ಮೀನುಗಾರಿಕೆ ದೋಣಿ ಪರವಾನಿಗೆ ಮತ್ತು ಡೀಸೆಲ್ ಪಾಸ್‍ಗಾಗಿ ಅರ್ಜಿ ಆಹ್ವಾನ

Source: sonews | By Staff Correspondent | Published on 12th July 2019, 6:06 PM | Coastal News | Don't Miss |

ಕಾರವಾರ: 2019-20ನೇ ಸಾಲಿಗಾಗಿ ಮೀನುಗಾರಿಕಾ ದೋಣಿಗಳಿಗೆ ಪರವನಿಗೆ ಮತ್ತು ಡೀಸೆಲ್ ಪಾಸ್ ಪುಸ್ತಕ ವಿತರಿಸುವ ಸಂಬಂಧ  ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಮೀನುಗಾರಿಕಾ ದೋಣಿ ಮಾಲೀಕರು ಅವರ ಮಾಲೀಕತ್ವದ ಮೀನುಗಾರಿಕಾ ದೋಣಿಯನ್ನು ಮೀನುಗಾರಿಕಾ ಇಲಾಖೆ ಅಧಿಕಾರಿಗಳಿಗೆ ದೋಣಿ ಯೋಗ್ಯವಿರುವ ಬಗ್ಗೆ ಹಾಗೂ ಅದರಲ್ಲಿರಬೇಕಾದ ಸಾಮಗ್ರಿಗಳ ಬಗ್ಗೆ ಪರಿಶೀಲಿಸಲು ಹಾಜರುಪಡಿಸಬೇಕು. ಭೌತಿಕ ಪರಿಶೀಲನೆಗೆ ಹಾಜರುಪಡಿಸದ ದೋಣಿಗಳ ನೋಂದಣೆಯನ್ನು ರದ್ದುಪಡಿಸಲು ಕ್ರಮವಹಿಸಲಾಗುವುದು.    

ಡೀಸೆಲ್ ಪಾಸ್ ಪುಸ್ತಕ ಪಡೆಯಲು ಸಲ್ಲಿಸುವ ಅರ್ಜಿಯೊಂದಿಗೆ ನಿಗದಿತ ಎಲ್ಲಾ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು. ಮೀನುಗಾರಿಕೆ ದೋಣಿಗಳಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿರತಕ್ಕದ್ದು, 20 ಮೀಟರ್‍ಗಿಂತ ಉದ್ದದ ದೋಣಿಗಳಿಗೆ ಎಐಎಸ್, ಡಿಎಟಿ ಮತ್ತು ಜೀವರಕ್ಷಕ ಸಾಧನಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಎಲ್ಲ ದೋಣಿಗಳಲ್ಲಿ ನಿಗದಿತ ಪ್ರಮಾಣದಲ್ಲಿ ಜೀವರಕ್ಷಕ ಲೈಫ್‍ಜಾಕೆಟ್, ಲೈಫ್ ಬಾಯ್ ಇರಬೇಕು. ದೋಣಿಗಳಿಗೆ ಕಲರ್ ಕೋಡಿಂಗ್ ಮಾಡಿರಬೇಕು.

ಆದ್ದರಿಂದ ನಿಗದಿತ ನಮೂನೆಯನ್ನು ಇಲಾಖೆ ಕಚೇರಿಯಿಂದ ಪಡೆದು ಡೀಸೆಲ್ ಪಾಸ್ ಪುಸ್ತಕಕ್ಕಾಗಿ ಅರ್ಜಿ ನೀಡಲು ವಿನಂತಿಸಿದೆ. ನಿಗದಿತ ನಮೂನೆಯ ಅರ್ಜಿ ಮತ್ತು ಅಗತ್ಯವಿರುವ ದಾಖಲೆಗಳ ಮಾಹಿತಿಗಾಗಿ ಮೀನುಗಾರಿಕಾ ಸಹಾಯಕ ನಿರ್ದೇಶಕರು (ಶ್ರೇಣಿ-2)ಕುಮಟಾ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...