ನರೇಂದ್ರ ಗ್ರಾಮದ ರೈತನಿಗೆ ತಿದ್ದುಪಡಿಗೊಂಡ ಪಹಣಿ ವಿತರಿಸಿದ ಧಾರವಾಡ ತಹಶೀಲ್ದಾರ

Source: so news | Published on 19th November 2019, 11:58 PM | State News | Don't Miss |

ಧಾರವಾಡ: ಧಾರವಾಡ ತಾಲೂಕಿನ ಗರಗ ಹೋಬಳಿಯ ನರೇಂದ್ರ ಗ್ರಾಮದ ಸರ್ವೇ ನಂ: 86/1 ಕ್ಷೇತ್ರ 07ಎ-17ಗುಂಟೆ ಜಮೀನಿನ ಪಹಣಿಯಲ್ಲಿ ರೂ. 24,44,030ಗಳ ಭೋಜಾ ಧಾಖಲಾಗಿದ್ದನ್ನು ಸರಿಪಡಿಸಿ ಇಂದು ಬೆಳಿಗ್ಗೆ ರೈತ ನಾಗಪ್ಪ ಚನ್ನಬಸಪ್ಪಾ ಮೋರಬದ ಅವರಿಗೆ ಧಾರವಾಡ ತಹಶೀಲ್ದಾರ ಪ್ರಕಾಶ ಕುದರಿ ತಿದ್ದುಪಡಿ ಮಾಡಿದ ಪಹಣಿ ಪತ್ರಿಕೆಯನ್ನು ನೀಡಿದರು.

ಸದರಿ ಜಮೀನಿನ ಮೂಲ ಕ್ಷೇತ್ರ 07ಎ-22 ಗುಂಟೆ ಆಗಿದ್ದು, ಮೂಲ ಮಾಲಿಕರಾದ ನಾಗಪ್ಪ ಚನ್ನಬಸಪ್ಪ ಮೊರಬ ಅವರು ಈ ಜಮೀನಿನ ಪೈಕಿ 05ಗುಂಟೆ ಜಮೀನನ್ನು ಮಂಜುಳಾ ಪಕ್ಕಿರಪ್ಪ ಭಜಂತ್ರಿ ಇವರಿಗೆ ದಿನಾಂಕ: 29/06/2013 ರಂದು ಖರೀದಿ ಕೊಟ್ಟಿರುತ್ತಾರೆ. ಖರೀದಿ ಪತ್ರದ ಪ್ರಕಾರ ಖರೀದಿದಾರರ ಹೆಸರು ಪಹಣಿಯಲ್ಲಿ ದಾಖಲಾಗಿ, ಪಹಣಿಯು ಪೋಡಿಗಾಗಿ ಮೋಜಣಿ ಇಲಾಖೆಯಲ್ಲಿ (ಐಎಂಪಿ) ಪ್ರಕರಣ ದಾಖಲಾಗಿರುತ್ತದೆ. ಇದರಿಂದಾಗಿ ಸದರ ಜಮೀನಿನ ಪಹಣಿ ಪತ್ರಿಕೆಯು ಪೋಡಿಯಾಗುವವರೆಗೂ ಜಂಟಿ ಮಾಲಿಕತ್ವದ್ದೇ ಆಗಿರುತ್ತದೆ.

