ಬನವಾಸಿಯಲ್ಲಿ ಶ್ರೀಗಂಧ ಸಾಗಿಸುತ್ತಿದ್ದ ಇಬ್ಬರ ಬಂಧನ. ಇನ್ನಿಬ್ಬರು ಪರಾರಿ.

Source: SO News | By Laxmi Tanaya | Published on 23rd September 2020, 10:28 PM | Coastal News | Don't Miss |

ಶಿರಸಿ : ಶ್ರೀಗಂಧ ಕಟ್ಟಿಗೆಯನ್ನ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರನ್ನು ಮಾಲು ಸಮೇತ   ಶಿರಸಿ ತಾಲೂಕಿನ ಬನವಾಸಿಯಲ್ಲಿ ಪೊಲೀಸರು‌ ವಶಕ್ಕೆ ತೆಗೆದುಕೊಂಡಿದ್ದಾರೆ.

ಮಹೇಶ್ ಗುಡಿಗಾರ(48), ಗಣೇಶ ಗುಡಿಗಾರ(50) ಎಂಬುವವರನ್ನು ಬಂಧಿತರಾಗಿದ್ದು,  ಫೀರ್ ಖಾನ್ ಹಾಗೂ ಶಬಾನಾ ಫೀರ್ ಖಾನ್ ಚಿಕ್ಕಜಂಬೂರು ಮೂಲದ ವ್ಯಕ್ತಿಗಳು ಪರಾರಿಯಾದವರು.

ಸೊರಬದಿಂದ ಬನವಾಸಿ ಕಡೆಗೆ ಸ್ವಿಪ್ಟ್ ಕಾರಿನಲ್ಲಿ ಗಂಧದ ತುಂಡುಗಳನ್ನು ಹಾಕಿಕೊಂಡು ಶಿರಸಿ ಕಡೆಗೆ ಬರುತಿದ್ದರು
ಖಚಿತ ಮಾಹಿತಿ ಪಡೆದ ಬನವಾಸಿ ಪೊಲೀಸರು ಕಾರನ್ನು ತಡೆದು ತಪಾಸಣೆ ಮಾಡಿದ್ದಾರೆ. ಈ ವೇಳೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದು  ಇಬ್ಬರನ್ನು  ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಂಧಿತರಿಂದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ 6 ಗಂಧದ ತುಂಡುಗಳನ್ನು ಹಾಗೂ ಸಾಗಾಣಿಕೆಗೆ ಬಳಸಿದ ಸ್ವಿಫ್ಟ್ ಕಾರನ್ನು ಸಹ ವಶಪಡೆಯಲಾಗಿದ್ದು, ಬನವಾಸಿ ಪೊಲೀಸರು  ತನಿಖೆ ನಡೆಸಿದ್ದಾರೆ.

Read These Next

ದೇರಳಕಟ್ಟೆ ಬಳಿ ಖಾಸಗಿ ಬಸ್ ಮೇಲೆ ಕಲ್ಲು ತೂರಾಟ. ಘಟನೆ ನಡೆದು ಗಂಟೆಯೊಳಗೆ ಪತ್ತೆ ಹಚ್ಚಿದ ಪೊಲೀಸರು.

ಮಂಗಳೂರು : ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆ ಬಳಿ ಬಸ್ಸಿಗೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ಘಟನೆ ...

ಸುಳ್ಳಿನ ಆಧಾರದಲ್ಲಿ ಅಸ್ತಿತ್ವಕ್ಕೆ ಬಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರ ವಿಶ್ವಾಸ ಕಳೆದುಕೊಳ್ಳುತ್ತಿವೆ-ಎಚ್.ಕೆ.ಪಾಟೀಲ್

ಭಟ್ಕಳ : ದುಷ್ಟಾಲೋಚನೆಯೊಂದಿಗೆ ಅಧಿಕಾರಿಕ್ಕೆ ಬಂದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ವಿಶ್ವಾಸ ಕಳೆದುಕೊಂಡಿವೆ ಎಂದು ...

ಮನೆಯ ಚಾವಣಿ ಕುಸಿದು ಬಾಲಕ ಮೃತ

ಶ್ರೀನಿವಾಸಪುರ: ಇಲ್ಲಿಗೆ ಸಮೀಪದ ಪಾತಮುತ್ತಕಪಲ್ಲಿ ಗ್ರಾಮದಲ್ಲಿ ಮಳೆಯಿಂದಾಗಿ ಮನೆಯ ಚಾವಣಿ ಕುಸಿದು ಬಿದ್ದು ಬಾಲಕನೊಬ್ಬ ...

ಕಾರವಾರ: ಪಶ್ಚಿಮ ಪದವಿಧರ ಕ್ಷೇತ್ರದಲ್ಲಿ ಕುಬೇರಪ್ಪನವರಿಗೆ ಮತ ನೀಡಿ. ಎಚ್ ಕೆ ಪಾಟೀಲ್ ಮತಯಾಚನೆ.

‌ಅಕ್ಟೋಬರ್ 28ರಂದು ನಡೆಯುವ ಪಶ್ಚಿಮ ಪದವಿಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಕಾಂಗ್ರೆಸ್ ಮುಖಂಡ, ...

ಬಿಕಾಂ ಫೈನಲ್ ಪರೀಕ್ಷೆಯಲ್ಲಿ ಅಂಜುಮನ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜು ಸಾಧನೆ.

ಭಟ್ಕಳ : ಅಂಜುಮನ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜಿನ ಬಿ.ಕಾಂ ಅಂತಿಮ ವಿದ್ಯಾರ್ಥಿಗಳು ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡುವ ...