ಭಾರತ್ ಬಂದ್ ಯಶಸ್ವಿಗೆ ಬಹುಜನ ಕ್ರಾಂತಿ ಮೋರ್ಚಾ ಕರೆ;  ಪೋಸ್ಟರ್ ಬಿಡುಗಡೆ

Source: sonews | By Staff Correspondent | Published on 28th January 2020, 10:36 PM | Coastal News | Don't Miss |

ಭಟ್ಕಳ: ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‍ಸಿಆರ್) ಪ್ರಕ್ರಿಯೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ಜ.29ರಂದು ಬಂದ್ ಗೆ ಕರೆ ನೀಡಿದ್ದು ಭಟ್ಕಳದಲ್ಲಿ ಇದನ್ನು ಯಶಸ್ವಿಗೊಳಿಸಬೇಕೆಂದು ಬಹುಜನ ಕ್ರಾಂತಿ ಮೋರ್ಚಾದ ಮುಖಂಡ ಆದಂ ಪಣಂಬೂರು ಕರೆ ನೀಡಿದರು. 

ಅವರು ಮಂಗಳವಾರ ಇಲ್ಲಿನ ಹೊಟೆಲ್ ಶ್ರೀನಿವಾಸ ಡೀಲಕ್ಸ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. 

ಬಹುಜನ ಕ್ರಾಂತಿ ಮೋರ್ಚಾ ಮೂರು ಹಂತದಲ್ಲಿ ರಾಷ್ಟ್ರ ವ್ಯಾಪಿ ಆಂದೋಲನ ನಡೆಸಿದ್ದು ಬುಧವಾರ ನಡೆಯುತ್ತಿರುವ ರಾಷ್ಟ್ರವ್ಯಾಪಿ ಇದು ಮೂರನೇ ಹಂತದ ಹೋರಾಟವಾಗಿದೆ ಎಂದು ತಿಳಿಸಿದ ಅವರು, ನಾವು ಡಿ.ಎನ್.ಎ ಆಧಾರಿತ ಎನ್.ಆರ್.ಸಿ ಯನ್ನು ಮಾಡಬೇಕೆಂದು ಆಗ್ರಹಿಸುತ್ತಿದ್ದೇವೆ. ದೇಶದ ಅಸಲಿ ಮೂಲ ನೀವಾಸಿಗಳು ಯಾರೆಂದು ಆಗ ತಿಳಿಬರುತ್ತದೆ. ಇದರಿಂದಾಗಿ ಇಡೀ ದೇಶದ ಮುಂದೆ ವಿದೇಶಿಯರು ಯಾರು ಎಂಬುದು ತಿಳಿದು ಬರುತ್ತಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಮುಖಂಡರಾದ ಶೌಕತ್ ಕತೀಬ್, ಯೂನೂಸ್ ರುಕ್ನುದ್ದೀನ್, ಮುನೀರ್ ಎಂ.ಎಚ್. ವಸೀಮ್ ಮನೆಗಾರ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಭಾರತ್ ಬಂದ್ ನಿಮಿತ್ತ ಪೋಸ್ಟರ್ ಬಿಡುಗಡೆ ಮಾಡಲಾಯಿತು.
 

Read These Next