ಈ 05ಗುಂಟೆ ಜಮೀನನ ಮಾಲಿಕರಾದ ಮಂಜುಳಾ ಪಕ್ಕಿರಪ್ಪ ಭಜಂತ್ರಿ ಇವರು ರೂ. 24,44,030 ಗಳ ಸಾಲವನ್ನು ಎಸ್,ಬಿ,ಎಮ್ ಬ್ಯಾಂಕ ಹುಬ್ಬಳ್ಳಿ ಇವರಲ್ಲಿ ಪಡೆದುಕೊಂಡಿದ್ದು, ಸಾಲದ ಬೋಜಾ ಕುರಿತು ಉಪ ನೋಂದಾಣಾಧಿಕಾರಿಗಳ ಕಛೇರಿ ಧಾರವಾಡ ಇವರಲ್ಲಿ ಮಾರ್ಟಗೇಜ್ ಡಿಡ್ ಆಗಿರುತ್ತದೆ.
ಆದರೆ ಸದರ ಮಾರ್ಟಗೇಜ್ ಡಿಡ್ ಖರೀದಿ ಪೂರ್ವದಲ್ಲಿದ್ದಂತಹ ಅಖಂಡ ಜಮೀನು 07ಎಕರೆ 22 ಗುಂಟೆ ಇರುವಾಗಲೇ ಆಗಿರುತ್ತದೆ. ಖರೀದಿ ಮತ್ತು ಫೋಡಿ ವಹಿವಾಟು ದಿನಾಂಕ: 29-05-2014 ರಂದು ಪ್ರತ್ಯೇಖ ಪಹಣಿಗಳಾಗಿ ಹಕ್ಕು ಬದಲಾವಣೆಗೊಂಡಿರುತ್ತವೆ,

ಮಾರ್ಟಗೇಜ್ ಡಿಡ್ ಕಾವೇರಿ ತಂತ್ರಾAಶದ ಮೂಲಕ ಕಾರ್ಯಾಲಯದ ಗಣಕೀಕರಣ ವಿಭಾಗದಲ್ಲಿ ಭೋಜಾ ಧಾಖಲಿಸಲು ಬಂದಾಗ, ಈ ಸಂದರ್ಭದಲ್ಲಿ ಪಹಣಿಯು ಜಂಟಿ ಮಾಲಿಕತ್ವ ಹೊಂದಿರುವುದರಿAದ ಪಹಣಿಯ ಕಾಲಂ ನಂ 11ರಲ್ಲಿ ಭೋಜಾ ಧಾಖಲಾಗಿರುತ್ತದೆ. ಆದರೆ ಸದರ ಜಮೀನು ಪೋಡಿ ಆದ ಸಂದರ್ಬದಲ್ಲಿ ಭೋಜಾವು ಮೂಲ ಮಾಲಿಕರಾದ ನಾಗಪ್ಪ ಚನ್ನಬಸಪ್ಪ ಮೊರಬ ಇವರ ಜಮೀನಾದ 07ಎಕರೆ 17 ಗುಂಟೆ ಜಮೀನಿನ ಪಹಣಿಯ ಕಾಲಂ ನಂಬರ್ 11 ರಲ್ಲಿ ಹಾಗೇ ಮುಂದುವರೆದಿರುತ್ತದೆ.
ಸದರಿ ವಿಷಯವು ಕಛೇರಿಯ ಗಮನಕ್ಕೆ ಬಂದಾಗ ಬೋಜಾ ದಾಖಲಿಸಿರುವುದನ್ನು ನಿಯಮಾನುಸಾರ ಜಮೀನಿನ ಮಾಲಿಕರಾದ ನಾಗಪ್ಪ ಚನ್ನಬಸಪ್ಪ ಮೊರಬ ಇವರ ಬ್ಲಾಕ್ ನಂ 86/1 ರ ಕ್ಷೇತ್ರ 07ಎ-17 ಗುಂಟೆಯ ಪಹಣಿಯಿಂದ ತೆಗೆದು, ಸಾಲ ಪಡೆದ ಮಾಲಿಕರಾದ ಮಂಜುಳಾ ಪಕ್ಕಿರಪ್ಪ ಭಜಂತ್ರಿ ಇವರ ಜಮೀನಾದ ಬ್ಲಾಕ್ ನಂ 86/2 0-05 ಗುಂಟೆ ನೇದ್ದರ ಪಹಣಿಗೆ ಬೋಜಾ ದಾಖಲಿಸಿ ಸರಿಪಡಿಸಿದ ಪಹಣಿಯನ್ನು ವಿತರಿಸಲಾಗಿದೆ.

ಈ ಸಂದರ್ಭದಲ್ಲಿ ಕಚೇರಿ ಶಿರಸ್ತೆದಾರ ಪಿ.ಎಸ್.ಪೂಜಾರ, ನರಂದ್ರ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ರಮೇಶ ಮೆದಾರ ಅವರು ಉಪಸ್ಥಿತರಿದ್ದರು.

Read These Next