ಫಿಶ್ ಸ್ಟೋರೇಜ್ನಲ್ಲಿ ಅಮೋನಿಯಾ ಸೋರಿಕೆ: ಎಪ್ಪತ್ತನಾಲ್ಕು ಕಾರ್ಮಿಕರು ಅಸ್ವಸ್ಥ

Source: so news | Published on 13th August 2019, 12:16 AM | Coastal News | Don't Miss |

 

ಕುಂದಾಪುರ: ಆರಂಭಕ್ಕೆ ಮುನ್ನವೇ ಪ್ರತಿಭಟನೆಗಳನ್ನು ಎದುರಿಸಿದ್ದರೂ ಲೆಕ್ಕಿಸದೇ ನಿರ್ಮಾಣಗೊಂಡಿದ್ದ ಫಿಶ್ ಸ್ಟೋರೇಜ್‌ನಲ್ಲಿ ಅಮೋನಿಯಾ ಲಿಕ್ವಿಡ್ ಸೋರಿಕೆಗೊಂಡ ಹಿನ್ನೆಲೆಯಲ್ಲಿ ಅರವತ್ತೇಳು ಮಹಿಳಾ ಕಾರ್ಮಿಕರು ಹಾಗೂ ಏಳು ಪುರುಷ ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ಸೋಮವಾರ ಬೆಳ್ಳಬೆಳಗ್ಗೆ ಹೆಮ್ಮಾಡಿ ಸಮೀಪದ ಕಟ್‌ಬೆಲ್ತೂರು ಗ್ರಾಮ ಪಂಚಾಯಿತಿ ಸಮೀಪ ದೇವಲ್ಕುಂದಲ್ಲಿರುವ ಮಲ್ಪೆ ಮರೈನ್ ಫಿಶ್ ಸ್ಟೋರೇಜ್ ನಲ್ಲಿ ನಡೆದಿದೆ. ಅಸ್ವಸ್ಥಗೊಂಡವರನ್ನು ಕೂಡಲೇ  ಕುಂದಾಪುರದ ಆದರ್ಶ ಆಸ್ಪತ್ರೆಗೆ ದಾಖಲುಗೊಳಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಅಸ್ವಸ್ಥರಾದ ಕಾರ್ಮಿಕರನ್ನು ಗುರುತಿಸಲಾಗಿದ್ದು, ಮಾಲಾಶ್ರೀ(22), ವಿನುತಾ(24), ದೀಪಾ(20), ಮಂಜುಲಾ(19), ಸವಿತಾ(23), ಭವಾನಿ(24), ವಿದ್ಯಾ(21), ನೇತ್ರಾವತಿ(23), ಅನಿತಾ(23), ಅಮೃತಾ(20), ರೇಖಾ(20), ನಾಗರತ್ನ(19), ಚೈತ್ರಾ(18), ರಾಧಾ(19), ಭಾರತಿ(21), ವಿದ್ಯಾ ಎಂ(20), ಪಲ್ಲವಿ(18), ರೇವತಿ(24), ರೇಖಾ ಕೆ(25), ಜಯಲಕ್ಷ್ಮಿ ಕೆ(23), ವೇದಾ(19), ಜ್ಯೋತಿ(19), ನಾಗರತ್ನ(19), ಸುಪ್ರೀತಾ(24), ಪೂರ್ಣಿಮಾ(19), ರೇವತಿ(24), ಸೀತಾ(26), ನಯನ(23), ರೇವತಿ(23). ಅಶ್ವಿತಾ(20), ಮಂಗಳಾ(19), ಸುಗುಣ(28), ಕಲಾವತಿ(24), ಸುಮುತ್ರ(24), ಲಕ್ಷ್ಮಿ(24), ದೀಪಾ(19), ಲೀಲಾವತಿ(29), ಶಾರದಾ(22), ಶಾರದಾ(23), ಅನಿತಾ(21), ನೇತ್ರಾ(24), ಪ್ರೀತಿ(18), ಗೌರಿ(22), ಪದ್ಮಾವತಿ(25), ಚಂದ್ರಕಲಾ(19), ಜ್ಯೋತಿ(22), ನಿವೇದಿತಾ(20), ನವೀನಾ(24), ಕಲ್ಪನಾ(24), ಶಾಲಿನಿ(18), ಭವಾನಿ ಎನ್(25), ವಿದ್ಯಾ ಬಿ(20), ನಗಿನ ಎಂ ಆರ್(23), ರಂಜಿನಿ ಜಿ(20), ಅನಿತಾ ಬಿ(25), ರೇವತಿ ಜಿ(24), ದೀಪಾ ಹೆಚ್.(24), ಮಂಗಳಾ ಬಿ(24), ನಯನಾ(24), ಸುಮಿದಾ(25), ಶ್ವೇತಾ ಎಸ್(21), ಭವಾನಿ ಎಸ್.(19), ಪೂಜಾ(21), ಗುಲಾಬಿ(26), ಮಹಾದೇವಿ(19), ದಿವ್ಯಾ(24), ನಾಗರತ್ನಾ(20) ಹಾಗೂ ಪುರುಷ ಕಾರ್ಮಿಕರಾದ ರಾಮಚಂದ್ರ (21), ಮನೀಶ್ ಚಾಂದ್(18), ಸುರೇಶ್(21), ಅನಿಲ್(22), ದೀಪಕ್(18), ಸುಮಂತ್(19), ರುಕ್ಷಾ(18) ಎಂದು ಗುರುತಿಸಲಾಗಿದೆ.

