಿ ನಡೆದು ಅವರನ್ನು ಅಪಹರಿಸಿ ನಂತರ ಅವರ ಕಾರಿನೊಳಗೆ ಅವರನ್ನು ಜೀವಂತ ದಹಿಸಲಾಗಿತ್ತು ಎಂದು ಆರೋಪಿಸಲಾಗಿದೆ.

ಇಬ್ಬರ ವಿರುದ್ಧವೂ ಗೋಕಳ್ಳಸಾಗಣಿಕೆಯ ಆರೋಪ ಹೊರಿಸಿ ಈ ಕೃತ್ಯವೆಸಗಲಾಗಿದೆ. ಮೃತದೇಹಗಳು ಹರ್ಯಾಣದ ಭಿವಾನಿ ಎಂಬಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಬಜರಂಗದಳದ ಮೋನು ಮನೇಸ‌ ಹೆಸರು ಕೇಳಿ ಬಂದಾಗ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ಆತನನ್ನು ಬಂಧಿಸದಂತೆ ಎಚ್ಚರಿಕೆ ನೀಡಿದ್ದವು.

ಈ ಪ್ರಕರಣದ ಮೂವರು ಆರೋಪಿಗಳಾದ ರಿಂಕು ಸೈನಿ, ಲೋಕೇಶ್ ಸಿಂಗ್ಲ ಮತ್ತು ಶ್ರೀಕಾಂತ್ ಪೊಲೀಸ್ ಮಾಹಿತಿದಾರರಾಗಿದ್ದಾರೆ.

ಈ ಪ್ರಕರಣದ ಎಫ್‌ಐಆರ್‌ನಲ್ಲಿ 21 ಮಂದಿಯ ಹೆಸರು ಉಲ್ಲೇಖಿಸಲಾಗಿದೆ ಎಂದು ರವಿವಾರ ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...