ನರೇಗಾ ಯೋಜನೆಯಡಿ ನೆರವು. ಎರಡು ಎಕರೆಯಲ್ಲಿ 40 ಟನ್ ಬಾಳೆ ಲಕ್ಷಾಂತರ ರೂ.ಆದಾಯ ಪಡೆದ ರೈತ

Source: SO News | By Laxmi Tanaya | Published on 19th June 2021, 9:03 PM | State News | Don't Miss |

ಧಾರವಾಡ :  ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ರೈತರೊಬ್ಬರು ತಮ್ಮ ಎರಡು ಎಕರೆ ಭೂಮಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನೆರವು ಪಡೆದು ಬೆಳೆದ ಬಾಳೆಯು ಸುಮಾರು 40 ಟನ್ ಇಳುವರಿ ನೀಡಿ,3 ಲಕ್ಷ ರೂ.ಗಳಿಗೂ ಅಧಿಕ ಆದಾಯ ನೀಡಿದೆ.
ಕವಲಗೇರಿ  ಗ್ರಾಮದ ತಿಪ್ಪಣ್ಣ ಕಲ್ಲಪ್ಪ ತಿರ್ಲಾಪುರ ಅವರು ತಮ್ಮ ಎರಡು ಎಕರೆ ಭೂಮಿಯನ್ನು ಅಂಗಾಂಶ ಬಾಳೆಯ ಹೊಸ ತೋಟವಾಗಿ ಅಭಿವೃದ್ಧಿ ಪಡಿಸಲು ತೋಟಗಾರಿಕೆ ಇಲಾಖೆ ಮೂಲಕ  ಮಹಾತ್ಮಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2020-21 ನೇ ಸಾಲಿನಲ್ಲಿ ಕೂಲಿವೆಚ್ಚವಾಗಿ 78 ಸಾವಿರ ರೂ.ಹಾಗೂ ಸಾಮಗ್ರಿ ವೆಚ್ಚವಾಗಿ 27 ಸಾವಿರ ರೂ.ಗಳ ಅನುದಾನದ ನೆರವು ಪಡೆದು,283 ಮಾನವ ದಿನಗಳನ್ನು ಸೃಜಿಸಿದ್ದರು. ಪ್ರಸಕ್ತ ಬಾಳೆಯ ಸುಮಾರು 40 ಟನ್ ಫಸಲು ನೀಡಿದ್ದು,ಅದರ ಮಾರಾಟದಿಂದ ಬೆಳೆಗಾರರಾದ ತಿಪ್ಪಣ್ಣ ಅವರು ಸುಮಾರು 3 ಲಕ್ಷ 20 ಸಾವಿರ ರೂ.ಆದಾಯ ಗಳಿಸಿದ್ದಾರೆ ಎಂದು ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿ ಮಹೇಶ ಪಟ್ಟಣಶೆಟ್ಟಿ  ತಿಳಿಸಿದ್ದಾರೆ.

ಕೊರೊನಾದ ಈ ಸಂಕಷ್ಟದ ದಿನಗಳಲ್ಲಿಯೂ ತೋಟಗಾರಿಕೆ ಬೆಳೆಗಳನ್ನು ಬೆಳೆದು ರೈತರು ಯಶಸ್ಸು ಸಾಧಿಸಿರುವುದು ಮಾದರಿಯಾಗಿದೆ.ಬಹು ವಾರ್ಷಿಕ ಹಣ್ಣು,ಹೂವಿನ ತೋಟಗಳನ್ನು ಹೊಸದಾಗಿ ನಿರ್ಮಿಸಿಕೊಳ್ಳಲು ಎಂಜಿ ನರೇಗಾ ಯೋಜನೆಯಲ್ಲಿ ಸಾಕಷ್ಟು ಅವಕಾಶಗಳಿವೆ.ಕಳೆದ ಸಾಲಿನಲ್ಲಿ ನಿಗದಿತಗಿಂತ ಶೇ.30 ರಷ್ಟು ಅಧಿಕ ಪ್ರಗತಿ ಸಾಧಿಸಲಾಗಿದೆ.ಈ ಬಾರಿ ಶೇ.200 ರಷ್ಟು ಅಧಿಕ ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ.ರೈತರು ಹತ್ತಿರದ ತೋಟಗಾರಿಕೆ ಅಧಿಕಾರಿ,ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಶಿವಯೋಗಿ ಮನವಿ ಮಾಡಿದ್ದಾರೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...