ಮೀನು ಸಂಸ್ಕರಣೆಗೆ ಮಂಜುಗಡ್ಡೆಯನ್ನು ಶೀತಲೀಕರಿಸಲು ಅಮೋನಿಯಾ ಲಿಕ್ವಿಡ್ ಬಳಸಲಾಗುತ್ತಿದೆ ಎಂದು ತಿಳಿದು ಬಂದಿದ್ದು, ಸೋಮವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ಸೋರಿಕೆಗೊಂಡಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಎರಡು ಅಗ್ನಿಶಾಮಕ ದಳದ ತಂಡ ಆಗಮಿಸಿದ್ದು, ಅಮೋನಿಯಾ ಲಿಕ್ವಿಡ್ ನಿಯಂತ್ರಣಕ್ಕೆ ನಿರಂತರವಾಗಿ ಪ್ರಯತ್ನಿಸುತ್ತಿವೆ. ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಉಡುಪಿ ಎಸ್ಪಿ ನಿಶಾ ಜೇಮ್ಸ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.  ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಠಾಣೆ ಕಂಡ್ಲೂರು ಪೊಲಿಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಕುಂದಾಪುರ ಉಪವಿಭಾಗಾಧಿಕಾರಿ ಮಧುಕೇಶ್ವರ್ ಹಾಗೂ ತಹಸೀಲ್ದಾರ್ ತಿಪ್ಪೇಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.

ಎರಡು ವರ್ಷದ ಹಿಂದೆ ಆರಂಭಗೊಂಡಿರುವ ಮಲ್ಪೆ ಮರೈನ್ ಫಿಶ್ ಸ್ಟೋರೇಜ್ ನಿರ್ಮಾಣದ ಹಂತದಲ್ಲಿಯೇ ಗ್ರಾಮಸ್ಥರ ಪ್ರತಿಭಟನೆಗೆ ಕಾರಣವಾಗಿತ್ತು. ಆದರೆ ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಈ ಕಾರ್ಖಾನೆ ತಲೆಯೆತ್ತಿತ್ತು. ಇದೀಗ ಬೆಳ್ಳಂಬೆಳಗ್ಗೆ ಅಮೋನಿಯಾ ಲಿಕ್ವಿಡ್ 
ಸೋರಿಕೆಯಿಂದಾಗಿ ಮಹಿಳಾ ಕಾರ್ಮಿಕರು ಆಸ್ವಸ್ಥಗೊಂಡಿದ್ದು, ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...